ಚಿಂಚೋಳಿ ಚಂದಾಪುರ ಪಟ್ಟಣದ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕರ್ನಾಟಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆ ಶಾಲೆಗಳಲ್ಲಿ ಏರ್ಪಡಿಸಿದಂತಹ ವಿರುದ್ಧ ಸ್ಪರ್ಧೆಗಳಲ್ಲಿ ವಿಜೇತರಾದಂತಹ ಮಕ್ಕಳಿಗೆ ಶಿಕ್ಷಣ ಪ್ರೇಮಿ ಸಮಾಜಸೇವಕ ಅನಿಲ ಬಿರಾದಾರ ಅವರ ಹುಟ್ಟು ಹಬ್ಬದ ಅಂಗವಾಗಿ ವಿಜೇತರಾದಂತ ಮಕ್ಕಳಿಗೆ ಎಕ್ಸಾಮ್ಪ ಪ್ಯಾಡ್, ನೋಟ್ ಬುಕ್, ಕಲರ್ ಬಾಕ್ಸ್,ಪೆನ್ನು, ಹಾಗೂ ಚಾಕಲೇಟ್ ಗಳನ್ನು ಬಹುಮಾನಗಳನ್ನಾಗಿ ನೀಡಿದರು, ಮತ್ತು ಪೌರಕಾರ್ಮಿಕ ಮಹಿಳಾ ಸಿಬ್ಬಂದಿಯವರಿಗೆ ಸೀರೆ ಹಾಗೂ ಪುರುಷರಿಗೆ ಟೀಶರ್ಟ್ ಗಳನ್ನು ಹಾಗೂ ಶಾಲೆಯ ಅಡಿಗೆ ಸಿಬ್ಬಂದಿಯವರಿಗೆ ಸೀರೆಗಳನ್ನು ಕೂಡ ಉಡುಗೊರೆಯಾಗಿ ನೀಡಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ದಲಿತ ಸೇನೆ ಯುವ ಘಟಕದ ಅಧ್ಯಕ್ಷರಾದ ಚೇತನ ನಿರಾಳಕರ
ಇಂದಿನ ಮಕ್ಕಳೇ ಮುಂದಿನ ಭಾರತ ದೇಶದ ಪ್ರಜ್ವಲ ಭವಿಷ್ಯ ಎಂದು ತಿಳಿಸಿಕೊಟ್ಟವರು ಮಾಜಿ ಪ್ರಧಾನಿ ಪಂಡಿತ ಜವಾಹರಲಾಲ ನೆಹರು, ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ ಅದಕ್ಕೋಸ್ಕರ ಅವರ ಹುಟ್ಟು ಹಬ್ಬವನ್ನು ಆಚರಿಸುವ ಬದಲು ಮಕ್ಕಳ ಹುಟ್ಟು ಹಬ್ಬದ ಆಚರಿಸಿ ಎಂದು ಹೇಳಿದವರು ಅಂದಿನಿಂದ ಇಲ್ಲಿಯವರೆಗೆ ಮಕ್ಕಳ ದಿನಾಚರಣೆ ಆಚರಣೆ ನಡೆಯುತ್ತಾ ಇದೆ, ಇಂದಿನ ಆಧುನಿಕ ಯುಗದ ಭರಾಟೆಯಲ್ಲಿ ನಮ್ಮ ಮಾತೃಭಾಷೆಯ ಬಗ್ಗೆ ಉದಾಸೀನ ತೋರುತ್ತಿರುವ ಪೋಷಕರು ಹಾಗೂ ಮಕ್ಕಳು ಮುಂಬರುವ ದಿನಗಳಲ್ಲಿ ಇದು ಒಂದು ದೊಡ್ಡ ಆತಂಕದ ವಿಷಯ, ಮಾತೃಭಾಷೆ ಕಲಿತು ದೊಡ್ಡ ಹುದ್ದೆಗಳನ್ನು ಪಡೆದವರು ಲಕ್ಷ ಜನರಿದ್ದಾರೆ ಅದಕ್ಕಾಗಿ ಮಾತೃಭಾಷೆ ಕಲಿಕೆ ಅವಶ್ಯಕತೆ ಎಂದು ಹೇಳಿದರು. ಉಲ್ಲಾಸ ಕುಮಾರ ಕೆರೋಳ್ಳಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ಸ್ನೇಹಿತ ಅನಿಲ್ ಅವರ ಹುಟ್ಟುಹಬ್ಬ ಸಡಗರ ಸಂಭ್ರಮದಿಂದ ಆಚರಿಸದೆ ಮುದ್ದು ಮಕ್ಕಳೊಂದಿಗೆ ಅವರ ಪ್ರೋತ್ಸಾಹ ನೀಡಲು ಅವರಿಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಂತ ಮಕ್ಕಳಿಗೆ ಬಹುಮಾನ ನೀಡಿ ಅವರ ಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಿದ್ದಾರೆ, ಇದರಿಂದ ಮಕ್ಕಳಲ್ಲಿ ಓದುವ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ಹೆಚ್ಚಾಗುತ್ತದೆ ಈ ರೀತಿ ಮಾಡುತ್ತಿರುವ ಅನಿಲ ಬಿರಾದರ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ ಭಗವಂತ ಶಾರದ, ವಿಶ್ವನಾಥ ದೇಸಾಯಿ, ವಿಠ್ಠಲ ಕುಸಾಳೆ, ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆ ಶಿಕ್ಷಕಿಯರಾದ ಚಂದ್ರಕಲಾ, ರೋಹಿಣಿ ರಾಜೇಂದ್ರ ಪ್ರಸಾದ, ಕವಿತಾ, ಹಾಗೂ ಇತರರು, ಮುದ್ದು ಮಕ್ಕಳು, ಉಪಸ್ಥಿತರಿದ್ದರು.
ಬಾಕ್ಸ್ 1
ಪ್ರತಿ ಹುಟ್ಟುಹಬ್ಬಕ್ಕೆ ದುಂಡು ಖರ್ಚು ಮಾಡದೆ ಮಕ್ಕಳ ಖುಷಿಗಾಗಿ ನಾನು ಬಹುಮಾನ ವಿತರಣೆ ಹಾಗೂ ಪೌರಕಾರ್ಮಿಕರಿಗೆ ಸೀರೆಗಳನ್ನು, ಟೀ ಶರ್ಟ್ ಗಳನ್ನು, ಹಾಗೂ ಬಡವರಿಗೆ ಸಹಾಯವನ್ನು ಈ ತರಹದ ಸಮಾಜ ಸೇವೆಗಳನ್ನು ಮಾಡುತ್ತಿದ್ದು ಈ ರೀತಿ ಮಾಡುವುದರಿಂದ ನನಗೆ ಸಂತೋಷ ಉಂಟು ಆಗುತ್ತದೆ ಎಂದು ಶಿಕ್ಷಣ ಪ್ರೇಮಿ ಸಮಾಜಸೇವಕ ಅನಿಲ ಬಿರಾದರ ಹೇಳಿದರು.
ವರದಿ : ರಾಜೇಂದ್ರ ಪ್ರಸಾದ್
