ಕರ್ನಾಟಕ ಪೊಲೀಸ್ ಮತ್ತು ಯುಕೆ ಹೋಮ್‌ ಲ್ಯಾಂಡ್ ಸೆಕ್ಯೂರಿಟಿ ನಿಯೋಗದ ಶೃಂಗಸಭೆ

ಬೆಂಗಳೂರು : ಪೊಲೀಸ್ ಪ್ರಧಾನ ಕಛೇರಿಯ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಪೊಲೀಸ್ ಹಾಗೂ ಯುನೈಟೆಡ್ ಕಿಂಗ್‌ಡಮ್‌ನ ಹೋಮ್‌ ಲ್ಯಾಂಡ್ ಕೈಗಾರಿಕಾ ಭದ್ರತಾ ವಲಯದ ಉನ್ನತ ಮಟ್ಟದ ನಿಯೋಗದ ಶೃಂಗಸಭೆಯನ್ನು ಆಯೋಜಿಸಲಾಗಿತ್ತು.

ಡಾ. ಎಂ.ಎ ಸಲೀಂ, ಐಪಿಎಸ್, ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ಮತ್ತು ಬ್ರಿಟೀಷ್ ಡೆಪ್ಯೂಟಿ ಹೈಕಮಿಷನರ್ ಚಂದ್ರು ಅಯ್ಯರ್ ಹಾಗೂ ಯು.ಕೆ ವ್ಯವಹಾರ ಮತ್ತು ವ್ಯಾಪಾರ ಇಲಾಖೆಯ ಪ್ರಧಾನ ಪೊಲೀಸ್ ಮತ್ತು ಭದ್ರತಾ ಸಲಹೆಗಾರ ರಾಬರ್ಟ್ ಬಾರ್ನ್ಸ್ ಅವರ ನಿಯೋಗವನ್ನು ಪ್ರಧಾನ ಕಛೇರಿಯಲ್ಲಿ ಸ್ವಾಗತಿಸಿಲಾಯಿತು.

ಯು.ಕೆ ತಂಡವು ವಿಧಿವಿಜ್ಞಾನ, ಸೈಬರ್ ಭದ್ರತೆ, ಸ್ಕ್ಯಾನಿಂಗ್ ಮತ್ತು ಸುರಕ್ಷತಾ ತಂತ್ರಜ್ಞಾನಗಳು ಮತ್ತು ಜನಸಮೂಹ ನಿರ್ವಹಣಾ ಪರಿಹಾರಗಳಲ್ಲಿ ಪರಿಣಿತಿ ಹೊಂದಿರುವ ಒಂಬತ್ತು ಪ್ರಮುಖ ಕಂಪನಿಗಳ ಪ್ರತಿನಿಧಿಗಳನ್ನು ಒಳಗೊಂಡಿತ್ತು. ಸಭೆಯಲ್ಲಿ ಕಂಪನಿಯ ಪ್ರತಿನಿಧಿಗಳು ಕರ್ನಾಟಕ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸುಧಾರಿತ ಉತ್ಪನ್ನಗಳು ಮತ್ತು ತಾಂತ್ರಿಕ ಆವಿಷ್ಕಾರಗಳನ್ನು ಹಾಗೂ ಪೊಲೀಸ್ ತಂತ್ರಜ್ಞಾನ ಮತ್ತು ಸಾರ್ವಜನಿಕ ಸುರಕ್ಷತೆಯಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಪ್ರದರ್ಶಿಸಿದರು.

ಕಾನೂನು ಜಾರಿ ಸಂಸ್ಥೆಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳು, ಹೊಸ ಯುಗದ ಭದ್ರತಾ ತಂತ್ರಜ್ಞಾನಗಳ ಸಂಭಾವ್ಯ ಅನ್ವಯಿಕೆ ಮತ್ತು ಕರ್ನಾಟಕ ಪೊಲೀಸ್ ಮತ್ತು ಯುಕೆ ಭದ್ರತಾ ಸಂಸ್ಥೆಗಳ: ನಡುವಿನ ಸಹಯೋಗವನ್ನು ಹೆಚ್ಚಿಸುವ ಅವಕಾಶಗಳ ಕುರಿತು ಚರ್ಚಿಸಲಾಯಿತು. ಸಾರ್ವಜನಿಕ ಸುರಕ್ಷತೆಯನ್ನು ಸುಧಾರಿಸುವುದು, ಸೈಬರ್ ಭದ್ರತಾ ಕ್ರಮಗಳನ್ನು ಬಲಪಡಿಸುವುದು ಮತ್ತು ಕರ್ನಾಟಕದಲ್ಲಿ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆಯಲ್ಲಿ ನೂತನ ತಂತ್ರಜ್ಞಾನಗಳ ಅಳವಡಿಸುವುದರ ಬಗ್ಗೆ ಸಂವಾದ ನಡೆಸಿದರು.

ವರದಿ : ಮುಬಾರಕ್ ಬೆಂಗಳೂರು

error: Content is protected !!