ಚಿಂಚೋಳಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಡಾ.ಉಮೇಶ ಜಾಧವ ಹಾಗೂ ಶಾಸಕ ಡಾ ಅವಿನಾಶ ಉಮೇಶ ಜಾಧವ ಹರಸಾಹಸ ಪಟ್ಟಿದ್ದಾರೆ, ಕಾರ್ಖಾನೆ ಪ್ರಾರಂಭವಾದರೆ ಸಮಸ್ತ ರೈತರಿಗೆ ಹಾಗೂ ನಿರುದ್ಯೋಗ ಯುವಕರಿಗೆ, ಅನುಕೂಲವಾಗಲಿ, ಹಿಂದುಳಿದ ಚಿಂಚೋಳಿ ಕ್ಷೇತ್ರ ಬೆಳೆಯುತ್ತದೆಯೇ ಹೊರೆತು ಬೇರೆ ಯಾವ ದುರುದ್ದೇಶ ಇಲ್ಲ, ರೈತವಿರೋಧಿ ಶರಣು ಮೋತಕಪಳ್ಳಿಗೆ ಚಿಂಚೋಳಿ ಕಾರ್ಖಾನೆ ಪ್ರಾರಂಭವಾಗಬಾರದು, ಕ್ಷೇತ್ರ ಅಭಿವೃದ್ಧಿಯಾಗಬಾರದು, ರೈತರಿಗೆ ಒಳ್ಳೆಯದಾಗಬಾರದು, ಯುವಕರಿಗೆ ಉದ್ಯೋಗ ಸಿಗಬಾರದು, ಎಂಬ ಉದ್ದೇಶ ನಿಮ್ಮದಾದರೆ, ನಿಮಗೊಂದು ಕಿವಿಮಾತು ಕಾರ್ಖಾನೆ ಪ್ರಾರಂಭಿಸಲು ತಡೆ ಒಡ್ಡುತ್ತಿರುವ ನಿಮ್ಮಂತಹ ನೂರು ಶಕ್ತಿಗಳಿಗೂ ಸಿದ್ದಸಿರಿ ಎಥೆನಾಲ್ ಕಂಪನಿ ಮಾಲಿಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕುಗ್ಗುವುದಿಲ್ಲ, ಅವರ ಹಿಂದೆ ಸಾವಿರಾರು ರೈತರಿದ್ದಾರೆ, ಕೆಲವೇ ದಿನಗಳಲ್ಲಿ ಕಾರ್ಖಾನೆ ಪ್ರಾರಂಭವಾಗುತ್ತೆ, ಸದರಿ ಕಾರ್ಖಾನೆಯ ಎಲ್ಲಾ ರೀತಿಯ ಪರವಾನಿಗೆಗಳು ಸಿದ್ಧವಾಗಿವೆ, ಜಾಧವ ಕುಟುಂಬದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಶರಣು ಮೋತಕಪಳ್ಳಿಗೆ ಇಲ್ಲ, ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವುದಕ್ಕು ಮುಂಚೆ ಎಚ್ಚರವಿರಲಿ, ರೈತ ವಿರೋಧ ಮಾಡುವ ಬದಲು ಕಾರ್ಖಾನೆ ಪ್ರಾರಂಭಕ್ಕೂಸ್ಕರ ಹಾಗೂ ಸಮಗೃ ಚಿಂಚೋಳಿ ಅಭಿವೃದ್ಧಿಯಾಗಲು ಕೈ ಜೋಡಿಸಿ ಎಂದು ಶರಣು ಮೋತಕಪಳ್ಳಿ ಹೇಳಿಕೆಗೆ ಬಿಜೆಪಿ ಮುಖಂಡ ಸಂತೋಷ ಗಡಂತಿ ತಿರುಗೇಟು ನೀಡಿದ್ದಾರೆ.