ಘಟಪ್ರಭಾ ಪುರಸಭೆಯ ವತಿಯಿಂದ ಪಾಂಡುರಂಗ ಗುಡಿಯ ಹತ್ತಿರದ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಿರುವ ವಾಣಿಜ್ಯ ಮಳಿಗೆಗಳ ಅಡಿಗಲ್ಲು ಪೂಜಾ ಸಮಾರಂಭದಲ್ಲಿ ಗೋಕಾಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯಶ್ರೀ ರಮೇಶ್ ಜಾರಕಿಹೊಳಿ ಅವರ ಸೂಚನೆ ಯಂತೆ ಮತ್ತು ಮಾನ್ಯಶ್ರೀ ಅಂಬಿರಾವ ಪಾಟೀಲ ಅವರ ಸೂಚನೆಯ ಮೇರೆಗೆ ಶಾಸಕರ ಆಪ್ತ ಸಹಾಯಕರಾದ ಶ್ರೀ ಸುರೇಶ ಸನದಿ ಅವರು ಪೂಜೆ ನೆರವೇರಿಸಿದರು ಇದೇ ಸಂದರ್ಭದಲ್ಲಿ ಸುರೇಶ ಸನದಿ, ತುಕಾರಾಮ ಕಾಗಲ್, ಮಡ್ಡೆಪ್ಪಾ ತೋಳಿನವರ ಅವರನ್ನು ಘಟಪ್ರಭಾ ಪುರಸಭೆ, ಮತ್ತು ನಾಗರಿಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿಗಳಾದ ಶ್ರೀಮತಿ ಎಂ ಎಸ್ ಪಾಟೀಲ ಹಿರಿಯರಾದ ಡಿ ಎಂ ದಳವಾಯಿ, ಸುರೇಶ ಪಾಟೀಲ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ.ಕೆಂಪಣ್ಣ ಚೌಕಶಿ, ಸುರೇಶ ಕಾಡದವರ, ಸುಧೀರ ಜೋಡಟ್ಟಿ ಮಲ್ಲಿಕಾರ್ಜುನ ತುಕ್ಕಾನಟ್ಟಿ ಸಿದ್ರಾಮಯ್ಯ ಹಿರೇಮಠ, ಮಲ್ಲು ಕೋಳಿ, ಪ್ರವೀಣ್ ಮಟಗಾರ, ಮಾರುತಿ ಹುಕ್ಕೇರಿ, ಚಿರಾಕಲಿಶಾ ಮಕಾನದಾರ, ಸಲೀಮ್ ಕಬ್ಬೂರ ಕಲ್ಲಪ್ಪಾ ಕಾಡದವರ ಕಾಡಪ್ಪಾ ಕರೋಶಿ, ಲಕ್ಷ್ಮಣ ಮೇತ್ರಿ, ಗಣುಸಿಂಗ ರಜಪೂತ ದುಂಡಪ್ಪಾ ಮೇತ್ರಿ ಸುರೇಶ ಮುಸಲ್ಮಾರಿ, ಕೆಂಪಣ್ಣ ಚಿಂಚಲಿ, ಯಲ್ಲಪ್ಪ ಅಟ್ಟಿಮಿಟ್ಟಿ, ಪುರಸಭೆಯ ಸಿಬ್ಬಂದಿಗಳು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಸದಾನಂದ ಎಚ್