ಲ್ಯಾಂಡ ಆರ್ಮಿಗೆ ನೀಡಿರುವ KKRDB ಅನುದಾನದ ಕಾಮಗಾರಿಗಳನ್ನು ಹಿಂಪಡೆಯಬೇಕೆಂದು ಅ.10 ರಂದು ಬೃಹತ್ ಹೋರಾಟ ಸಂದೀಪ್ ಭರಣಿ

ಕಲಬುರಗಿ ಜಿಲ್ಲೆಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದ ಕಾಮಗಾರಿಗಳನ್ನು ಕಾನೂನು ಬಾಹಿರವಾಗಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (ಲ್ಯಾಂಡ ಆರ್ಮಿ) ಅವರಿಗೆ ಎಲ್ಲಾ ಕಾಮಗಾರಿಗಳನ್ನು ನೀಡಿ ನಮ್ಮ ಭಾಗದ ಗುತ್ತಿಗೆದಾರರ ಹೊಟ್ಟೆಗೆ ಹೊಡೆಯುತ್ತಿದ್ದಾರೆ.ಜಿಲ್ಲೆಯಲ್ಲಿ ಲ್ಯಾಂಡ್ ಆರ್ಮಿ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆ ಮಟ್ಟದಿಂದ ನಡೆಯುತ್ತಿದ್ದು,ಲ್ಯಾಂಡ್ ಆರ್ಮಿ ಕೆಲಸ ಮಾಡದೆ ಮೂರನೇ ವ್ಯಕ್ತಿಗೆ ಕಾಮಗಾರಿ ನೀಡಿ ಅವರಿಂದ 30% percentage ತೆಗೆದುಕೊಂಡು ಕಾಮಗಾರಿಗಳನ್ನು ನೀಡುತ್ತಿದ್ದಾರೆ ಇದನ್ನು ಖಂಡಿಸಿ,ಲ್ಯಾಂಡ್ ಆರ್ಮಿಗೆ ನೀಡಿರುವ ಎಲ್ಲಾ ಕಾಮಗಾರಿಗಳನ್ನು ಹಿಂಪಡೆದು ಆನ್ ಲೈನ್ ಟೆಂಡರ್ ಮುಖಾಂತರ ಅರ್ಹತೆ ಇರುವ ಗುತ್ತಿಗೆದಾರರಿಗೆ ಕಾಮಗಾರಿಯನ್ನು ನೀಡಬೇಕು ಹಾಗೂ ಲ್ಯಾಂಡ್ ಆರ್ಮಿ ಮಾಡಿರುವ ಕಳಪೆ ಮಟ್ಟದ ಕಾಮಗಾರಿಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಅಕ್ಟೋಬರ್ 10ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬೃಹತ್ ಹೋರಾಟ ಮಾಡಿ ರಾಜ್ಯದ ಗೌವಾರನ್ವಿತ ರಾಜ್ಯಪಾಲರಿಗೆ ದೂರು ಮನವಿ ನೀಡಲಾಗುವುದು ಎಂದು ಜಿಲ್ಲಾಧ್ಯಕ್ಷ ಸಂದೀಪ್ ಭರಣಿ ತಿಳಿಸಿದ್ದಾರೆ.