ನಂದಿ ರಂಗ ಮಂದಿರ ದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಎನ್ಎಸಿ ಪ್ರೈಮರ್ಷಿಕ ಸಭೆ

ಚಿಕ್ಕಬಳ್ಳಾಪುರ ನಂದಿ ರಂಗ ಮಂದಿರ ದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಎನ್ಎಸಿ ಪ್ರೈಮರ್ಷಿಕ ಸಭೆಯನ್ನು ನಡೆಸಲಾಯಿತು.

ಸದರಿ ಸಮಾರಂಭಕ್ಕೆ ಬೆಂಗಳೂರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಸುಮಾರು 150 ಜನರು ಎನ್ ಎ ಸಿ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾರಂಭದಲ್ಲಿ ಹಾಜರಿದ್ದರು ಸದರಿ ಸಮಾರಂಭವು ರಾಷ್ಟ್ರೀಯ ಸಂಘರ್ಷ ಸಮಿತಿಯ ರಾಷ್ಟ್ರೀಯ ಮುಖ್ಯ ಸಂಯೋಜಕರಾದ ರಮಾಕಾಂತ್ ನರಗುಂದ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು,

ಸಮಾರಂಭದಲ್ಲಿ ಎಂಎಸಿಯ ರಾಜ್ಯ ಸಂಯೋಜಕರಾದ ಆರ್ ಸುಬ್ಬಣ್ಣ ನವರು ಎನ್.ಎ.ಸಿ ರಾಜ್ಯ ಖಜಾಂಚಿಗಳಾದ ಎಸ್.ಎನ್ ಕುಲಕರ್ಣಿ ರವರು ರಾಜ್ಯ ಎನ್.ಎ.ಸಿ ಜಂಟಿ ಕಾರ್ಯದರ್ಶಿಗಳಾದ ಅಜ್ಜಂಪುರವರು ಬೆಂಗಳೂರು ಜಿಲ್ಲೆಯ ಎನ್ಎಸಿ ಜಂಟಿ ಕಾರ್ಯದರ್ಶಿಗಳಾದ ಎಂ ಎಸ್ ಪ್ರಾಣೇಶ್ ಬಾಬು ರವರು ಬೆಂಗಳೂರು ಜಿಲ್ಲೆಯ ಎನ್ಎಸಿ ಕಾರ್ಯದರ್ಶಿಗಳಾದ ಸೋಮಶೇಖರ್ ರವರು ಕೋಲಾರ ಜಿಲ್ಲೆಯ ಎನ್ಎಸಿ ಅಧ್ಯಕ್ಷರಾದ ಪಿವಿ ಸುರೇಶ್ ರವರು ಎನ್ಎಸಿ ಉಪಾಧ್ಯಕ್ಷರಾದ ನಾರಾಯಣಸ್ವಾಮಿ ಅವರು ಬೆಂಗಳೂರು ಚಿಕ್ಕಬಳ್ಳಾಪುರ ತುಮಕೂರು ಕೋಲಾರ ಜಿಲ್ಲೆಗಳ ಕ್ಲಸ್ಟರ್ ಉಪಾಧ್ಯಕ್ಷರಾದ ಜಿ ಎನ್ ಶ್ರೀನಿವಾಸ ನಾಯ್ಡು ರವರು ಚಿಕ್ಕಬಳ್ಳಾಪುರ ಜಿಲ್ಲೆಯ ಎನ್ಎಸಿ ಅಧ್ಯಕ್ಷರಾದ ಡಿಸ್ಕೋ ಶ್ರೀನಿವಾಸ ರವರು ಎನ್ ಎ ಸಿ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಮೇಲೂರು ಅಮರ್ ರವರು ಹಾಜರಿದ್ದರು.

