ಬೆಳಗಾವಿ : ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅಕ್ಕಾ ಜಾರಕಿಹೊಳಿ ಅವರು ಬೆಳಗಾವಿ ನಗರದ ಕುಮಾರ್ ಗಂಧರ್ವ ಕಲಾಮಂದಿರದಲ್ಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ನೌಕರರ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಲಿಕೆಯು ಮಕ್ಕಳ ಭವಿಷ್ಯ ವನ್ನು ರೋಪಿಸುತ್ತದೆ ಸರ್ಕಾರಿ ನೌಕರರ ಮಕ್ಕಳು ಬೆಳೆದು ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡುವ ಭಾವನೆಗಳು ಬೆಳೆದು ನಮ್ಮ ಮಕ್ಕಳ ಬೆಳೆದರೆ ನಮಗೆ ಹೆಮ್ಮೆಯ ವಿಷಯ ವಾಗಿದೆ ಮಕ್ಕಳು ಬೆಳೆಯಲ್ಲೂ ನಮ್ಮ ನಿಮ್ಮೆಲರ ಆಶೀರ್ವಾದ ಅಗತ್ಯ ವಾಗಿರುತ್ತದೆ ಮಕ್ಕಳಿಗೆ ವಿದ್ಯೆ ಯನ್ನು ನೀಡುವ ಗುರುಗಳಿಗೆ ಧನ್ಯವಾದಗಳನು ತಿಳಿಸಿ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿ ಅವರ ಬೆಳವಣಿಗೆ ಸಹಾಯ ಮಾಡುವದು ನಮ್ಮ ಕರ್ತವ್ಯ ಆಗಿರುತ್ತದೆ
ಎಂದು ತಿಳಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ತೋಂಟದಾರ್ಯ ಮಠದ ಶ್ರೀ ನಿಜಗುಣ ಮಹಾಸ್ವಾಮಿಗಳು, ಶಾಸಕ ಶ್ರೀ ಆಸೀಫ್ ಸೇಠ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀ ಸಿ.ಎಸ್. ಷಡಾಕ್ಷರಿ ಹಾಗೂ ಜಿಲ್ಲೆಯ ಪ್ರಮುಖ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು ಮತ್ತೀತರು ಉಷ್ಠಿತರಿದ್ದರು.
ವರದಿ : ಸದಾನಂದ ಎಂ