ಬೀದರ ನಗರದ ಹೊರ ವಲಯದ ಪ್ರತಿಷ್ಠಿತ ನೂರ ಸಮೂಹ ಶಿಕ್ಷಣ ಸಂಸ್ಥೆ ಬೀದರನ ಕಾರ್ಯದರ್ಶಿ ಹಾಗೂ ಬೀದರ ಜಿಲ್ಲಾ ವಕ್ಫ ಬೋರ್ಡ್ ಸಲಹಾ ಸಮೀತಿ ಅಧ್ಯಕ್ಷ ಮೊಹ್ಮದ್ ಫೇರೋಜ್ ಖಾನ್ ರವರನ್ನು ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೇಸ್ನ ಎನ್.ಎಸ್.ಯು.ಐ. ಸಂಯೋಜಕರಾಗಿ ನೇಮಕ ಗೊಂಡಿದ್ದಾರೆ.
ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಸೂಚನೆ ಮೇರೆಗೆ ಎನ್.ಎಸ್.ಯು.ಐ. ರಾಷ್ಟ್ರೀಯ ಅಧ್ಯಕ್ಷ ವರುಣ ಚೌದರಿ ಈ ನೇಮಕಾತಿ ಮಾಡಿದ್ದು,
ರಾಷ್ಟ್ರ ಮಟ್ಟದ ಸಂಘಟನೆಯಲ್ಲಿ ತೊಡಗುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.
ಮೊಹ್ಮದ್ ಫೇರೋಜ್ ಖಾನ್ ರವರ ನೇಮಕಾತಿ ಮಾಡಿರುವುದಕ್ಕೆ ನೂರ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೊಹ್ಮದ್ ಇಮ್ರಾನ್ ಸಯೀದ್, ಡಾ, ಯೂಸುಫ್ ಖಾನ್, ಡಾ. ಸಮೀರ ಖಾನ್, ಡಾ. ಕೃಷ್ಠಿನಾ ಪ್ರವೀಣ, ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಹರ್ಷವ್ಯಕ್ತಪಡಿಸಿದರು.
ವರದಿ : ಪ್ರದೀಪ್ ಕುಮಾರ್ ದಾದನೂರ್