ವಯಸ್ಕರ ಬುದ್ಧಿಮಾಂದ್ಯನನ್ನು ಅವರ ಕುಟುಂಬಕ್ಕೆ ಒಪ್ಪಿಸಿದ ಕಾರುಣ್ಯಾಶ್ರಮ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ಮಹಾಲಿಂಗಯ್ಯ ತಂ/ ದಿ.ದುಂಡಯ್ಯ ಮಠಪತಿ ವಯಸ್ಸು-30 ಅವರಿಗೆ ಯಾರೂ ಇಲ್ಲದ ಕಾರಣ ಅಲ್ಲಿನ ಸ್ಥಳೀಯರ ಮಾಹಿತಿಯ ಮೇರೆಗೆ ಅಲ್ಲಿಂದ ಕರೆದುಕೊಂಡು ಬಂದು ಆಶ್ರಯ ನೀಡಲಾಗಿತ್ತು. ಆತನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಸಮಯದಲ್ಲಿ ಅವರ ಸಂಬಂಧಿಗಳು ಸವದತ್ತಿ ತಾಲೂಕಿನ ಕಡಬಿ ಶಿವಪುರ ಗ್ರಾಮದಲ್ಲಿ ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಅವರನ್ನು ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಸಂಪರ್ಕಿಸಿ ಆತನನ್ನು ಕರೆದುಕೊಂಡು ಹೋಗುವುದಾಗಿ ವಿನಂತಿಸಿಕೊಂಡಿದ್ದರು. ಆ ಒಂದು ವಿನಂತಿಯನ್ನು ಅವರ ಸಂಬಂಧಿಗಳು ಸ್ವೀಕರಿಸಿ ಇಂದು ಆತನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಈ ಸಮಯದಲ್ಲಿ ಆಶ್ರಮದ ಆಡಳಿತ ಅಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹುಕ್ಕೇರಿ ತಾಲೂಕಿನಿಂದ ಕರೆ ತಂದಂತಹ ಮಹಾಲಿಂಗಯ್ಯ ಇವರು ಆಶ್ರಮದಲ್ಲಿ ಎಲ್ಲಾ ಹಿರಿಯ ವೃದ್ಧರು ಹಾಗೂ ವಯಸ್ಕರ ಬುದ್ಧಿಮಾಂದ್ಯರಿಗೆ ಒಬ್ಬ ಮಗನಾಗಿ ಮೊಮ್ಮಗನಾಗಿ ಸಹೋದರನಾಗಿ ಪ್ರೀತಿ ತೋರಿದ್ದ ಒಂದು ವರ್ಷಗಳ ಕಾಲ ಕಾರುಣ್ಯ ಆಶ್ರಮದ ಕೂಸಾಗಿ ಆಶ್ರಯ ಪಡೆದಿದ್ದ ಮಹಾಲಿಂಗಯ್ಯ ಯಾವತ್ತಿಗೂ ಕಾರುಣ್ಯ ಕುಟುಂಬದ ಯಜಮಾನನಾಗಿರುತ್ತಾನೆ. ಆದರೆ ಕಾರುಣ್ಯ ಆಶ್ರಮದ ಮೂಲ ಉದ್ದೇಶ ನಿಜವಾದ ಅನಾಥರಿಗೆ ಆಶ್ರಯ ನೀಡಬೇಕೆಂಬುದು ಸಂಬಂಧಿಕರಿದ್ದಂತವರಿಗೆ ಆಶ್ರಯ ನೀಡಿದರೆ ಸಮಾಜವನ್ನು ನಾವೇ ಹಾಳು ಮಾಡಿದಂತಾಗುತ್ತದೆ. ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ ಅವರನ್ನು ತಾತ್ಕಾಲಿಕ ಆಶ್ರಯ ಕೊಡುತ್ತೇವೆ ಅವರಿಗೆ ಸಂಬಂಧಿಗಳು ಇರುವುದು ಖಚಿತವಾದರೆ ಅವರ ಮನೆಗೆ ಕಳುಹಿಸುವುದೇ ಕಾರುಣ್ಯ ಕುಟುಂಬದ ಮೂಲ ಉದ್ದೇಶವಾಗಿದೆ ಎಂದು ಮಾತನಾಡಿದರು. ಈ ಸಮಯದಲ್ಲಿ ಅವರ ಸಂಬಂಧಿಕರಾದ ಶಿವಾನಂದ ತಂ/ಈಶ್ವರಯ್ಯ ಹಿರೇಮಠ ಕಡಬಿ ಶಿವಪುರ ಸ್ಥಳಿಯರುಗಳಾದ ಲಕ್ಷ್ಮಣ ತಂ/ ಅಣ್ಣಪ್ಪ ಉಂಡರಿ. ಲೋಕೇಶ ತಂ/ಗೋಪಾಲ ಮುಕ್ಕಣ್ಣನವರ. ಇಸ್ಮಾಯಿಲ್ ತಂ/ಬಾಬುಲಾಲ್ ದಡ್ಡಿ. ಇವರುಗಳಿಗೆ ಒಪ್ಪಿಸಲಾಯಿತು. ಈ ಸಮಯದಲ್ಲಿ ಆಶ್ರಮದ ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ. ಶರಣಮ್ಮ. ಮರಿಯಪ್ಪ ಅನೇಕರು ಉಪಸ್ಥಿತರಿದ್ದರು.

 

ವರದಿ : ಸದಾನಂದ ಎಂ ಹೆಚ್ 

error: Content is protected !!