ಅಥಣಿ : ಅಥಣಿ ತಾಲ್ಲೂಕಿನಲ್ಲಿ ಕೆಲವು ಸಾರಾಯಿ ಅಂಗಡಿಗಳು ಸರ್ಕಾರದ ನಿಯಮಿತ ಸಮಯ ಮೀರಿ ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಇದರಿಂದ ಸಾರ್ವಜನಿಕರು ತೀವ್ರ ಅಸಹಕಾರ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ’ ತಾಲ್ಲೂಕು ದಂಡಾಧಿಕಾರಿಗಳಿಗೆ ಬರೆದ ಮನವಿಯಲ್ಲಿ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ ಕಾಂಬಳೆ ಹಾಗೂ ಅಥಣಿ ಕಾನಿಪ ಧ್ವನಿ ಸಂಘಟನೆಯ ಪದಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.ತಾಲೂಕಿನ ಕೆಲ ಬಾರ್‌ಗಳು ಹಾಗೂ ಸಾರಾಯಿ ಅಂಗಡಿಗಳು ಸರ್ಕಾರ ನಿಗದಿಪಡಿಸಿದ ಸಮಯವಾದ ಬೆಳಗ್ಗೆ 10 ರಿಂದ ರಾತ್ರಿ 10ರ ವೇಳೆಗೆ ಬದ್ಧರಾಗದೇ, ಅನಧಿಕೃತವಾಗಿ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಿ ರಾತ್ರಿ 12ರವರೆಗೆ ನಿರ್ಬಂಧಿತವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಸ್ಥಳೀಯರ ತಿಳಿವಳಿಕೆ.ಇದರಿಂದ ಸಾರ್ವಜನಿಕ ಜೀವನದ ಮೇಲೆ ಅಡ್ಡಪರಿಣಾಮ ಬೀರುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಬಡವರ್ಗದ ಜನರ ಮೇಲೆ ನೇರವಾದ ಪರಿಣಾಮ ಬೀರುತ್ತಿದೆ. ಹಳ್ಳಿಗಳ ಒಳಗಿನ ಶಾಂತಿ ಮತ್ತು ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ ಎಂಬುದಾಗಿ ಸಂಘಟನೆಯವರು ತಿಳಿಸಿದ್ದಾರೆ.”ಸರ್ಕಾರದ ನಿಯಮಾನುಸಾರ ಬಾರ್‌ಗಳು ಬೆಳಗ್ಗೆ 10 ರಿಂದ ರಾತ್ರಿ 10ರ ವರೆಗೆ ಮಾತ್ರ ತೆರೆಯಬೇಕಾಗಿದೆ. ಈ ನಿಯಮ ಉಲ್ಲಂಘನೆಯಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಅಧಿಕಾರಿಗಳು ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಒತ್ತಾಯ” ಎಂದು ಸಂಘಟನೆಯ ಪ್ರತಿನಿಧಿಗಳು ಹೇಳಿದರು.ತಾಲೂಕು ದಂಡಾಧಿಕಾರಿಗಳ ಪ್ರತಿಕ್ರಿಯೆ ಈ ಸಂಬಂಧ ಅಧಿಕಾರಿಗಳಿಂದ ಶೀಘ್ರ ಕ್ರಮಗಳ ನಿರೀಕ್ಷೆಯಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು, ಶಾಂತಿ ಮತ್ತು ಆರೋಗ್ಯಕರ ವಾತಾವರಣ ಕಾಪಾಡಲು ಸಹಕಾರಿಯದ್ದಾಗಲಿ ಎಂಬುದು ಸಂಘಟನೆಯ ನಂಬಿಕೆ ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಡಾ. ರವಿ ಬಿ ಕಾಂಬಳೆ. ಜಿಲ್ಲಾ ಉಪಾಧ್ಯಕ್ಷರು ಗಂಗಾಧರ ಶಿರಗಾಂವಿ. ಕಾಗವಾಡ ತಾಲೂಕ ಅಧ್ಯಕ್ಷರು ಸಂದೀಪ ರಡ್ಡಿ. ಅಥಣಿ ಗೌರವಾಧ್ಯಕ್ಷರು ರಾಶೀಧ ಶೇಖ.ತಾಲೂಕ ಅಧ್ಯಕ್ಷರು ಅಲ್ಲಾವುದ್ದೀನ್ ಶೇಕ್ ಉಪಾಧ್ಯಕ್ಷರು ಅಜಯ್ ಕಾಂಬಳೆ. ಕಾರ್ಯದರ್ಶಿ ವಿಠಲ ಕೋಕಾಟೆ. ಖಜಾಂಚಿ. ಶಶಿಕಾಂತ ಪುಂಡಿಪಲ್ಲೆ. ಸದಸ್ಯರಾದ ರಮೇಶ ಕಾಂಬಳೆ. ಉಮರ್ ಮೋಮಿನ್. ಸಂತೋಷ ಹೋನಕಂಡೆ. ಲಖನ್ ವಾಯದಂಡೆ. ಶಿವರಾಯ ಕರಕರಮುಂಡಿ. ಮುಂತಾದವರು ಉಪಸ್ಥಿತರಿದ್ದರು.
ವರದಿ : ಭರತೇಶ ನಿಡೋಣಿ