2023-24ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ಚಿಂಚೋಳಿ TAPCMS ಸಹಕಾರ ಸಂಘಕ್ಕೆ ಅತ್ಯುತ್ತಮ ಸಾಧನೆ ಪ್ರಶಸ್ತಿ ಪ್ರಧಾನ

ತಾಲ್ಲೂಕಾ ಟಿಎಪಿಸಿಎಂಎಸ್‌ ಸಹಕಾರ

ಸಂಘಗೆ ಅತ್ಯುತ್ತಮ ಪ್ರಶಸ್ತಿ ಪ್ರದಾನ

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ

ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಕಲಬುರ್ಗಿ

ವತಿಯಿಂದ 2023-24ನೇ ಸಾಲಿನಲ್ಲಿ ಅತ್ಯುತ್ತಮ

ಸಾಧನೆ ಮಾಡಿದ ಚಿಂಚೋಳಿ ತಾಲ್ಲೂಕಾ ಒಕ್ಕುಲುತನ

ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ

ರಮೇಶ ಯಾಕಾಪೂರ ಹಾಗೂ ಮುಖ್ಯ ಕಾರ್ಯ

ನಿರ್ವಾಹಣಾಧಿಕಾರಿ ಅತೀಕ್ ಪಾಷ ಅವರಿಗೆ

ಅತ್ಯುತ್ತಮ ಸಹಕಾರ ಪ್ರಶಸ್ತಿ ಪತ್ರ ನೀಡಿ ಗೌರವಿಸಿ

ಸನ್ಮಾನಿಸಿದರು.

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರ

ಸಹಕಾರ ಬ್ಯಾಂಕಿನಿಂದ 98ನೇ ವಾರ್ಷಿಕ ಮಹಾ

ಸಭೆಯಲ್ಲಿ ಪ್ರಶಸ್ತಿ ಪತ್ರ ನೀಡಲಾಗಿದ್ದು ಬರುವ ದಿನ

ಗಳಲ್ಲಿ ಇನ್ನು ಹೆಚ್ಚಿನ ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ

ಸಾಧನೆ ಮಾಡಲಿ ಎಂದು ಹುರಿದುಂಬಿಸಿ ಪ್ರಶಸ್ತಿ ಪತ್ರ

ನೀಡಲಾಗಿದೆ ಎಂದು ಕಲಬುರ್ಗಿ ಯಾದಗಿರಿ ಜಿಲ್ಲಾ

ಸಹಕಾರ ಬ್ಯಾಂಕ್‌ ಅಧ್ಯಕ್ಷರು ತಿಳಿಸಿದ್ದಾರೆ.

 

ವರದಿ : ರಾಜೇಂದ್ರ ಪ್ರಸಾದ್