ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೊದಲನೆಯದಾಗಿ ಭಾರತ ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧಿಸಲಾಯಿತು. ಮತ್ತು ವಿದ್ಯಾರ್ಥಿಗಳು ಭಾಷಣ ಹಾಗೂ ನೃತ್ಯವನ್ನು ಮಾಡಿಸಲಾಯಿತು, ಇದೇ ಸಂದರ್ಭದಲ್ಲಿ ಟಿ ಇ ಟಿ ನಲ್ಲಿ ಉತ್ತೀರ್ಣರಾದ ಮಹೇಶ ಚಲವಾದಿ ಅಗತೀರ್ಥ, ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ರವಿಕುಮಾರ್ ಎಸ್ ಚಲವಾದಿ, ಸಂಗಮ್ಮ ಮೇಲಿನಮನಿ, ಇವರಿಗೆ ಸನ್ಮಾನವನ್ನು ಮಾಡಲಾಯಿತು. ಸ್ನೇಹದ ಬಳಗದ ವತಿಯಿಂದ ( ಚಲವಾದಿ ನೌಕರರ ಬಳಗ ) ಸನ್ಮಾನ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು, ವಿತರಿಸಲಾಯಿತು, ಅದೇ ರೀತಿಯಾಗಿ ನೆರೆಯ ಗ್ರಾಮದವರಾದ ಚಂದಾ ಹುಸೇನ್ ಮಕಂದಾರ್ ಜೆಕೆ ಕನ್ನಡ ನ್ಯೂಸ್ ವರದಿಗಾರರು, ಭ್ರಷ್ಟಾಚಾರ ವಿರೋಧಿ ದಳದ ಜಿಲ್ಲಾ ಕಾರ್ಯದರ್ಶಿಯಾದ ನಿಜಲಿಂಗಪ್ಪ ಅಗ್ನಿ, ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಸಾಹೇಬ್ ಗೌಡ ಹೊಸಮನಿ ಅಗತೀರ್ಥ, ಶಿವಣ್ಣ ಡಿ ಪೂಜಾರಿ ಅಗತೀರ್ಥ ಗ್ರಾಮ ಪಂಚಾಯತಿಯ ಕರ ವಸಲಿಗರರು ಗುರುಲಿಂಗಪ್ಪ ಪೂಜಾರಿ ಅಗತೀರ್ಥ, ಮಾಜಿ ಗ್ರಾಮ್ ಪಂಚಾಯತ್ ಸದಸ್ಯರಾದ ಚಿದಾನಂದ ಎಸ್ ಪೂಜಾರಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಿದ್ದಪ್ಪ ಬಿ ದೊಡ್ಮನಿ, ಇವರಿಗೆ ಸ್ನೇಹದ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಚಂದಾ ಹುಸೇನ್ ಅವರು ಅನಿಸಿಕೆಯನ್ನು ವ್ಯಕ್ತಪಡಿಸಿದರು, ಹಾಗೂ ಊರಿನ ಹಿರಿಯರಾದ ಸಾಹೇಬ್ ಗೌಡ ಹೊಸಮನಿ ಅವರು ಅಂಬೇಡ್ಕರ್ ಅವರನ್ನು ಕುರಿತು ಅನಿಸಿಕೆಯನ್ನು ವ್ಯಕ್ತಪಡಿಸಿದರು, ಮಹೇಶ್ ಚಲವಾದಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಅವರ ಜೀವನ ಹಾಗೂ ಅವರ ಸಾಧನೆಗಳನ್ನು ಕುರಿತು ವಿವರವಾಗಿ ಅನಿಸಿಕೆಯನ್ನು ವ್ಯಕ್ತಪಡಿಸಿದರು, ಇದೇ ಸಂದರ್ಭದಲ್ಲಿ ಸಾಹೇಬಗೌಡ ಹೊಸಮನಿ, ಶಿವಣ್ಣ ಡಿ ಪೂಜಾರಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಿ ಪ್ರೋತ್ಸಾಹಿಸಿದರು, ಮಹೇಶ್ ಚಲವಾದಿ ಅವರು ನಿರೂಪಿಸಿದರು, ಭೋಜಪ್ಪ ಚಲವಾದಿ ಅವರು ವಂದಿಸಿದರು. ಮತ್ತು ಸ್ನೇಹ ಬಳಗದ ಎಲ್ಲಾ ಸದಸ್ಯರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು, ಹಾಗೂ ಭೀಮ ಅನುಯಾಯಿಗಳಾದ ಹಿರಿಯರು ಹಾಗೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ : ಸಿಎಂ ಮಕಾಂದರ್