ಅಥಣಿ : ಜೆ.ಎ.ಕಾಲೇಜು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

2025 – 26 ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆ ಏರ್ಪಡಿಸಿದ ವಿವಿಧ ಕ್ರೀಡಾ ಕೂಟಗಳಲ್ಲಿ ಅಥಣಿಯ ಜೆ.ಎ.ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಎಲ್ಲ ವಿದ್ಯಾರ್ಥಿಗಳಿಗೆ ಜೆ.ಇ.ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ ರಾಮ ಕುಲಕರ್ಣಿ, ಉಪಕಾರ್ಯಾಧ್ಯಕ್ಷರಾದ ಎಸ.ಎಮ್.ಪಾಟೀಲ.ಶೈಕ್ಷಣಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂದೀಪ್ ಸಂಗೋರಾಮ ಹಾಗೂ ಪ್ರಾಚಾರ್ಯರರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
(ಪೋಟೋ ಎಡದಿಂದ ಬಲಕ್ಕೆ)
ವೇದಿಕಾ ವಾಘಮೋಡೆ (ಪುಟ್ಬಾಲ್) ತನುಜಾ ಆಜೂರ(ಪುಟ್ಬಾಲ್) ನರೋಟೆ (ಥ್ರೋಬಾಲ್) ಋತಿಕಾ ಗಡದೆ(ಕರಾಟೆ) ರೇಣುಕಾ ಕೋಳಿ(ಟ್ವೇಕ್ವಾಂಡೋ) ಎಲ್ಲರೂ ಪ್ರಥಮ ಸ್ಥಾನ. ಪ್ರಾಚಾರ್ಯರರಾದ ಎಮ್.ಪಿ.ಮೇತ್ರಿ. ಎನ್ ಚಂದ್ರಶೇಖರ,ಎಸ.ವ್ಹಿ.ದಾಸರಡ್ಡಿ, .ಬಿ.ಎಸ್. ಲೋಕುರ ದೈಹಿಕ ನಿರ್ದೇಶಕ ಪ್ರಮೋದ್ ಪವಾರದೇಸಾಯಿ ಉಪಸ್ಥಿತಿರಿದ್ದರು.

ವರದಿ : ಭರತೇಶ್ ನಿಡೋಣಿ

error: Content is protected !!