ಬೆಂಗಳೂರು : ₹ 40 ಲಕ್ಷ ಮೌಲ್ಯದ 48 ವಿವಿದ ಕಂಪನಿಗಳ ಲ್ಯಾಪ್ ಟಾಪ್ಗಳ ವಶ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ಸರಹದ್ದಿನ, ದೊಡ್ಡ ತೋಗೂರಿನ ಅಬ್ಬಯ್ಯ ಸ್ಪೀಟ್‌ನ ಪಿಜಿಯೊಂದರಲ್ಲಿ ವಾಸವಿರುವ ಪಿಾದುದಾರರು, ದಿನಾಂಕ:01/12/2025 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:28/11/2025 ರಂದು ರಾತ್ರಿ 22:30 ಗಂಟೆಯಿಂದ ದಿನಾಂಕ:29/12/2025 ರ ಬೆಳಿಗ್ಗೆ 10:30 ಗಂಟೆಯ ನಡುವಿನ ಸಮಯದಲ್ಲಿ ಪಿರ್ಯಾದುದಾರರು ವಾಸವಿರುವ ಪಿಜಿಯ ರೂಮ್‌ಗೆ ತೆರೆದ ಬಾಗಿಲ ಮೂಲಕ ಒಳಗೆ ಬಂದು, ಪಿರಾದುದಾರರ ಹಾಗೂ ಸ್ನೇಹಿತರ ಮೂರು ವಿವಿಧ ಕಂಪನಿಯ ಲ್ಯಾಪ್ಟಾಪ್‌ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿರುತ್ತಾರೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆ ಹಾಕಿ, ದಿನಾಂಕ:11/12/2025 ರಂದು ತಮಿಳುನಾಡು ರಾಜ್ಯ, ಕಲಕುರ್ಚಿ ಜಿಲ್ಲೆಯ, ಮಂಡವಳ್ಳಿ ಸರ್ಕಲ್‌ನಲ್ಲಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಲ್ಯಾಪ್ ಟಾಪಗಳನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಆತನ ಸ್ನೇಹಿತನು ನೀಡುತ್ತಿದ್ದ ಮಾಹಿತಿಯ ಮೇರೆಗೆ, ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿರುವ ಪಿಜಿಗಳಲ್ಲಿಯೂ ಸಹ ಲ್ಯಾಪ್ ಟಾಪಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:11/12/2025 ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಆತನ ಸಹಚರನ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ. ಆತನು ನೀಡಿದ ಮಾಹಿತಿ ಮೇರೆಗೆ ದಿನಾಂಕ:19/12/2025 ರಂದು ಸ್ನೇಹಿತನನ್ನು ಅತ್ತಿಬೆಲೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು.
ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ, ಆತನಿಂದ ಲ್ಯಾಪ್ಟಾಪ್‌ಗಳನ್ನು ಕಳವು ಮಾಡಿಸಿ, ಮಾರಾಟ ಮಾಡುತ್ತಿದ್ದುದ್ದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ದಿನಾಂಕ:19/12/2025 ರಂದು ಆರೋಪಿಯ ಸ್ನೇಹಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 06 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ತನಿಖೆಯನ್ನು ಮುಂದುವರೆಸಿ, ಆರೋಪಿಗಳಿಬ್ಬರ ಮಾಹಿತಿಯ ಮೇರೆಗೆ, ದಿನಾಂಕ:21/12/2025 ಮತ್ತು 22/12/2025 ರಂದು ಕಳವು ಮಾಡಿ, ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದ-06 ಲ್ಯಾಪ್ ಟಾಪ್‌ಗಳು ಮತ್ತು ಆರೋಪಿಗಳಿಬ್ಬರ ಸ್ನೇಹಿತರುಗಳಿಗೆ ಮಾರಾಟ ಮಾಡಿದ್ದ-09 ಲ್ಯಾಪ್ ಟಾಪ್‌ಗಳು ಹಾಗೂ ಆರೋಪಿಗಳಿಬ್ಬರ ವಾಸದ ಮನೆಯಲ್ಲಿಟ್ಟಿದ್ದ-33 ಲ್ಯಾಪ್ಟಾಪ್ಗಳು ಸೇರಿದಂತೆ ಒಟ್ಟು 48 ಲ್ಯಾಪ್ ಟಾಪಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ
240,00,000/-( ).
ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ 1] ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ-09 ಲ್ಯಾಪ್ ಟಾಪ್ ಕಳವು ಪ್ರಕರಣಗಳು, 2] ಬಂಡೆಪಾಳ್ಯ ಪೊಲೀಸ್ ಠಾಣೆಯ-01 ಲ್ಯಾಪ್ಟಾಪ್ ಕಳವು ಪ್ರಕರಣ ಸೇರಿದಂತೆ ಒಟ್ಟು 10 ಲ್ಯಾಪ್‌ಟಾಪ್ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಉಳಿದ 38 ಲ್ಯಾಪ್ ಟಾಪ್‌ಗಳ ವಾರಸುದಾರರ ಪತ್ತೆಕಾರ್ಯ ಮುಂದುವರೆದಿದೆ. ತನಿಖೆ ಪ್ರಗತಿಯಲ್ಲಿದೆ.
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶ್ರೀ. ಎಮ್. ನಾರಾಯಣ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರವರಾದ ಶ್ರೀ. ಕೆ.ಎಮ್ ಸತೀಶ ರವರ ನೇತೃತ್ವದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ನವೀನ್ ಜಿ.ಎಮ್, ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್ ಎಸ್
