ಬೆಂಗಳೂರು : ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನ ಮುನಿಸ್ವಾಮಪ್ಪ ಲೇಔಟ್ನ ಆರ್.ಎಸ್.ಪಾಳ್ಯದಲ್ಲಿ ವಾಸವಿರುವ ಪಿಾದುದಾರರು ದಿನಾಂಕ:29/07/2025 ರಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:29/07/2025 ರಂದು ಸಂಜೆ ಪಿರ್ಯಾದುದಾರರ ತಾಯಿಯವರು ಮನೆಯಲ್ಲಿದ್ದಾಗ, ಇಬ್ಬರು ಅಪರಿಚಿತ (ಹೆಂಗಸು & ಗಂಡಸು) ಮನೆಯೊಳಗೆ ಪ್ರವೇಶಿಸಿ, ಪಿರ್ಯಾದುದಾರರ ತಾಯಿಯ ಮೇಲೆ ಚಾಕುವಿನಿಂದ ಹಲ್ಲೆಮಾಡಿ, ಅವರ ಬಳಿಯಿದ್ದ 48 ಗ್ರಾಂ ಚಿನ್ನಾಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆಂದು ತಿಳಿಸಿರುತ್ತಾರೆ. ಈ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀಧಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:31/07/2025 ರಂದು ರಾತ್ರಿ ಎಸ್.ಎಂ.ವಿ.ಟಿ ರೈಲ್ವೆ ನಿಲ್ದಾಣದ ພາ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಓರ್ವ ಮಹಿಳೆಯ ಜೊತೆ ಸೇರಿ ಈ ಕೃತ್ಯವೆಸಗಿರುವುದಾಗಿ ತಪ್ರೊಪ್ಪಿಕೊಂಡಿರುತ್ತಾನೆ. ಹಾಗೂ ಆಕೆಯ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ. ಆತನು ನೀಡಿದ ಮಾಹಿತಿ ಮೇರೆಗೆ ಅದೇ ದಿನ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ಆರ್.ಎಸ್.ಪಾಳ್ಯದ ಮುನಿಸ್ವಾಮಪ್ಪ ರಸ್ತೆಯಲ್ಲಿರುವ ವಾಸದ ಮನೆಯ ಬಳಿ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮಹಿಳೆಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಭಾಗಿಯಾಗಿ ರುವುದಾಗಿ ತನ್ನೊಪ್ಪಿಕೊಂಡಿರುತ್ತಾಳೆ.
ದಿನಾಂಕ:01/08/2025 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ. ಆರೋಪಿಯನ್ನು 01 ದಿನ ಪೊಲೀಸ್ ಅಭಿರಕ್ಷೆಗೆ ನೀಡಿರುತ್ತದೆ.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿ, ಪ್ರಕರಣದಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ 3.88 ಗ್ರಾಂ ಚಿನ್ನಾಭರಣವನ್ನು ಜ್ಯೂವೆಲರಿ ಅಂಗಡಿಯೊಂದರಲ್ಲಿ ಅಡಮಾನವಿಟ್ಟಿರುವುದಾಗಿ ಹಾಗೂ ಆರೋಪಿಯ ವಾಸದ ಮನೆಯಲ್ಲಿ 10.18 ಗ್ರಾಂ ಚಿನ್ನದ ಸರವನ್ನಿಟ್ಟಿರುವುದಾಗಿ ಮತ್ತು ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ಮನೆಯ ಬಳಿ ನಿಲ್ಲಿಸಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:02/08/2025 ರಂದು ಆತನು ನೀಡಿದ ಮಾಹಿತಿ ಮೇರೆಗೆ ಒಟ್ಟಾರೆ 14.06 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ 1 ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಮೌಲ್ಯ * 1.75,000/-(ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ),ಆಗಿರುತ್ತದೆ.
ವರದಿ : ಮುಬಾರಕ್