ಬೆಂಗಳೂರು : ಏ, 16, ಇಂದು ಬೆಂಗಳೂರಿನ ಗೃಹ ಸಚಿವರ ನಿವಾಸದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಪಟ್ಟಣಕ್ಕೆ ಅಗ್ನಿಶಾಮಕಾದಳ ಠಾಣೆ ಮಂಜೂರಾತಿಗಾಗಿ ಕರ್ನಾಟಕ ಸರ್ಕಾರ ಗೃಹ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಕರ್ನಾಟಕ ಗ್ರಾಮೀಣ ಪ್ರದೇಶ ಅಭಿವೃದ್ಧಿ ಅಭಿವೃದ್ಧಿ ಸಮಿತಿಯ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಆಲಂ ಗನಿ ಗಬ್ಬುರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಜ್ ಜಗ್ಲಿ ಅವರು ಮನವಿ ಸಲ್ಲಿಸಿದರು.
ಬೆಂಗಳೂರು ನಗರದ ಸದಾಶಿವ ನಗರದ ಗೃಹ ಗೃಹ ಕಚೇರಿಯಲ್ಲಿ ಸಚಿವರಾದ ಡಾ ಜಿ ಪರಮೇಶ್ವರ್ ರವರಿಗೆ ಕರ್ನಾಟಕ ಗ್ರಾಮೀಣ ಪ್ರದೇಶ ಅಭಿರುದ್ದಿ ಸಮಿತಿ ವತಿಯಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿ ಕೇಂದ್ರವು ಸುಮಾರು 40 ರಿಂದ 45 ಹಳ್ಳಿಗಳನ್ನ ಒಳಗೊಂಡ ಬಹುದೊಡ್ಡ ಪಟ್ಟಣವಾಗಿದ್ದು ಇದರ ಜೊತೆಗೆ ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ಕಂದಾಯ ಸಂದಾಯ ಮಾಡುವ ತಾಲೂಕಿನ ಹೋಬಳಿ ಕೇಂದ್ರವಾಗಿದೆ ದೇವದುರ್ಗ ತಾಲ್ಲೂಕನಲ್ಲಿ ಕೇವಲ ತಾಲೂಕು ಕೇಂದ್ರದಲ್ಲಿ ಒಂದು ಹಾಗೂ ಅರಿಕೇರ ಹೋಬಳಿ ಕೇಂದ್ರದಲ್ಲಿ ಹೊಂದಿದ್ದು ಎರಡು ಅಗ್ನಿಶಾಮಕ ಕೇಂದ್ರಗಳು ಗಬ್ಬೂರು ಹೋಬಳಿಯ ಕೇಂದ್ರದಿಂದ ಸುಮಾರು 20 ರಿಂದ 30 ಕಿಲೋಮೀಟರ್ ಅಂತರವಿತ್ತು ಅನಾಹುತ ಸಂಭವಿಸಿದರೆ ಸಮಯ ವ್ಯರ್ಥವಾಗುವ ಅವಕಾಶಗಳಿದ್ದು ಆದ್ದರಿಂದ ತಾವುಗಳು ಪರಿಶೀಲಿಸಿ ಸೂಕ್ತ ನಿರ್ಧಾರದೊಂದಿಗೆ ಅವಶ್ಯಕತೆ ಇರುವ ಗಬ್ಬೂರು ಪಟ್ಟಣಕ್ಕೆ ಅಗ್ನಿಶಾಮಕ ಠಾಣಾ ಮಂಜೂರಾತಿ ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಕರ್ನಾಟಕ ಗ್ರಾಮೀಣ ಪ್ರದೇಶ ಅಭಿರುದ್ದಿ ಸಮಿತಿ ಗೃಹ ಸಚಿವರಾದ ಪರಮೇಶ್ವರ್ ಸಾಹೇಬರಿಗೆ ಮನವಿಯನ್ನು ಸಲ್ಲಿಸಿರುತ್ತಾರೆ
ಆಲಂಗನಿ ಗಬ್ಬೂರು ಶಿವರಾಜ್ ಜಗ್ಲಿ ಗಬ್ಬೂರು ರವರು ಉಪಸ್ಥಿತರಿದ್ದರು.
ಹೇಳಿಕೆ : ಬೆಂಗಳೂರು ನಗರಕ್ಕೆ ಭೇಟಿನೀಡಿದ ಸಂಧರ್ಭದಲ್ಲಿ ಮಾನ್ಯ ಗೃಹ ಸಚಿವರ ಗೃಹ ಕಚೇರಿಯಲ್ಲಿ ಸಚಿವರಿಗೆ ಭೇಟಿಯಾಗಿ ದೇವದುರ್ಗ ತಾಲೂಕು ಗಬ್ಬೂರು ಗ್ರಾಮಕ್ಕೆ ಅವಶ್ಯಕತೆ ಇರುವ ಅಗ್ನಿಶಾಮಕ ಠಾಣೆಯ ಅವಶ್ಯಕತೆ ಇದ್ದು ನಮಗೆ ಮಂಜೂರು ಮಾಡಲು ಮನವಿ ಸಲ್ಲಿಸಿದ್ದೇವೆ ಸಚಿವರು ತಮ್ಮ ಅರ್ಜಿಯನ್ನು ಪರಿಶೀಲಿಸಿ ಅವಶ್ಯಕತೆ ಇದ್ದಲ್ಲಿ ಮಂಜೂರಾತಿ ಮಾಡಿಕೊಡಲು ಆಶ್ವಾಸನೆ ಕೊಟ್ಟಿರುತ್ತಾರೆ, – ಶಿವರಾಜ್ ಜಗ್ಲಿ ಪ್ರಧಾನ ಕಾರ್ಯದರ್ಶಿಗಳು ಕಾ, ಗ್ರಾ, ಪ್ರ, ಅಭಿರುದ್ದಿ ಸಮಿತಿ