ಅಕಾಲಿಕ ನಿಧನರಾದ ಬಿಎಫ್ ಟಿ. ಬಿಎಫ್ ಟಿಗಳು ಸೇರಿಕೊಂಡು 1 ಲಕ್ಷ ರೂಪಾಯಿ ಧನಸಹಾಯ ವಿತರಣೆ

ಬೆನಿವಾಡ  ಅಕಾಲಿಕ ನಿಧನರಾದ ಬಿಎಫ್‌ಟಿ ಬೆನಿವಾಡ ಗ್ರಾಮದ ಹೊಸಪೇಟ ಕುಟುಂಬಕ್ಕೆ ಎಲ್ಲ ಬಿಎಫ್ ಟಿ ಗಳು ಸೇರಿಕೊಂಡು 1 ಲಕ್ಷ ರೂಪಾಯಿ ಧನಸಹಾಯ ವಿತರಣೆ

 

 

ಹುಕ್ಕೇರಿ : ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ನರೇಗಾ ಯೋಜನೆ ಬಿಎಫ್‌ಟಿಗೆ ಭದ್ರತೆ ಇಲ್ಲದೇ ಸರ್ಕಾರದಿಂದ ಆರೋಗ್ಯ ವಿಮೆ ಕಲ್ಪಿಸಬೇಕು ಎಂದು ಬೇರ್‌ಫಟ್ ಟೆಕ್ನಿಷಿಯನ್ಸ್‌ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಭೀಮೇಶ ಕೆ.ಆ‌ರ್. ಒತ್ತಾಯಿಸಿದರು.

 

ತಾಲೂಕಿನ ಬೆಣಿವಾಡ ಗ್ರಾಮದಲ್ಲಿ ಬಿಎಫ್‌ಟಿಯಾಗಿ ಹುಕ್ಕೇರಿ ತಾಲೂಕು ಪಂಚಾಯಿತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿದ್ದ ಮಲ್ಲಿಕಾರ್ಜುನ ಹೊಸಪೇಟೆ ಅಕಾಲಿಕವಾಗಿ ನಿಧನರಾದ ಹಿನ್ನಲೆಯಲ್ಲಿ ಕುಟುಂಬಕ್ಕೆ 1 ಲಕ್ಷ ರೂ. ಧನ ಸಹಾಯ ವಿತರಿಸಲಾಗಿದೆ.

 

ಸರ್ಕಾರದಿಂದ ಬಿಎಫ್‌ಟಿಗಳಿಗೆ ಐಎಸ್‌ಐ, ಪಿಎಫ್ ಮತ್ತು ಆರೋಗ್ಯ ವಿಮೆ ಸೌಲಭ್ಯ ಇಲ್ಲದಿರುವ ಅನೇಕ ಕುಟುಂಬಗಳು ಬಳಲುತ್ತಿವೆ. ಕೂಡಲೇ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬಿಎಫ್‌ಟಿಗಳಿಗೆ ಭದ್ರತೆ ಒದಗಿಸಬೇಕು. ನಿಧನರಾದ ಬಿಎಫ್‌ಟಿಗಳ ಕುಟುಂಬಕ್ಕೆ ಆಸರೆಯಾಗುವ ಮಾದರಿ ಕರ್ನಾಟಕ ರಾಜ್ಯ ಬೇರ್‌ಫಟ್ ಟೆಕ್ನಿಷಿಯನ್ಸ್ ಕ್ಷೇಮಾಭಿವೃದ್ಧಿ ಸಂಘ ಸಹಾಯ ಮಾಡುತ್ತಾ ಬಂದಿದೆ ಎಂದು ಅವರು ಹೇಳಿದರು.

 

ತಾಲೂಕು ಅಧ್ಯಕ್ಷ ಸುರೇಶ ಖಾತೇದಾರ ಮಾತನಾಡಿ, ಸಂಘದ ಗೌರವ ಧನದಿಂದ ಸಂಗ್ರಹಿಸಿದ ವಂತಿಗೆಯಆಡಳಿ ಹೊಸಪೇಟೆ ಕುಟುಂಬಕ್ಕೆ 1 ಲಕ್ಷ ರೂ ತುಂಬಿದೆ ಎಂದು ಸಾಂತ್ವನ ಹೇಳಿ ಧೈರ್ಯ ತುಂಬಿದರು.

 

ರಾಜ್ಯ ಉಪಾಧ್ಯಕ್ಷ ಕಲ್ಯಾಣಿ ಪೂಜೇರಿ, ಖಜಾಂಚಿ ಕಿರಣಕುಮಾರ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಅಗಸರ, ಸಹ ಕಾರ್ಯದರ್ಶಿ ಸಂಜಯ ಕಾಳೆ, ಖಜಾಂಚಿ ಉಮೇಶ ಪಾಟೀಲ, ಪದಾಧಿಕಾರಿ ಮಂಜುನಾಥ ದನವಾಡೆ, ವಿಠಲ ಬನೋಶಿ, ಪ್ರದೀಪ ಮುರಗೋಡ, ಬಸವರಾಜ ಸೊಂಟನವರ, ಬಸವರಾಜ ಇಟನಾಳ, ಅಂಬರೀಶ, ರಾಘವೇಂದ್ರ, ಬಸವರಾಜ ಅವರು ಆಗಮಿಸಿದ್ದರು.

 

ವರದಿ/ಸದಾನಂದ ಎಚ್

error: Content is protected !!