ಆಶ್ರಯ ಕಾಲೋನಿಯ ವಯಸ್ಕರಿಗೆ ಹೊದಿಕೆ ಹಾಗೂ ಬಡ ಮಕ್ಕಳಿಗೆ ಉಚಿತ ನೋಟ್ ಬುಕ್ ಪೆನ್ ವಿತರಣೆ

ಚಿಂಚೋಳಿ : ಚಂದಾಪುರ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ ಐಟಿಬಿಟಿ ಕಲ್ಬುರ್ಗಿ ಉಸ್ತುವಾರಿ ಮಂತ್ರಿಗಳಾದ ಪ್ರಿಯಾಂಕ ಖರ್ಗೆ ಅವರ ಹುಟ್ಟು ಹಬ್ಬದ ಅಂಗವಾಗಿ ಸಮಾಜ ಸೇವಕ ಹಾಗೂ ಶಿಕ್ಷಣ ಪ್ರೇಮಿಗಳಾದ ವಿಜಯಕುಮಾರ ಶಾಬಾದಿ ಹಾಗೂ ಅನಿಲ ಬಿರಾದಾರ ಅವರು ವೈಯಕ್ತಿಕವಾಗಿ ವಯಸ್ಕರರಿಗೆ ಹೊದಿಕೆ ಹಾಗೂ ಬಡ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಪೆನ್ ವಿತರಣೆ ಮಾಡಿದರು. ನಿವಾಸಿಗಳ ಜೊತೆ ಕೇಕ್ ಕಟ್ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪುರಸಭೆ ಸದಸ್ಯ ಅಬ್ದುಲ ಬಾಸಿದ ಲಕ್ಷಾಂತರ ರೂಪಾಯಿ ದುಂದು ವೆಚ್ಚ ಖರ್ಚು ಮಾಡದೆ ಬಡ ಜನರಿಗೆ ಉಪಯೋಗವಾಗುವಂತಹ ವಯಸ್ಕರಿಗೆ ಹೊದಿಕೆ ಹಾಗೂ ಬಡ ಮಕ್ಕಳಿಗೆ ನೋಟ್ ಬುಕ್ ಪೆನ್ ವಿತರಣೆ ವೈಯಕ್ತಿಕವಾಗಿ ಮಾಡುತ್ತಿರುವ ವಿಜಯ ಕುಮಾರ ಶಾಬಾದಿ ಹಾಗೂ ಅನಿಲ ಬಿರಾದರ ಅವರ ಕಾರ್ಯ ಮೆಚ್ಚುವಂತದ್ದು ಸಚಿವ ಪ್ರಿಯಾಂಕ ಖರ್ಗೆ ಅವರ ಆಶಯದಂತೆ ಬಡ ಜನರಿಗೆ ಅನುಕೂಲವಾಗುವಂತ ಕಾರ್ಯಗಳನ್ನು ಮಾಡಿ ಅವರ ಹುಟ್ಟುಹಬ್ಬಕ್ಕೆ ಶೋಭೆ ತಂದಂತ ಇವರಿಗೆ ಹೃದಯತುಂಬಿ ಕೃತಜ್ಞತೆ ಎಂದು ಹೇಳಿದರು.

ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷ ನಾಗೇಶ ಗುಣಾಜಿ ಮಾತನಾಡಿ ಸಚಿವರ ಹುಟ್ಟುಹಬ್ಬದಂದು ಬಡ ಜನರಿಗೆ ಹಾಗೂ ಮುದ್ದು ಮಕ್ಕಳಿಗೆ ಅನುಕೂಲವಾಗುವಂತೆ ಬಡ ಜನರ ನೆರವಿಗೆ ಸಹಾಯ ಮಾಡಿದಂತ ಇಬ್ಬರು ಸಮಾಜಸೇವಕರಿಗೆ ಬಡಜನರು ಅವರಿಗೆ ಹಾರೈಸುತ್ತಾರೆ, ಇಂಥ ಉತ್ತಮ ಕೆಲಸಗಳು ಇನ್ನೂ ಕೂಡ ಮುಂದುವರೆಯಲಿ ಎಂದು ಹೇಳಿದರು.

ಸಮಾಜ ಸೇವಕ ವಿಜಯ ಕುಮಾರ ಶಾಬಾದಿ ಮಾತನಾಡಿ ಸಚಿವರಾದ ಪ್ರಿಯಾಂಕ ಖರ್ಗೆ ಅವರ ಆಶಯದಂತೆ ದುಂದು ವೆಚ್ಚ ಖರ್ಚು ಮಾಡದೆ ಬಡ ಜನರಿಗೆ ಯಾವ ವಸ್ತುಗಳ ಅವಶ್ಯಕತೆ ಇದೆಯೋ ಅಂತ ವಸ್ತುಗಳನ್ನು ಅವರಿಗೆ ವಿತರಣೆ ಮಾಡಿ ಅವರ ಸ್ವಲ್ಪ ನೆರವಿಗೆ ನಮ್ಮದೊಂದು ಸಣ್ಣ ಪ್ರಯತ್ನ ಅಷ್ಟೆ . ಮುಂದೆ ಕೂಡ ಇಂಥ ಕೆಲಸಗಳನ್ನು ಮಾಡುತ್ತೇವೆ ಎಂದು ಹೇಳಿದರು.

ಶಿಕ್ಷಣ ಪ್ರೇಮಿ ಸಮಾಜಸೇವಕ ಅನಿಲ ಬಿರಾದರ ಮಾತನಾಡಿ ನಾವು ಸಚೀವ ಪ್ರಿಯಾಂಕ ಖರ್ಗೆ ಅವರ ಆಶಯದಂತೆ ನಿರ್ಗತಿಕರಿಗೆ ಬಡ ಜನರಿಗೆ ಅನುಕೂಲವಾಗುವಂತ ಕೆಲಸಗಳನ್ನು ಮಾಡಿ ಅವರ ಜೊತೆ ನಾವಿದ್ದೇವೆ ಎಂದು ಅವರ ಆತ್ಮಸ್ಥೈರವನು ಹೆಚ್ಚು ಮಾಡಿ ಅವರ ಬೆನ್ನೆಲುಬ್ಬಿಗೆ ಸದಾ ಇರುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿವರಾಜ ಪಾಟೀಲ, ಸುಭಾಷ ಚಂದ್ರ ಪಾಟೀಲ, ಅಹ್ಮದ ಭಗವಾನ, ಚಾಂದ, ನರೇಶರೆಡ್ಡಿ, ಭಾಗ್ಯವಂತ ಶಾರದ,ಉಲ್ಲಾಸ, ವಯಸ್ಕರರೂ ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!