ಗಡಿ ಕೇಶ್ವರ್ ನಿಂದ ಭೂತಪುರ್ ರಸ್ತೆ ಡಾಂಬರೀಕರಣ ಮಾಡಿ

ಕಾಳಗಿ ತಾಲೂಕಿನ ಗಡಿಕೇಶ್ವರ್ ಹಾಗೂ ಭೂತಪೂರ್ ನಡುವೆ ರಸ್ತೆ ಕೆಟ್ಟು ನಿಂತಿದೆ ಎಂದು ದಲಿತ್ ಸಂಘರ್ಷ ಸಮಿತಿ ಭೀಮ್ ಮಾರ್ಗ ತಾಲೂಕ್ ಅಧ್ಯಕ್ಷರು ಮಾರುತಿ ಕೇರಳ್ಳಿ ತೆಗಲತಿಪ್ಪಿ ಅವರ ನೇತೃತ್ವದಲ್ಲಿ ತಹಸೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು ಈ ವೇಳೆ ದಲಿತ ಸಂಘರ್ಷ ಸಮಿತಿ ಭೀಮ್ ಮಾರ್ಗ ಕಾಳಗಿ ತಾಲೂಕ್ ಅಧ್ಯಕ್ಷರು ಮಾರುತಿ ಕೇರಳ್ಳಿ ತೆಗಲತಿಪ್ಪಿ ಮಾತನಾಡಿ ಗಡಿ ಕೇಶ್ವರ್ ನಿಂದ ಭೂತಪುರ್ ರಸ್ತೆ ಬಹಳ ಕೆಟ್ಟು ಹೋಗಿದೆ ತೆಗ್ಗು ಗುಂಡಿಗಳು ಬಿದ್ದಿವೆ ದಿನ ಶಾಲಾ ಮಕ್ಕಳಿಗೆ ಸರಿಯಾಗಿ ಸಮಯಕ್ಕೆ ಹೋಗುವದಕ್ಕೆ ಆಗುತ್ತಿಲ್ಲ ಬೈಕ್ ಸವಾರರಿಗೆ ಹಾಗೂ ರಸ್ತೆ ಸರಿ ಇಲ್ಲದ ಕಾರಣ ಅನೇಕ ಅಪಘಾತ ಘಟನೆ ನಡೆಯುತ್ತಿದೆ ಆದಕಾರಣ ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲಿಸಿ ಗಡಿಕೇಶ್ವರದಿಂದ ಭೂತಪುರ ರಸ್ತೆ ಡಾಂಬರೀಕರಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಸಿ ಈ ಸಂಧರ್ಭದಲ್ಲಿ ಮದನ್ ನವದಾಗಿ ತಾ ಸಂ ಸಂಚಾಲಕರು, ಮಲ್ಲಿಕಾರ್ಜುನ ಬೇವಿನಕರ್ ಉಪಸ್ಥಿತರಿದ್ದರು.

ವರದಿ : ರಮೇಶ್ ಕುಡಹಳ್ಳ ಜೆಕೆ ಕನ್ನಡ ನ್ಯೂಸ್ ಕಾಳಗಿ

error: Content is protected !!