ಹುಕ್ಕೇರಿ : ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತಿ ಅಧಿಕಾರಿ ವಿರುದ್ಧ ಕ್ರಮಕ್ಕೆ ಶಾಸಕರಿಗೆ ಮನವಿ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ ಪಂಚಾಯತಿ ಅಭಿವೃದ್ಧಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಆತನ ವಿರುದ್ಧ ಕ್ರಮ ಜರುಗಿಸಿ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯರು ಮನವಿ ಸಲ್ಲಿಸದರು ಕೂಡ ಕ್ರಮ ಜರುಗಿಸುತ್ತಿಲ್ಲ ಎಂದು ಶಾಸಕ ನಿಖಿಲ್ ಕತ್ತಿ ಅವರಿಗೆ ಮನವಿ ಸಲ್ಲಿಸಿದರು ಪಟ್ಟಣದ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಮದಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಮನವಿ ಸಲ್ಲಿಸಿ ಮಾತನಾಡಿದ ಅವರು ಸಾರ್ವಜನಿಕರ ಮೂಲ ಸೌಕರ್ಯ ದಾಖಲಾತಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರ ಯಾವುದೇ ಕೆಲಸ ಹೇಳಿದರು ಕೂಡ ಪಿಡಿಒ ಸ್ಪಂದಿಸುತ್ತಿಲ್ಲ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಸದಸ್ಯರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಟಿ ಆರ್ ಮಲ್ಲಾಡದ. ಅವರಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಪಿಡಿಓ ಜೊತೆ ತಾಲ್ಲೂಕ್ ಪಂಚಾಯತಿ ಅಧಿಕಾರಿ ಕೂಡ ಹಣ ದುರುಪಯೋಗದಲ್ಲಿ ಶಾಮಿಲ್ ಆಗಿದ್ದಾರೆ ಎಂಬುದು ಕಂಡು ಬರುತ್ತದೆ ಇವರಿಬ್ಬರನ್ನು ವರ್ಗಾವಣೆ ಮಾಡಿ ನಮ್ಮ ಗ್ರಾಮಕ್ಕೆ ನ್ಯಾಯ ಒದಗಿಸಬೇಕೆಂದು ಹೇಳಿದರು. ತಾಲೂಕಿನ ಮದಿಹಳ್ಳಿ ಬೋರಗಲ್ ಶಿರಡಾಣ ಸೇರಿದಂತೆ ಹಲವಾರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಣ ದುರ್ಬಳಿಕೆ ಬಗ್ಗೆ ಸಾರ್ವಜನಿಕರಿಂದ ದೂರುಗಳಿದ್ದು ಸೂಕ್ತ ಕ್ರಮದ ಕುರಿತು ಮೇಲಾಧಿಕಾರಿಗಳಿಗೆ ಸೂಚಿಸಲಾಗುವುದು ಶಾಸಕ ನಿಖಿಲ್ ಕತ್ತಿ ಅವರು ಹೇಳಿದ್ದಾರೆ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಮಾನಿಕ್ ಭಾಗಿ. ಶೋಭಾ ಪಾಟೀಲ . ಕಾಶಿನಾಥ್ ಮುತ್ತಗಿ . ರಮೇಶ್ ಆಲಕನೂರಿ. ರವೀಂದ್ರ ಚೌಗಲಾ . ಗುರುಸಿದ್ಧ ಹಿಡಕಲ. ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಜರಿದ್ದರು ಮತ್ತಿತರು ಉಪಸ್ಥಿಥರಿದ್ದರು
ವರದಿ : ಸದಾನಂದ ಎಚ್