ಹೈದರಾಬಾದ್: ಅನ್ವಾರ್ ಉಲೂಂ ಕಾಲೇಜು, ಹೈದರಾಬಾದ್ನಲ್ಲಿ ನಡೆದ ಎಎಂಪಿ ನ್ಯಾಷನಲ್ ಟ್ಯಾಲೆಂಟ್ ಸರ್ಚ್ 2025 ಕಾರ್ಯಕ್ರಮದ ಭವ್ಯ ಉದ್ಘಾಟನೆ ಹಾಗೂ ಎಎಂಪಿ ನ್ಯಾಷನಲ್ ಅವಾರ್ಡೀಸ್ 2025ರ ಸನ್ಮಾನ ಸಮಾರಂಭದಲ್ಲಿ ಚಿತ್ತಾಪುರದ ಪ್ರಸಿದ್ಧ ಸಮಾಜ ಸೇವಕ ಹಾಗೂ ಅಸಿಫ್ ಮೆಡಿಕಲ್‌ನ ಮಾಲೀಕರಾದ ಸಯ್ಯದ್ ನಿಜಾಮುದ್ದೀನ್ ಚಿಸ್ಟಿ ಅವರಿಗೆ ರಾಷ್ಟ್ರೀಯ ಮಟ್ಟದ ‘ಚೇಂಜ್‌ಮೇಕರ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಗೌರವವನ್ನು ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಷನಲ್ಸ್ (AMP) ವತಿಯಿಂದ ಶಿಕ್ಷಣ, ಸಮಾಜ ಸೇವೆ ಮತ್ತು ಕಲ್ಯಾಣ ಕ್ಷೇತ್ರಗಳಲ್ಲಿ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಪ್ರಮುಖ ಅತಿಥಿಗಳು:
• ಮೌಲಾನಾ ಖಾಲಿದ್ ಸೈಫುಲ್ಲಾ ರೆಹ್ಮಾನಿ ಸಾಬ್ – ಅಧ್ಯಕ್ಷರು, ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್
• ಮೌಲಾನಾ ಖಾಲಿದ್ ರಶೀದ್ ಫಿರಂಗಿ ಸಾಬ್ – ಪ್ರಸಿದ್ಧ ಇಸ್ಲಾಮಿಕ್ ಪಂಡಿತರು ಹಾಗೂ ಶಾಹಿ ಇಮಾಮ್, ಲಖ್ನೋ
• ಜನಾಬ್ ಔಸಾಫ್ ಸಯೀದ್ ಸಾಬ್ – ಭಾರತದ ಪೂರ್ವ ರಾಯಭಾರಿ (ಮಿಡಲ್ ಈಸ್ಟ್)
• ಜನಾಬ್ ಆಮಿರ್ ಇದ್ರಿಸ್ಸಿ ಸಾಬ್ – ಅಧ್ಯಕ್ಷರು, ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಷನಲ್ಸ್ (AMP)
ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಪಂಡಿತರು, ವೃತ್ತಿಪರರು ಹಾಗೂ ಸಮಾಜಸೇವಕರು ಪಾಲ್ಗೊಂಡಿದ್ದರು 🇮🇳.
ಪ್ರಶಸ್ತಿ ಸ್ವೀಕರಿಸಿದ ನಂತರ ಸಯ್ಯದ್ ನಿಜಾಮುದ್ದೀನ್ ಚಿಸ್ಟಿ (ಚಿತ್ತಾಪುರ) ಅವರು ಎಎಂಪಿಗೆ ಧನ್ಯವಾದ ತಿಳಿಸಿ, ಶಿಕ್ಷಣ, ಸಬಲೀಕರಣ ಮತ್ತು ಸಾಮಾಜಿಕ ಕಲ್ಯಾಣದ ಮೂಲಕ ಮಾನವಸೇವೆಯನ್ನು ಮುಂದುವರಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು.