ಸ್ವಾಮಿ ವಿವೇಕಾನಂದ ಜಯಂತಿ ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಆಚರಣೆ

ಬೀದರ್ : 24-01-2026 ರಂದು ಶ್ರೀಗುರು ಗಂಗಾಧರ ಬಕ್ಕಪ್ರಭು ಚಾರಿಟೇಬಲ್ ಟ್ರಸ್ಟ್ (ರಿ) ನೌಬಾದ ಬೀದರ ವತಿಯಿಂದ ಜನಸೇವಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬೀದರನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಉತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಕಲಾ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಡಾ. ರಾಜಶೇಖರ ಶಿವಾಚಾರ್ಯ ಗೋರ್ಟಾ ಸ್ವಾಮಿಜಿ ವಹಿಸಿ ಮಾತನಾಡುತ್ತಾ, ಜೀವನದಲ್ಲಿ ಮಕ್ಕಳಿಗೆ ಏನಾದರೂ ಒಂದು ಸಾಧನೆ ಮಾಡಬೇಕಾದರೆ ಸ್ವಾಮಿ ವಿವೇಕಾನಂದರ ಆದರ್ಶ ಜೀವನ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ಜವಾಬ್ದರಿಯುತ ನಾಗರಿಕನಾಗಿ ಬದುಕಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಡಾ. ಶೈಲೇಂದ್ರ ಬೆಲ್ದಾಳೆ ಶಾಸಕರು ಬೀದರ ದಕ್ಷಿಣ ಕ್ಷೇತ್ರ ಇವರು ಮಾತನಾಡುತ್ತಾ, ಸ್ವಾಮಿ ವಿವೇಕಾನಂದರು ದೇಶದ ಧರ್ಮ, ಸಂಸ್ಕೃತಿಕ ಜಗತ್ತಿಗೆ ಅಮೇರಿಕಾದ ಚಿಕಾಗೋದಲ್ಲಿ ಭಾಷಣ ಮಾಡಿ, ತಿಳಿಸಿರುತ್ತಾರೆ, ಅಲ್ಲದೇ ವಿವೇಕಾನಂದರ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಿದ್ಯುತ್‌ ವಾಣಿಯಂತೆ ನಾವು ಬದುಕಿನಲ್ಲಿ ಅಳವಡಿಸಿಕೊಂಡು, ಗುರಿ ತಲುಪುವರೆಗೆ ಪ್ರಯತ್ನ ಪಡಬೇಕೆಂದು ಹೇಳಿದರು. ಹಾಗೆಯೇ ತನ್ನ ಜೀವನದ ನಿಜಾಂಶವನ್ನು ಎರಡು ಸಲ ನಾನು ಶಾಸಕನಾಗಲು ಪ್ರಯತ್ನಪಟ್ಟೆ, ಮೂರನೇ ಸಲ
ಪ್ರಯತ್ನದಿಂದ ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ನಾನು ಶಾಸಕನಾಗಿ ಆಯ್ಕೆಯಾಗಿರುತ್ತೇನೆ ಎಂದು ಹೇಳಿದರು.

ಇದೇ ರೀತಿ ನಮ್ಮ ದೇಶದ ಯಶಸ್ವಿ ವ್ಯಕ್ತಿಗಳಾದ ಧೀರುಬಾಯಿ ಅಂಬಾನಿ, ರತನ ಟಾಟಾ ಅವರ ನಡೆದು ಬಂದ ದಾರಿ, ಹಾಗೂ ಅವರ ಜೀವನದಲ್ಲಿ ಯಶಸ್ಸಿನ ಬಗ್ಗೆ ವಿವರಣೆ ಸಮೇತ ತಿಳಿಸಿದರು.

ಇವರೂ ಕೂಡ ವಿವೇಕಾನಂದರ ಆದರ್ಶವನ್ನು ಮೈಗೂಡಿಸಿಕೊಂಡಿದ್ದರಿಂದ ತನ್ನ ಗುರಿಯನ್ನು ಸಾಧಿಸಲು ಸಾಧ್ಯವಾಯಿತು ಎಂದು ತಿಳಿಸಿದರು. ಅಲ್ಲದೇ ಶಕ್ತಿಯೇ ಜೀವನ, ದುರ್ಬಲವೇ ಮರಣ ಎಂಬ ನಾಣ್ಣುಡಿಯಂತೆ ಮಕ್ಕಳಿಗೆ ಶಕ್ತಿವಂತರಾಗಿ ಬದುಕಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯಾಗಿ ಸೋಮನಾಥ ಪಾಟೀಲ ಜಿಲ್ಲಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಬೀದರ ಇವರು ಮಾತನಾಡುತ್ತಾ, ಇವತ್ತು ಭಾರತ ದೇಶ ಯುವಕರಿಂದ ಕೂಡಿದ ದೇಶವಾಗಿದೆ, ಸ್ವಾಮಿ ವಿವೇಕಾನಂದರ ಕನಸು ಭಾರತ ಜಗತ್ ಗುರು ಆಗಬೇಕೆಂದು ಕನಸು ಕಂಡಿದ್ದರು. ಅವರ ಕನಸಿನಂತೆ ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಭಾರತ ದೇಶವನ್ನು ವಿಶ್ವಗುರು ಗುರಿಯತ್ತ ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು,

