ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ SDPI ವತಿಯಿಂದ ಜಂಟಿ ಪಾರ್ಲಿಮೆಂಟ್ ಸಮಿತಿಗೆ ಹಕ್ಕೊತ್ತಾಯ

ವಕ್ಫ್ 2024ಬಿಲ್‌ ಆಕ್ಷೇಪಿಸಿ ಭಿತ್ತಿ ಪತ್ರ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ವಿರೋಧ ವ್ಯಕ್ತ ಪಡಿಸಿದರು ವಕ್ಫ್  ಆಸ್ತಿ ಮುಸ್ಲಿಮ್ ಸಮುದಾಯಕ್ಕೆ ಒಳ ಪಟ್ಟಿದ್ದು ಡಾ ಬಾಬಾ ಸಾಹೇಬ್‌ ಅಂಬೇಡ್ಕರ್ ರವರ ಸಂವಿಧಾನದಲ್ಲಿ ನಮ್ಮ ಆಸ್ತಿ ರಕ್ಷಣೆಗೆ ವಕ್ಫ್ ಬೋರ್ಡ್ ಇದೆ ಈ ಹಕ್ಕು ನಾವು ಕಸಿದು ಕೊಳ್ಳಲು ಬಿಡುವುದಿಲ್ಲ ನಮ್ಮ ಆಸ್ತಿ ನಮ್ಮ ಹಕ್ಕು ವಕ್ಫ್ ಆಸ್ತಿ ಸರ್ಕಾರದ ಸ್ವತ್ತಲ್ಲ ನಮ್ಮ ಹಿರಿಯ ಆಸ್ತಿ ಎಂದು ಪಕ್ಷದ ಮುಖಂಡರು  ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು,

ನಂತರ ತಹಸೀಲ್ದಾ‌ರ್ ಮೂಲಕ ಜಂಟಿ ಪಾರ್ಲಿಮೆಂಟ್ ಸಮಿತಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಮದುರ್ಗ  ವಿಧಾನಸಭಾ ಕ್ಷೇತ್ರ  ವತಿಯಿಂದ ರಾಮದುರ್ಗ  ನಗರದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಕೇಂದ್ರ ಸರ್ಕಾರದ ವಖ್ಫ್ ತಿದ್ದುಪಡಿ ಮಾಸೂದೆಯನ್ನು ಹಿಂಪಡೆಯಿರಿ, ಇದು ದುರುದ್ದೇಶ ಮತ್ತು ಪ್ರತಿಕಾರದ ಮಸೂದೆ ಎಂಬ ಘೋಷಣೆಯಡಿ ಪ್ರತಿಭಟನೆ ನಡೆಯಿತು.

ಈ ಸಂಧರ್ಭದಲ್ಲಿ ಮಾತಾಡಿದ ಮುಖ್ಯ ಅತಿಥಿ “ಮುಜಫ್ಫರ್ ಬಾಗವಾನ” ದೇಶದಲ್ಲಿ ಒಕ್ಕೂಟ ಸರ್ಕಾರ ನಿರಂತರವಾಗಿ ಮುಸ್ಲಿಮ್ ಸಮುದಾಯವನ್ನು ಟಾರ್ಗೆಟ್ ಮಾಡಿ ಮಸೂದೆಗಳನ್ನು, ಕಾನೂನುಗಳನ್ನು ರೂಪಿಸುತ್ತಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಿರಂತರವಾಗಿ ಮುಸ್ಲಿಮರ ಮೇಲೆ ದಾಳಿಗಳು ನಡೆಯುತ್ತಿದೆ. ಮನೆ ಗುಡಿಸಲುಗಳನ್ನು ಅಂಗಡಿ ಮುಂಗಟ್ಟುಗಳನ್ನು ಬುಲ್ಡೋಝರ್ ಗಳ ಮೂಲಕ ಕೆಡವಿ ಹಾಕಲಾಗುತ್ತಿದ್ದೆ. ಇದೀಗ ಮುಸ್ಲಿಮರ ಆಸ್ತಿಯಾಗಿರುವ ವಕ್ಫ್ ವಿಚಾರಕ್ಕೂ ಕೈ ಹಾಕಿ ಮುಸ್ಲಿಮರ ವಕ್ಫ್ ಆಸ್ತಿಯನ್ನು ತನ್ನ ತೆಕ್ಕೆಗೆ ತೆಗೆದು ಕೊಳ್ಳುವ ಪ್ರಯತ್ನದಲ್ಲಿ ಸರ್ಕಾರವಿದೆ ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ನಡೆಯಾಗಿದೆ. ಈ ವಿಚಾರದಲ್ಲಿ SDPI ಮೌನ ವಹಿಸುವುದಿಲ್ಲ ಎಂದು ಹೇಳಿದರು.

ಈ ಸಂಧರ್ಭದಲ್ಲಿ  ಪಕ್ಷದ ನಾಯಕರುಗಳಾದ ಎಸ್ ಡಿ ಪಿ ಐ ಜಿಲ್ಲಾ ಸಮಿತಿ ಸದಸ್ಯರಾದ ತಾಹೀರ್ ಶೇಖ್, ರಾಮದುರ್ಗ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಜಾಕೀರ ಕೌಜಲಗಿ,ಉಪಾಧ್ಯಕ್ಷರಾದ ಸಾದಿಕ್ ದಿಲಾವರ್  , ಕಾರ್ಯದರ್ಶಿ ಇಲಿಯಾಸ್ ಪೆಂಡಾರಿ, ಉಪ್ ಕಾರ್ಯದರ್ಶಿ ಅಲ್ತಾಫ್ ಮುಲ್ಲಾ,ಮತ್ತು ಅನೇಕ ಮುಸ್ಲಿಂ ಸಮಾಜದ ಮುಖಂಡರೂ ಭಾಗವಹಿಸದ್ದರು.

 

ವರದಿ-Md ಸೋಹಿಲ್ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