ಹುಕ್ಕೇರಿ : ಇಂದು ರಕ್ಷಿ ಗ್ರಾಮದ ರಕ್ಷಮ್ಮಾ ದೇವಸ್ಥಾನದಲ್ಲಿ ಶ್ರೀ ಮಂಜುನಾಥ್ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತಿಯನ್ನು ಆಚರಿಸಲಾಯಿತು.
ಭಗವಾನ್ ಶ್ರೀ ಕೃಷ್ಣ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಪೂಜೆಯನ್ನು ಸಲ್ಲಿಸಿ ಮಂತ್ರ ಉಚ್ಚಾರಣೆಯಿಂದ ವಿಶೇಷವಾಗಿ ಪೂಜೆಯನ್ನು ನೇರವೇರಿಸಲಾಯಿತು.
ಶ್ರಾವಣ ಮಾಸದಲ್ಲಿ ಭಗವಾನ ಶ್ರೀ ಕೃಷ್ಣ ಜಯಂತಿಯನ್ನು ರಕ್ಷಿ ಗ್ರಾಮದಲ್ಲಿ ಅದ್ದೂರಿಯಾಗಿ ಕುಂಭ ಮೇಳ ಹಾಗೂ ಗಾನ್ ನೃತ್ಯದೊಂದಿಗೆ ಭಕ್ತಿ ಭಾವನೆಯಿಂದ ಮಹಿಳೆಯರು ನಂದ ಗೋಕುಲ್ ಶ್ರೀ ಕೃಷ್ಣ ಮೆರವಣಿಗೆಯಲ್ಲಿ ಭಾಗವಹಿಸಿದರು.
ಪ್ರತಿ ವರ್ಷದಂತೆ ಈ ವರ್ಷವು ಕೂಡ ಎಲ್ಲ ಹಿರಿಯರು ಹಾಗೂ ಕಿರಿಯರು ಒಟ್ಟುಗೂಡಿ ಅತ್ಯಂತ ಸರಳವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತಿ ವಿಜೃಂಭಣೆಯಿಂದ ನಡೆಸಲಾಯಿತು ಮತ್ತು ಒಂದು ಒಳ್ಳೆಯ ಶ್ರಾವಣ ಮಾಸದ ಜನ್ಮಾಷ್ಠಮಿಯ ದಿನ ಶ್ರೀ ಕೃಷ್ಣ ನಗರ ನಾಮಫಲಕವನ್ನು ಉದ್ಘಾಟನಾ ಸಮಾರಂಭವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಶಿವಾನಂದ ಪಾಟೀಲ್, ಶಂಕರ್ ಪಾಟೀಲ್, ಮಹೇಶ್ ಬಡಗಾಂವಿ, ವಿಠ್ಠಲ್ ಪಾಟೀಲ್, ರಕ್ಷಪ್ಪಾ ಪಾಟೀಲ್, ಬಸವರಾಜ್ ಪಾಟೀಲ್ ಹಾಗೂ ಗ್ರಾಮದ ಗುರು ಹಿರಿಯರು ಮತ್ತು ಕಿರಿಯರು ಉಪಸ್ಥಿತರಿದ್ದರು.