ಸರಾಯಿ ಬಂದ್ ಮಾಡಲು ನಾರಿಯರಿಂದ ಗ್ರಾಮ ಪಂಚಾಯತಿ ಮುತ್ತಿಗೆ

ಹುಕ್ಕೇರಿ : ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತಿ ಕಛೇರಿಗೆ ಮುತ್ತಿಗೆ ಹಾಕಿ ಮಹಿಳೆಯರ ಪ್ರತಿಭಟನೆ.ಹೆಬ್ಬಾಳ ಗ್ರಾಮದಲ್ಲಿ ಒಟ್ಟು ಎಂಟು ಜನ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾರೆ.ಮನೆಯಲ್ಲಿ ಇದ್ದ ಗ್ಯಾಸ್ ಸಿಲಿಂಡರ್ ಟ್ಯಾಂಕ್,ಅಕ್ಕಿ , ಸೈಕಲ್.ಮನೆಯಲ್ಲಿ ಇದ್ದ ಇತರೆ ವಸ್ತುಗಳನ್ನು ಮಾರಾಟ ಮಾಡಿ ಸರಾಯಿ ಚಟಕ್ಕೆ ಬಿದ್ದಿದ್ದು ನಮ್ಮ ಮಕ್ಕಳು ಮತ್ತು ಗಂಡoದಿರು ಎಂದು ಮಹಿಳೆಯರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮಹಿಳೆಯರಿಗೆ ಬರುವ ಸರ್ಕಾರದ ಎರಡು ಸಾವಿರ ಹಣ ಕೂಡ ಈ ಕುಡಕರಿಗೆ ಸಾಕಾಗುತ್ತಿಲ್ಲ.ಇದು ಹೀಗೆ ಮುಂದುವರೆದರೆ ಸ್ವತಾ ನಾವೇ ಮಹಿಳೆಯರು ಸಂತೆ ಬುಟ್ಟಿಯಲ್ಲಿ ಸರಾಯಿ ಪ್ಯಾಕೆಟ್ ಇಟ್ಟುಕೊಂಡು ಹೆಬ್ಬಾಳ ಮುಖ್ಯ ಬೀದಿಯಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಬಕಾರಿ ಅಧಿಕಾರಿಗಳಿಗೂ ಹಾಗೂ ಪೊಲೀಸ್ ಅಧಿಕಾರಿಗಳಿಗೂ ಕೂಡ ಹಲವಾರು ಬಾರಿ ಮನವಿ ಮಾಡಿಕೊಂಡರು ಯಾವುದೇ ರೀತಿ ಪ್ರಯೋಜನವಾಗಿಲ್ಲ ಇದಕ್ಕೆ ಕಾರಣ ಏನು ಎಂಬುವುದು ಮಹಿಳೆಯರ ಪ್ರಶ್ನೆ? ವರದಿಗಾರರು ವಿಡಿಯೋ ಮಾಡಲು ಮುಂದಾದಾಗ ಪೋಲಿಸ್ ರಿಗೆ ಪೋನ್ ಮಾಡತಿವಿ ಅಬಕಾರಿ ಯವರಿಗೆ ಪೋನ್ ಮಾಡತಿವಿ ಅನ್ನುತ್ತಾರೆ ಈ ಸರಾಯಿ ಮಾರಾಟ ಮಾರುವುರು ಇಲ್ಲಿ ಎಲ್ಲವೂ ಊಲ್ಟಾ ನಡೆಯುತ್ತಿದೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮದ ಸದಸ್ಯರನ್ನು ಕರೆಸಿ ಎಚ್ಚರಿಕೆ ಮಾಡಿದ ಮಹಿಳೆಯರು ಇದೇ ಸಂದರ್ಭದಲ್ಲಿ ಓರ್ವ ಮಹಿಳೆ ಕಣ್ಣೀರಿಟ್ಟು ಸಾರಾಯಿ ಮಾರಾಟ ಮಾಡುವರ ವಿರುದ್ಧ ಹಿಡಿ ಶಾಪ ಹಾಕಿದ ಪ್ರಸಂಗ ಒಂದು ಕಂಡು ಬಂತು. ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೆಬ್ಬಾಳ ಗ್ರಾಮದಲ್ಲಿ ಇಂದಿನಿಂದ ಸರಾಯಿ ಮಾರಾಟ ಮಾಡುವುದು ಬಂದ್ ಮಾಡಬೇಕು ಎಂದು ಹೇಳಿದ್ದಾರೆ.

ವರದಿ : ಸದಾನಂದ ಎಂ

error: Content is protected !!