ಹುಮನಾಬಾದ : ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಹಾಗೂ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಹುಮನಾಬಾದ ವತಿಯಿಂದ ಕಲಿಕಾ ಹಬ್ಬ ತಾಲೂಕಿನ ದುಬಲಗುಂಡಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು,
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಶೇಡ್ಯೂಲ್ ಕ್ಲಸ್ಟರ್ ಉರ್ದು CRP ನಾಜ್ಮೀನ್ ಸುಲ್ತಾನಾ ಭಾಗವಹಿಸಿ ಮಾತನಾಡಿ 1-5ನೇ ತರಗತಿಗಳ ಮಕ್ಕಳ ಉರ್ದು ಮತ್ತು ಗಣಿತ ಕಲಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮಕ್ಕಳಲ್ಲಿ ಆಟ ಕಂಪ್ಯೂಟಷನ್ ಭಾವನೆ ಮೂಡಿಸಿ ಅವರಿಗೆ ಕಲಿಕೆ ನೀಡುವ ವಿಶೇಷ ಕಾರ್ಯ ಇದಾಗಿದೆ ಇದರಿಂದ ಮಕ್ಕಳು ಸರಳವಾಗಿ ಕಲಿಯುವ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಾಡಲಾಗುತ್ತಿದ್ದು ಇದರಲ್ಲಿ ಶಿಕ್ಷಕರ ಪಾತ್ರ ಅತೀ ಅಮೂಲ್ಯ ವಾಗಿದೆ ಈ ಕಾರ್ಯಕ್ರಮ ವಾರ್ಷಿಕವಾಗಿ ನಡೆಯುವ ಕಾರ್ಯಕ್ರಮವಾಗಿದ್ದು ಸರ್ಕಾರದ ಆದೇಶ ಮೆರೆಗೆ ಕಾರ್ಯಕ್ರಮ ಮಾಡಲಾಗುತ್ತಿದೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯವಾಗಿ ಬಹುಮಾನ ಪ್ರಶಸ್ತಿ ಗಳನ್ನ ನೀಡಲಾಗುತ್ತಿದೆ,
ಇದರಲ್ಲಿ ಏಳು ವಿಭಾಗ ಇರುತ್ತದೆ ಶಿಕ್ಷಕರು ಮತ್ತು ಮಕ್ಕಳ ಭಾಗವಹಿಸುವಿಕೆ ಪ್ರದೇಶ ಕಥೆ ಹೇಳುವುದು, ಸಂತೋಷದ ಗಣಿತ, ಆರೋಗ್ಯ ಮತ್ತು ನೈರ್ಮಲ್ಯ, ಕೈಬರಹ ಮತ್ತು ಬರವಣಿಗೆ, ಪಾತ್ರ ಅಭಿವೃದ್ಧಿ/ನಟನಾ ಅವಧಿ ಗೆ ಸಂಬಂಧ ಪಟ್ಟಂತಹ ಕಲಿಕೆ ನಡೆಯುತ್ತದೆ ಎಂದರು.
ಈ ಸಂಧರ್ಭದಲ್ಲಿ ಅತಿಥಿ ಗಳಾಗಿ ಮುರಗೇಂದ್ರ, ತಾತ್ಯ ರಾವ್ ಕಾಂಬ್ಳೆ, ಶಿವರಾಜ್ ಮೇತ್ರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಶೈಲ್ ಬಿರಾದಾರ್, ಬಿ.ಆರ್.ಪಿ ರಫಿ ಪಟೇಲ್, ಎಸ್.ಡಿ.ಎಂ.ಸಿ ಅಧ್ಯಕ್ಷ ಚಾಂದ ಪಾಷಾ, ಮಾಸ್ತನ್ ಸರ್ ವೀರೇಂದ್ರಪ್ಪಾ, ಎಂ.ಡಿ ರಿಜ್ವಾನ್, ಆಯುಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
