ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ ಸಾಮಗ್ರಿಗಳು ಉದ್ಘಾಟನೆ

ಗೋಕಾಕ : ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿ ಅವರು ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ ಸಾಮಗ್ರಿಗಳು, ಗೃಹ ಅಲಂಕಾರ ಮತ್ತು ಪೀಠೋಪಕರಣಗಳ ಬೃಹತ್ ವಸ್ತು ಪ್ರದರ್ಶನವನ್ನು‌ ಉದ್ಘಾಟಿಸಿದರು

ಕಟ್ಟಡ ನಿರ್ಮಾಣ ಕ್ಷೇತ್ರದ ನವೀನ ತಂತ್ರಜ್ಞಾನಗಳು, ಆಧುನಿಕ ವಸ್ತುಗಳು ಮತ್ತು ಉಪಕರಣಗಳನ್ನು ಒಟ್ಟುಗೂಡಿಸಿದ ಈ ಪ್ರದರ್ಶನದಲ್ಲಿ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ಅಲ್ಲಿ ಪ್ರದರ್ಶಿಸಲಾದ ತಂತ್ರಜ್ಞಾನಗಳನ್ನು ಅವಲೋಕಿಸಿದರು

ಇಂತಹ ಪ್ರದರ್ಶನಗಳು ನಮ್ಮ ಇಂಜಿನಿಯರ್‌ಗಳು, ತಂತ್ರಜ್ಞರು ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿರುವ ಯುವ ಉದ್ಯಮಿಗಳಿಗೆ ಪ್ರೇರಣೆ ನೀಡುವುದರೊಂದಿಗೆ, ಗೋಕಾಕ ನಗರದ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸಲಿವೆ ಎಂದು ಆಯೋಜಕರಿಂದ ಸನ್ಮಾನ ಸ್ವೀಕರಿಸಿ, ಮಾತನಾಡಿದರು

ಈ ಸಂದರ್ಭದಲ್ಲಿ ಗೋಕಾಕಿನ ಶೂನ್ಯ ಸಂಪಾದನಾ ಮಠದ ಕಿರಿಯ ಸ್ವಾಮಿಗಳು ಶ್ರೀ ಬಸವ ಪ್ರಭು ಶ್ರೀಗಳು, ಅಸೋಸಿಯೇಷನ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಂ

error: Content is protected !!