ಅಲ್ಲದೇ ವಿವೇಕಾನಂದರ ಆದರ್ಶ ಜೀವನವನ್ನು ತಾವೂ ಕೂಡ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಈಶ್ವರ ಸಿಂಗ್ ಠಾಕೂರ ಮಾತನಾಡುತ್ತಾ, ನಾವು ದಿನನಿತ್ಯ ಸತ್ಯ ಸನಾತನ ಧರ್ಮ ಸಂಸ್ಕಾರದ ಬಗ್ಗೆ ಮಕ್ಕಳಿಗೆ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಬಿ.ಜೆ.ಪಿ. ಮುಖಂಡರಾದ ರಾಜಶೇಖರ ನಾಗಮೂರ್ತಿ ಇವರು ಮಾತನಾಡುತ್ತಾ, ನಾವು ದಿನನಿತ್ಯ ಒಳ್ಳೆಯ ಆದರ್ಶ ಇಟ್ಟುಕೊಂಡು, ಜೀವನದಲ್ಲಿ ಸಾಧನೆ ಮಾಡಬೇಕು ಹಾಗೂ ದಿನನಿತ್ಯ ಯೋಗ ವ್ಯಾಯಾಮ, ಶುಭ್ರವಾದ ಬಟ್ಟೆಗಳನ್ನು ಧರಿಸಿಕೊಂಡು, ಒಳ್ಳೆಯ ರೀತಿಯಿಂದ ಶಿಸ್ತಿನ ಸಿಪಾಯಿಯಂತೆ ಬದುಕಬೇಕೆಂದು ತಿಳಿಸಿದರು.

ಅದೇ ರೀತಿಯಾಗಿ ಅತಿಥಿಗಳಾಗಿ ಆಗಮಿಸಿದ ರೂಪೇಶ ಎಕಲಾರಕರ್, ಯಲ್ಲಾಲಿಂಗ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಇವರು ಮಾತನಾಡುತ್ತಾ, ಸ್ವಾಮಿ ವಿವೇಕಾನಂದರರಂತೆ ವ್ಯಕ್ತಿತ್ವ, ಶಿಸ್ತು, ನಮ್ರತೆ ಬೆಳೆಸಿಕೊಂಡು, ಗುರಿ ಇಟ್ಟುಕೊಂಡು, ಸಾಧನೆ ಮಾಡಬೇಕೆಂದು ಮಕ್ಕಳಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಜನಸೇವಾ ಶಾಲೆಯ ಆಡಳಿತಾಧಿಕಾರಿಯಾದ ಸೌಭಾಗ್ಯವತಿ ಜಲಾದೆ, ಬಿ.ಜೆ.ಪಿ.ಯ ಪದಾಧಿಕಾರಿಗಳು, ಮುಖಂಡರಾದ ದೀಪಕ ಗಾದಗಿ, ಹಣಮಂತ ಬುಳ್ಳಾ, ವೀರು ದಿಗ್ವಾಲ್, ಸುನೀಲ ಗೌಳಿ, ಗಣೇಶ ಭೋಸ್ಥೆ, ಜೈಭೀಮ ಬಂಧು, ಗೋಪಾಲಕೃಷ್ಣ, ನರೇಶ ಗೌಳಿ, ವಿಜಯಕುಮಾರ ಹೆಗ್ಡೆ, ಸಂಗಮೇಶ ಹುಮನಾಬಾದೆ, ಸುಧೀಂದ್ರ ಕುಲಕರ್ಣಿ, ವಿಜಯಕುಮಾರ ವೀರಶೆಟ್ಟಿ, ಶಂಕರ ಚೊಂಡೆ, ಶೇಖರ ನೌಬಾದೆ, ಚನ್ನಪ್ಪ, ಪ್ರಭುಗೊಂಡ, ಸುನೀಲ ದೇಶಮುಖ, ಕಂಟೆಪ್ಪ ಭಂಗೂರೆ, ಸೋಮನಾಥ ಮಾನಾ, ದೀಪಕ ಚಿದ್ರಿ, ಗುಣವಂತ ಭಾವಿಕಟ್ಟೆ, ಮಹೇಶ ಕೋರೆ, ಸಂಗಮೇಶ ಕಾರಭಾರೆ, ಹಣಮಂತ, ಕುಮಾರ, ವಿಶ್ವನಾಥ, ಜನಸೇವಾ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತ ಟ್ರಸ್ಟ್‌ನ ಅಧ್ಯಕ್ಷರಾದ ಬಸವರಾಜ ಮೂಲಗೆ ನೌಬಾದ ಮಾಡಿದರು, ಕಾರ್ಯಕ್ರಮದ ನಿರೂಪಣೆಯನ್ನು ಶಿವಕುಮಾರ ಚಿಮಕೋಡ ವಹಿಸಿದರು, ವಂದನಾರ್ಪಣೆಯನ್ನು ಟ್ರಸ್ಟ್‌ನ ಕಾರ್ಯದರ್ಶಿ ರಾಜ ಟಗರು ಆಣದೂರ ಮಾಡಿದರು.

error: Content is protected !!