ಔರಾದ್: ವಿದ್ಯಾರ್ಥಿಗಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಆಸಕ್ತಿ ಬೆಳೆಸಿಕೊಳ್ಳಬೇಕು. ಮಾನವೀಯ ಮೌಲ್ಯಗಳು, ಸಂಸ್ಕಾರ, ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವ ಛಲವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಯುವ ಸಾಹಿತಿ ಪರಮೇಶ ವಿಳಸಪೂರೆ ಹೇಳಿದರು.
ಸಂತಪೂರಿನ ಸುಭಾಷ್ ಚಂದ್ರ ಬೋಸ್ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ತಾಯಿ ತಂದೆಯ ಪರಿಶ್ರಮ ಕಾಳಜಿ ಬಗ್ಗೆ ಚಿಂತಿಸಿ ಪರಿಶ್ರಮದಿಂದ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಸದಾ ನಿಮ್ಮ ಮನಸ್ಸನ್ನು ಗುರಿಯೆಡೆಗೆ ಕೇಂದ್ರಿಕರಿಸಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ ಕೊಡುವಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಮುಖ್ಯವಾಗಿದೆ. ಪೋಷಕರು ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಲ್ಪ ಸಮಯವನ್ನು ಮೀಸಲಿಡಬೇಕು.
ಶಾಲೆಯ ಹಳೆಯ ವಿದ್ಯಾರ್ಥಿ ಯುವ ಮುಖಂಡ ಸಂತೋಷ ಪಾಟೀಲ ವಿದ್ಯಾರ್ಥಿಗಳು ತಮಗೆ ಸಿಕ್ಕಿದ ಅವಕಾಶ ಬಳಸಿಕೊಳ್ಳಲು ಓದುವ ಸಮಯದಲ್ಲಿ ಗುರಿ ಇಟ್ಟುಕೊಳ್ಳಬೇಕು. ಯುವ ಜನಾಂಗ ತಮ್ಮ ಮನಸ್ಸನ್ನು ಗಾಳಿಗೆ ತೂರದೇ ಹತೋಟಿಯಲ್ಲಿಟ್ಟುಕೊಂಡಾಗ ಮಾತ್ರ ತಮ್ಮ ಸಾಧನೆಯ ಗುರಿ ಮುಟ್ಟಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುಳಾದ ಮನೋಹರ ಬಿರಾದಾರ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರೆ,
ಯುವ ಮುಖಂಡ ಮಂಜು ಸ್ವಾಮಿ, ಶಿಕ್ಷಕರಾದ ಗುರುನಾಥ ದೇಶಮುಖ, ನಂದಾದೀಪ ಬೋರಾಳೆ, ಶಶಿಕಲಾ ಜಾರ್ಜ್, ಐಶ್ವರ್ಯ
ರಾಜಶೇಖರ ಕುಶನೂರೆ ಸೇರಿದಂತೆ ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ನಿರೂಪಿಸಿದರು
ಸಂಗೀತ ಪಾಟೀಲ ಸ್ವಾಗತಿಸಿದರು.
————–
ಅನಾವಶ್ಯಕ ಮೊಬೈಲ್ ಬಳಕೆಯಿಂದ ಆಗುವ ಅನಾಹುತ ಹಾಗೂ ಕ್ಷಣಿಕ ಸುಖಕ್ಕಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಪೋಷಕರು ತಲೆ ತಗ್ಗಿಸಬೇಕಾದ ಪರಿಸ್ಥಿತಿ ಎದುರಾಗುತ್ತಿರುವುದು ದುರದೃಷ್ಟಕರ. ಈ ನಿಟ್ಟಿನಲ್ಕಿ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಪರಮೇಶ.ಡಿ.ವಿಳಸಪೂರೆ ಹೇಳಿದರು.
ವರದಿ : ರಾಚಯ್ಯ ಸ್ವಾಮಿ
