ಖಿದ್ಮಾ ಫೌಂಡೇಶನ್ ಕರ್ನಾಟಕ, ಅನ್ನದಾತ ಪ್ರಕಾಶನ ಹಾಗು ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇವರ ಸಹಯೋಗದಲ್ಲಿ ಖಿದ್ಮಾ ಕನ್ನಡ ಸಂಗಮ ಕಾರ್ಯಕ್ರಮವನ್ನು
ದಿನಾಂಕ: 25/01/2026, ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರಿನಲ್ಲಿ ಆಯೋಜಿಸಲಾಗಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಜೂನಿಯರ್ ಹಾಗೂ ಸೀನಿಯರ್ ಎಂಬ ಎರಡು ವಿಭಾಗಗಳಾಗಿ ಸ್ಪರ್ಧೆ ನಡೆಯಲಿದೆ. ಜೂನಿಯರ್ ವಿಭಾಗಕ್ಕೆ ಕಥೆ ಹೇಳುವುದು, ಚಿತ್ರರಚನೆ ಮತ್ತು ದೇಶಭಕ್ತಿ ಗೀತೆ ಹಾಗೂ ಸೀನಿಯರ್ ವಿಭಾಗಕ್ಕೆ ಆಶು ಭಾಷಣ, ಕನ್ನಡ ಪ್ರಬಂಧ ಹಾಗೂ ಕವನ ರಚನೆ ಮತ್ತು ವಾಚನ ಸ್ಪರ್ಧೆಯನ್ನು ನಡೆಸಲಾಗುತ್ತದೆ ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ಅಧ್ಯಕ್ಷರಾದ ಆಮಿರ್ ಅಶ್ಅರೀ ಬನ್ನೂರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7349197313 ನಂಬರನ್ನು ವಾಟ್ಸಪ್ ಮೂಲಕ (ಕರೆಗೆ ಅನುಮತಿ ಇರುವುದಿಲ್ಲ) ಸಂಪರ್ಕಿಸಿ.
