ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಗ್ರಾಮಗಳ ಕಾಮಗಾರಿಗಳ ಗುದ್ದಲಿ ಪೂಜೆ

ಯಮಕನಮರಡಿ : ಧರನಟ್ಟಿ ಗ್ರಾಮದಲ್ಲಿ ಇಂದು ಧರನಟ್ಟಿ ಸರ್ಕಾರಿ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಿರುವ, ಅಂದಾಜು ₹54 ಲಕ್ಷ ವೆಚ್ಚದ ಮೂರು ಕೊಠಡಿಗಳ ಭೂಮಿಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿದ ಎರಡು ವಾಲ್ಮೀಕಿ ಭವನಗಳನ್ನು ಉದ್ಘಾಟಿಸಿದರು

ಭರಮ್ಯಾನಟ್ಟಿ ಗ್ರಾಮದಲ್ಲಿ ಇಂದು ಅಂದಾಜು ₹36 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಎರಡು ನೂತನ ಕೊಠಡಿಗಳ ಭೂಮಿಪೂಜೆ ನೆರವೇರಿಸಿದರು.

ಹಳ್ಳೂರ ಗ್ರಾಮದ ಸಹಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ₹18 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುವ ಒಂದು ನೂತನ ಕೊಠಡಿಯ ಭೂಮಿಪೂಜೆ ನೆರವೇರಿಸಿ, ಸಂವಿಧಾನ ದಿನದ ಅಂಗವಾಗಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ.‌ ಸದಸ್ಯ ಯಲ್ಲಪ್ಪ ಪೂಜೇರಿ, ಮುಖಂಡರಾದ ಯಲ್ಲಪ್ಪ ಬುಡ್ರಿ, ಸಚಿವರ ಆಪ್ತ ಸಹಾಯಕರಾದ ಶ್ರೀ ಅರವಿಂದ ಕಾರ್ಚಿ ಬೆಳಗಾಂವಿ ಜೀಲ್ಲಾ ಎಸ್ ಟಿ ಘಟಕದ ಅಧ್ಯಕ್ಷರಾದ ಶ್ರೀ ಬಾಳೇಶ್ ದಾಶನಟ್ಟಿ, ಕರೆಪ್ಪ ನಾಯ್ಕ, ಕಲ್ಮೇಶ ಕೊಣಕೇರಿ, ಪರಶುರಾಮ ಪೂಜೇರಿ, ಗ್ರಾಮದ‌ ಹಿರಿಯರು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!