ವಕ್ಫ್ ಕಾಯ್ದೆ ತಿದ್ದುಪಡಿ ವಿಧೇಯಕ ಖಂಡಿಸಿ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ

ಕೊಲ್ಹಾರ ಪಟ್ಟಣದಲ್ಲಿ.

ಲೋಕಸಭೆಯಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ವಿಧೇಯಕ ಮಂಡಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಸರ್ಕಾರ ವಕ್ಸ್ ಆಸ್ತಿ ಉಳಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಹಾಗೂ ಪಟ್ಟಣದ ನಾಗರಿಕರ ವತಿಯಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ತಾಲೂಕ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಟಿಪ್ಪು ಸುಲ್ತಾನ ವೃತ್ತದ ಮೂಲಕ ಹೊರಟ ಮೆರವಣಿಗೆ ಮಹಾತ್ಮ ಗಾಂಧೀ ವೃತ್ತ, ಅಗಸಿ ಮಾರ್ಗವಾಗಿ ಸಂಗಮೇಶ್ವರ ವೃತ್ತದ ಮೂಲಕ ಹಾಯ್ದು ತಹಶೀಲ್ದಾರ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಮುಖಂಡ ಅಯ್ಯೂಬ ದಿಂದಾರ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಇಬ್ಬಗೆಯ ಧೋರಣೆ ಅನುಸರಿಸುವ ಮೂಲಕ ಮುಸ್ಲಿಂರನ್ನು ತುಳಿಯುವ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ವಕ್ಪ್ ತಿದ್ದುಪಡಿ ತರುವ ಮೂಲಕ ವಕ್ಪ್ ಆಸ್ತಿಯ ಮೇಲೆ ಕಣ್ಣಿಟ್ಟಿದೆ ಮುಸ್ಲಿಂ ಸಮುದಾಯದ ಸಬಲೀಕರಣಕ್ಕೆ ಮೀಸಲಿಟ್ಟಿರುವ ವಕ್ಸ್ ಆಸ್ತಿಯನ್ನು ತಿದ್ದುಪಡಿಯ ಮೂಲಕ ಕಬಳಿಸಲು ಹೊಂಚು ಹಾಕಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪ್ರಬಲವಾಗಿ ವಿರೋಧಿಸುತ್ತೆವೆ ಎಂದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಮುಖಂಡರಾದ ಹಾಫೀಜ ಬಾಷಾ ಮುಲ್ಲಾ, ಅಜೀಂ ಪಟ್ಟೇದವರ, ರಜಬಅಲಿ ಬಿಜಾಪುರ, ಅಯ್ಯೂಬ ದಿಂದಾರ, ಪೀರಅಹ್ಮದ ಕಂಕರಪೀರ, ದಾದಾ ಕಂಕರಪೀರ, ಫಯಾಜ ಇನಾಮದಾರ, ಸದ್ದಾಂ ಬಬಲಾದ, ಹಸನ ಮುಲ್ಲಾ, ಅಹಿಂದ ಮುಖಂಡ ವಸಿಂ ಗಿರಗಾಂವಿ, ಇಕ್ಬಾಲ್ ನದಾಫ, ಮೋಹಸಿನ್ ಕಾಖಂಡಕಿ, ಸಾದೀಕ ಯಾದವಾಡ ಹಾಗೂ ಪಟ್ಟಣದ ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

 

ವರದಿ : ಮಹಿಬೂಬ್ ಗುಂತಕಲ್