ಹುಮ್ನಾಬಾದ್ : ಗೌತಮ ಪ್ರಸಾದ ಸಂಸ್ಥಾಪಕ ರಾಜ್ಯಾಧ್ಯಕ್ಷರು ದ್ರಾವಿಡ ಕ್ರಾಂತಿ ಯುವ ಸೇನೆ ಬೀದರ ರವರು ಹುಮನಾಬಾದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ವಿಠಲ್ ಸೇಡಂಕರ್ ಇವರು ಕಛೇರಿ ಕರ್ತವ್ಯದಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸದೇ ಮನಸ್ಸಿಗೆ ಬಂದಂತೆ ಕೇಂದ್ರ ಸ್ಥಾನಕ್ಕೆ ನಿಗದಿತ ಅವಧಿಯಲ್ಲಿ ಹಾಜರಾಗದೇ ಇರುವುದು, ವಸತಿ ನಿಲಯಗಳ ಪ್ರವಾಸದ ಅವಧಿಯಲ್ಲಿ ಬಯೊಮೆಟ್ರಿಕ ಹಾಜರಾತಿ ವ್ಯವಸ್ಥೆ ಇದ್ದರೂ ಹಾಜರಾತಿ ಹಾಕದೇ ಕಛೇರಿಯ ಪ್ರತಿಯೊಂದು ಸ್ಟೀಮ್ ಮತ್ತು ಯೋಜನೆಯ ಅನುಷ್ಠಾನಕ್ಕೆ ವಸತಿ ನಿಲಯಗಳ ನಿರ್ವಹಣೆಯ ಬಿಲ್ಲುಗಳಿಗೆ ಸಿಂಧುತ್ವಕ್ಕೆ ಹಣ ಇಲ್ಲದೆ ಯಾವುದೆ ಕಲಸ ಮಾಡುವುದಿಲ್ಲ. ಹಣಕಾಸಿನ ವ್ಯವಹಾರದ ಬಗ್ಗೆ ಸುಧೀರ್ಘವಾಗಿ ತಪಾಸಣೆ ಮಾಡಿ ಸದರಿ ಅಧಿಕಾರಿಯನ್ನು ಅಮಾನತ್ತು ಮಾಡಬೇಕೆಂದು ದೂರು ಸಲ್ಲಿಸಿರುತ್ತಾರೆ.
ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ಹುಮನಾಬಾದ ಹಾಗೂ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೀದರ ಇವರಿಗೆ ಜಂಟಿಯಾಗಿ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿತ್ತು.
ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ಹುಮನಾಬಾದ ಹಾಗೂ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೀದರ ರವರಿಗೆ ದಿನಾಂಕ:12.09.2025 ರಂದು ಕೇವಲ ಜುನ ಮತ್ತು ಜುಲೈ 2023 ರ ಹಾಜರಾತಿ ಮತ್ತು ಸಂದರ್ಶಕ ವಹಿ ಸಲ್ಲಿಸಿರುತ್ತಾರೆ ಸದರಿ ಅಧಿಕಾರಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಅಭಿಪ್ರಾಯ ಸಲ್ಲಿಸಿರುತ್ತಾರೆ. ಶ್ರೀ ವಿಠಲ್ ಸೇಡಂಕರ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹುಮನಾಬಾದ ರವರು ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷತನ ಬೇಜವಾಬ್ದಾರಿತನ ತೋರಿರುವುದರಿಂದ ಈ ಅಧಿಕಾರಿಯ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನಿ) ನಿಯಮಾವಳಿಗಳು 1957 ರ ನಿಯಮ 10 (1) ರಡಿ ಶಿಸ್ತು ಕ್ರಮ ಜರುಗಿಸಲು ನಿರ್ಧರಿಸಿದಂತೆ
ಕರ್ನಾಟಕ ನಾಗರೀಕ ಸೇವಾ ((ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನಿ) ನಿಯಮಾವಳಿಗಳು 1957 ರ ನಿಯಮ 10 (1) (ಡಿ) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ವಿಠಲ್ ಸೇಡಂಕರ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹುಮನಾಬಾದ ರವರ ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ಅಮಾನತ್ತು ಗೊಳಿಸಿ ಆದೇಶಿಸಲಾಗಿದೆ,
ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬೀಡತಕ್ಕದಲ್ಲ. ಹಾಗೂ ಕೆ.ಸಿ.ಎಸ್.ಆರ್.ನಿಯಮ 98 ರನ್ನಯ ಜೀವನಾದಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ.
