ಪ್ರತಿಭಾ ಕಾರಂಜಿ ಮಕ್ಕಳ ಸಾಧನೆಗೆ ಸ್ಫೂರ್ತಿ ಯ ವೇದಿಕೆ ವಿ. ಲಕ್ಷ್ಮಯ್ಯ

ಚಿಂಚೋಳಿ ತಾಲೂಕಿನ ಸುಲೇಪೇಟ ನ ಸರಕಾರಿ ಉರ್ದು ಹಿರಿಯ ಪ್ರಥಾಮೀಕ ಶಾಲೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ಚಿಂಚೋಳಿ ಉರ್ದು ಮತ್ತು ಸುಲೇಪೇಟ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದ
ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಲಕ್ಷ್ಮಯ್ಯ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ತೋರಿಸಲು ಪ್ರತಿಭಾ ಕಾರಂಜಿ ಸೂಕ್ತವಾದ ವೇದಿಕೆಯಾಗಿದ್ದು ಮಕ್ಕಳ ಪ್ರತಿಭೆ ಗುರುತಿಸುವ ಕ್ರಿಯಾಶೀಲ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇದ್ದು, ಬಹುತೇಕರು ಕೀಳರಿಮೆಯಿಂದ ಸದಾ ಹಿಂದುಳಿದಿರುತ್ತಾರೆ. ಶಿಕ್ಷಕರು ಇಂತಹವರನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಿ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು. ಇದರಿಂದ ವಿದ್ಯಾರ್ಥಿಗಳು ಹೊಸ ಪ್ರತಿಭಾವಂತರು ಬೆಳಕಿಗೆ ಬರಲು ಸಾಧ್ಯ ಎಂದು ಹೇಳಿದರು.

ಸರಕಾರಿ ನೌಕರರ ಸಂಘದ ಅಧ್ಯಕ್ಷ ದೇವಿಂದ್ರಪ್ಪ ಹೋಳ್ಕರ್ ಮಾತನಾಡಿ ಮಕ್ಕಳ ಚಿಂತನೆ ಮತ್ತು ಪ್ರತಿಭೆ ಅನಾವರಣಕ್ಕೆ ಪ್ರತಿಭಾಕಾರಂಜಿ ಉತ್ತಮ ವೇದಿಕೆ ಯಾಗಿದ್ದು ಪ್ರತೀ ಮಗುವೂ ತನ್ನದೇ ಆದ ಪ್ರತಿಭೆ ಹೊಂದಿದ್ದು ಒಂದಲ್ಲಾ ಒಂದು ಕ್ಷೇತ್ರದಲ್ಲಿ ಮುಂದಿವರಿಯುತ್ತದೆ, ರಾಜ್ಯದಾದ್ಯಂತ ನಡೆಯುವ ಕಾರ್ಯಕ್ರಮ ಮಕ್ಕಳ ನೈಜ ಪ್ರತಿಭೆಯನ್ನು ಪ್ರದರ್ಶಿಸಲು ಸಹಕಾರಿಯಾಗಿದೆ, ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಸಹಕಾರಿ’ ಎಂದು ಹೇಳಿದರು.
ಮಕ್ಸೂದ ಅಲಿ ಸ್ವಾಗತಿಸಿದರು, ಮಹ್ಮದ ಫಾಜೀಲ ನಿರೂಪಿಸಿದರು, ಮಹ್ಮದ ಶಕೀಲ ವಂದಿಸಿರು.
ಈ ಸಂದರ್ಭದಲ್ಲಿ ಜೋಹರಾಖಾನಂ ಸುರೇಶ ಕೊರವಿ, ಮಲ್ಲಿಕಾರ್ಜುನ ಪಾಲಾಮೂರ, ಮಹ್ಮದ ಫಾರೂಕ್, ಮಕ್ಸೂದ್ ಅಲಿ, ನುಶರತ ಮೊಯಿದ್ದಿನ, ಗೋಪಾಲ ಯಂಪಳ್ಳಿ, ಮಹೆಮೂದ ಪಾಠಣ ,ಸಲಾರ ಮಸೂದ್, ಅನ್ವರಶಾ, ಶಕೀಲ್ ಅಹ್ಮದ, ಸೀರಾಜ ನಾಮಜಗಿ, ಹಮೀದ ಮಿಯ್ಯ, ಅಕ್ಬರ್ ಅಲಿ, ತಯ್ಯಾಬ ಮೋಮಿನ, ಸಲೀಮ್, ಮುದ್ದು ಮಕ್ಕಳು ಹಾಗೂ ಇತರರು ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!