ಸಭೆಯನ್ನು ಉದ್ದೇಶಿಸಿ ರಾಜ್ಯ ಎನ್ ಎ ಸಿ ಸಂಯೋಜಕರಾದ ಆರ್ ಸುಬ್ಬಣ್ಣ ನವರು ಮಾತನಾಡುತ್ತಾ ದೆಹಲಿಯ ಪೆನ್ಷನ್ ಅಧಿಕಾರಿಗಳು ಮಾಡುತ್ತಿರುವ ಆದೇಶಗಳಿಂದ ಸುಮಾರು 78 ಲಕ್ಷ ನಿವೃತ್ತ ನೌಕರರು ಮಿನಿಮಮ್ ಟೆನ್ಶನ್ 7500 ಪ್ಲಸ್ ಡಿ ಎ ಹಾಗೂ ಮೆಡಿಕಲ್ ಅಲೋವೆನ್ಸಸ್ ಹಾಗೂ ಹೈಯರ್ ಪೆನ್ಷನ್ ನೀಡದೆ ವಿನಾಕಾರಣ ನಿವೃತ್ತ ನೌಕರರಿಗೆ ತೊಂದರೆಯನ್ನು ನೀಡುತ್ತಿದ್ದು 4 11 2022 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನೀಡಿರುವ ಆದೇಶದಂತೆ 78 ಲಕ್ಷ ನಿವೃತ್ತ ನೌಕರರಿಗೆ ಮಿನಿಮಮ್ ಪೆನ್ಷನ್ ಹಾಗೂ ಪೆನ್ಷನ್ ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುತ್ತಾರೆ ಮುಂದುವರೆದಂತೆ ಕೇಂದ್ರ ಸರ್ಕಾರದ ಕಾರ್ಮಿಕ ಸಚಿವರಾದ ಮನಸುಕ್ ಮಾಂಡವಿಯಾದವರು ಕೇಂದ್ರ ಮಂತ್ರಿ ಗಳಾದ ನಿರ್ಮಲಾ ಸೀತಾರಾಮನ್ ರವರು ಹಾಗೂ ಕಾರ್ಮಿಕ ರಾಜ್ಯ ಮಂತ್ರಿಗಳಾದ ಶೋಭಾ ಕರಂದ್ಲಾಜೆ ಅವರು 78 ಲಕ್ಷ ನಿವೃತ್ತ ನೌಕರರ ಜೀವನದ ಬಗ್ಗೆ ಸಂಪೂರ್ಣವಾಗಿ ಪ್ರಧಾನಮಂತ್ರಿ ಗಳಿಗೆ ವಿವರಿಸಿ ಸೂಕ್ತ ಕ್ರಮ ತೆಗೆದು ಕೊಳ್ಳುವುದಾಗಿ ತಿಳಿಸಿದ್ದಾರೆಂದು ಸಮಾರಂಭದ ಅಧ್ಯಕ್ಷತೆ ವಹಿಸಿರುವ ದಮಾಕಾಂತ್ ನರಗುಂದ ರವರು ತಿಳಿಸಿದರು,

ಇನ್ನು ಎರಡು ಮೂರು ತಿಂಗಳಲ್ಲಿ ರಾಷ್ಟ್ರ ನಾಯಕರು ನಿವೃತ್ತ ಕಮಾಂಡ ಅಶೋಕ ರಾವತ್ ರವರ ಟೀಮ್ ಹಾಗೂ ಸಮಸ್ತ ನಿವೃತ್ತ ನೌಕರರ ಕೇಳಿರುವಂತೆ ಮಿನಿಮಮ್ ಪೆನ್ಷನ್ ಹಾಗೂ ಹೈಯರ್ ಪೆನ್ಷನ್ ಅನ್ನು ಕೊಡಿಸಿಕೊಡಲು ಸೂಕ್ತ ಆದೇಶಗಳನ್ನು ನೀಡುವುದಾಗಿ ಕೇಂದ್ರ ಮಂತ್ರಿಗಳು ತಿಳಿಸಿರುವುದಾಗಿ ಸಭೆಯಲ್ಲಿ ರಮಾಕಾಂತ್ ನರಗುಂದ ರವರು ತಿಳಿಸಿರುತ್ತಾರೆ ಮುಂದುವರೆದಂತೆ ಭವಿಷ್ಯ ನಿಧಿ ಅಧಿಕಾರಿಗಳು ನೀಡುತ್ತಿರುವ ಕಿರುಕುಳದ ಬಗ್ಗೆ ಹಾಗೂ ನಿವೃತ್ತ ನೌಕರರ ಅರ್ಜಿಗಳನ್ನು ರಿಜೆಕ್ಟ್ ಮಾಡಿರುವ ಬಗ್ಗೆ ಅದಕ್ಕೆ ಅವರು ನೀಡಿರುವ ಕಾರಣಗಳೊಂದಿಗೆ ತಿಳಿಸಿದ್ದು ಅವುಗಳೆಲ್ಲವನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿ 78 ಲಕ್ಷ ನಿವೃತ್ತ ನೌಕರರಿಗೆ ಮಿನಿಮಮ್ ಪೆನ್ಷನ್ ಹಾಗೂ ಪೆನ್ಷನ್ ನೀಡುವಂತೆ ಮನವಿ ಪತ್ರಗಳನ್ನು ನೀಡಿದ್ದು ಅದಕ್ಕೆ ಕೇಂದ್ರ ಮಂತ್ರಿಗಳು ಸ್ಪಂದಿಸಿರುವುದಾಗಿ ತಿಳಿಸಿರುತ್ತಾರೆ ಸಮಾರಂಭವು ಪ್ರಾರ್ಥನೆಯೊಂದಿಗೆ ಹಾಗೂ ಜ್ಯೋತಿ ಬೆಳಗಿಸುವ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಿ ಕ್ಲಸ್ಟರ್ ಉಪಾಧ್ಯಕ್ಷರಾದ ಶ್ರೀನಿವಾಸ್ ನಾಯ್ಡುರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಿರುತ್ತದೆ.

ವರದಿ : ಜಿಎನ್ ಶ್ರೀನಿವಾಸ ನಾಯ್ಡು

error: Content is protected !!