ಚಿಂಚೋಳಿ ಜಯಂತಿ ಕೆಲವೇ ಜನರ ಸ್ವತ್ತಾಗಿ ಪರಿವರ್ತನೆ ಆಗಿದೆಯಾ? -ಶ್ರೀಮಂತ ಬಿ ಕಟ್ಟಿಮನಿ

2024 ಸಾಲಿನ ಡಾ. ಅಂಬೇಡ್ಕರ್ ಜಯಂತಿ ಇನ್ನೂ ದಿನಾಂಕ ನಿಗದಿಯಾಗಿಲ್ಲ ಯಾಕೆ, ಸಮಿತಿ ಉತ್ತರ ನೀಡಬೇಕು, ಚಿಂಚೋಳಿ ಜಯಂತಿ ಕೆಲವೇ ಜನರ ಸ್ವತ್ತಾಗಿ ಪರಿವರ್ತನೆ ಆಗಿದೆಯಾ? ಚಿಂಚೋಳಿ ನಗರದವರಿಗೆ ಸೀಮಿತ ಆಗಿದೇಯಾ, ಜನ ಸೇರಲು ಗ್ರಾಮೀಣ ಜನರು ಬೇಕು, ಜಯಂತಿ ಮಾತ್ರ ಚಿಂಚೋಳಿ ನಗರದವರಿಂದ, ಇಡೀ ಸಮಾಜ ಇವರ ಹಿಂದೆ ಇದ್ದಂತೆ ತೀಳಿದುಕೊಂಡಿದ್ದಾರೆ, ಡಾ ಅಂಬೇಡ್ಕರ್ ರವರನ್ನು ಸ್ವಾರ್ಥ ರಾಜಕೀಯ ಬಳಸುವುದು ಬಿಡಿ, ಸಮಾಜ ಪರಿವರ್ತನೆಗಾಗಿ ಜಯಂತಿ ಮಾಡಿ. 2024 ರ ಡಾ ಅಂಬೇಡ್ಕರ್ ಜಯಂತಿ ಕಳೆದ ಎಳು ತಿಂಗಳಿಂದ ಮಾಡುತ್ತಿಲ್ಲಾ, ಅದರ ಹಿಂದಿರುವ ವಿಷಯ ಎಲ್ಲರಿಗೂ ಗೊತ್ತು, ಗ್ರಾಮೀಣ ಜನರು ಮುರ್ಖರಲ್ಲಾ, ಕೆಲವೇ ಜನರ ಸ್ವತ್ತಾಗಿದೆ ಜಯಂತಿ ಸಮೀತಿ, ಇದು ಸರಿಯಲ್ಲಾ. ನವೆಂಬರ ತಿಂಗಳ ಒಳಗಾಗಿ ಜಯಂತಿ ಆಚರಣೆ ಮಾಡಬೇಕು, ಇಲ್ಲದಿದ್ದರೆ ಸಮಾಜ ನಿಮ್ಮನ್ನು ನೋಡುವ ಭಾವನೆ ಬದಲಾಗುತ್ತೆ. ಡಾ.ಅಂಬೇಡ್ಕರ್ ಭವನವು ಕೆಲವರು ಸ್ವಂತ ಆಸ್ತಿಯಂತೆ ನಡೆದುಕೊಳ್ಳುವುದು ಎಷ್ಟು ಸರಿ ಗ್ರಾಮೀಣ ಜನರ ಇದಕ್ಕೆ ಯಾವುದೇ ಸಂಬಂಧವಿಲ್ಲದಂತೆ ಆಗಿದೆ ಸದರಿ ಡಾ. ಅಂಬೇಡ್ಕರ್ ಭವನ ಎಲ್ಲರಿಗೂ ಸಂಬಂಧಪಟ್ಟಿದ್ದು ದಲಿತ ಸಮಾಜ ಎಂದರೆ ತಾಲುಕಿನ ಸಮಸ್ತ ದಲಿತರು ಎಂದರ್ಥ ನಾವೆಲ್ಲರೂ ಧಡ್ಡರಲ್ಲಾ. ಎಂದು ದಲಿತ ಮುಖಂಡ ಶ್ರೀಮಂತ ಬಿ ಕಟ್ಟಿಮನಿ ಆಕ್ರೋಶ ಹೊರಹಾಕಿದ್ದಾರೆ.

 

ವರದಿ : ರಾಜೇಂದ್ರ ಪ್ರಸಾದ್ 

error: Content is protected !!