ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಬೇಡಿಕೆ:-
* ರಾಜ್ಯದ ಎಲ್ಲಾ ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸುವುದು.
* ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡುವುದು ಹಾಗೂ ಜಿಲ್ಲೆಯಲ್ಲಿ ಸ್ವಹಿಚ್ಚೆ ಇಲ್ಲದೆ ಸಾರ್ವಜನಿಕ ಹಿತಾಸಕ್ತಿ ಹಿತದೃಷ್ಟಿ ತೋರದೆ ವರ್ಗಾವಣೆ ಮಾಡಬಾರದು ಮತ್ತು ವರ್ಗಾವಣೆ ನಿಯಮಗಳಲ್ಲಿ ಯಾವುದೇ ಬದಲಾವಣೆಗೆ ಮುನ್ನ ಸಂಘದ ಸಲಹೆಯನ್ನು ಪಡೆಯುವುದು.
+ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ, ಬಡ್ತಿ ನೀಡಲು ಕ್ರಮಕೈಗೊಳ್ಳೂವುದು
* ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಯ ಅನುಷ್ಠಾನ ಪಡಿಸುವ ಬಗ್ಗೆ ಗುರಿ ನಿಗದಿಯನ್ನು ಕೈಬಿಡುವುದು ಅವಶ್ಯಕತೆ ಇಲ್ಲದ ಕಡೆಗಳಲ್ಲಿ ಗ್ರಾಮ ಪಂಚಾಯತ್ ಅಭಿಪ್ರಾಯ ಪಡೆದು ಕೂಸಿನ ಮನೆ ಮುಂದುವರಿಸುವ ಬಗ್ಗೆ ಕ್ರಮ ಕೈಗೊಳ್ಳುವುದು.
* ಕುಂದು ಕೊರತೆ ಪ್ರಾಧಿಕಾರವನ್ನು ಪೊಲೀಸ್ ಇಲಾಖೆ ಮಾದರಿಯಲ್ಲಿ ಸದೃಢಗೊಳಿಸುವುದು ಮತ್ತು ತಜ್ಞರ ಸಮಿತಿ ನೇಮಿಸುವುದು ಹಾಗೂ ಏಕರೂಪದ ಅಡಿಟ್ ಪದ್ಧತಿ ಜಾರಿಗೊಳಿಸುವುದು. ಮತ್ತು ಸೇವಾ ವಿಷಯಗಳನ್ನು ಸಕಾಲ ವ್ಯಾಪ್ತಿಗೆ ತರುವುದು. ಹಾಗೂ ಎಲ್ಲ ತಂತ್ರಾಂಶಗಳಿಗೆ ಏಕರೂಪದ ಸಹಾಯವಾಣಿ ವ್ಯವಸ್ಥೆ ಜಾರಿಗೊಳಿಸುವುದು.
* ಗ್ರಾಮ ಪಂಚಾಯತಿಗಳು ಮೇಲ್ದರ್ಜೇಗೇರಿಸಿದ ಸಂದರ್ಭದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಅಲ್ಲಿನ ಸರ್ಕಾರಿ ನೌಕರರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ವಿಲೀನಗೊಳ್ಳಿಸುವುದು.
* ಈಗಾಗಲೇ ಹಿಂಪಡೆಯಲಾಗಿರುವ 2007-08 ರಿಂದ 2011-12 ನೇ ಸಾಲಿನ ನರೇಗಾ ಲೋಕಾಯುಕ್ತ ಪ್ರಕಣವನ್ನು ಶಾಶ್ವತವಾಗಿ ಮುಕ್ತಾಯಗೊಳಿಸಿ ಲೋಕಾಯುಕ್ತಕ್ಕೆ ಮಾಹಿತಿ ನೀಡುವುದು.
+ ಸಂಘದ ಸಲಹೆ ಮೇರೆಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ನೌಕರಸ್ನೇಹಿ ತಿದ್ದುಪಡಿ ತರುವುದು.
: ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಇತರೆ ಇಲಾಖೆಯಲ್ಲಿರುವ ಸಮಾನಾಂತರ ಹುದ್ದೆಗಳಿಗೆ ನಿಯೋಜನೆ ಮೇಲೆ ಹೋಗಲು ಒಟ್ಟು ಮಂಜೂರಾದ ಹುದ್ದೆಗಳಲ್ಲಿ 25% ಹುದ್ದೆಗಳಿಗೆ ಅನುಮತಿ ನೀಡುವುದು.
* ವಸತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆ ಸೃಜನೆ ಮಾಡಿ ಪಂಚಾಯತಿ
ಅಭಿವೃದ್ಧಿ ಅಧಿಕಾರಿಗಳಿಗೆ ಪದೋನ್ನತಿ ನೀಡುವ ಮೂಲಕ ಭರ್ತಿ ಮಾಡುವುದು.
ಸ್ವಚ್ಛತಗಾರರ ವೃಂದದ ಬೇಡಿಕೆಗಳು
ಗ್ರಾಮ ಪಂಚಾಯತಿಗಳಂತಹ ಅನುವುಗಾರರು ಸರಳ ಮುಷ್ಟಿ ವೇತನವನ್ನು ಜಾರಿಗೊಳಿಸಬೇಕು ಮತ್ತು ಕಾರ್ಮಿಕ ಇಲಾಖೆಯನ್ನು ಹೊರತುಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಂದ ವೇತನವನ್ನು ನಿಗದಿಪಡಿಸಿ ನೌಕರರ ಖಾತೆಗಳಿಗೆ ಸಂಬಳ ಪಾವತಿ ಮಾಡುವುದು.
* ಇ.ಎಸ್.ಐ. ಮತ್ತು ಪಿ.ಎ.ಫ.ಜಾರಿಮಾಡಬೆಕು.
ಗ್ರಾಪಂ ಸಿಬ್ಬಂದಿಗಳಿಗೆ ಆರೋಗ್ಯ ವಿಮೆಯನ್ನು ಈಗಾಗಲೆ
50,000 . ಮಾಡಿದ್ದು. ಇದರಿಂದ ಯಾವ ನೌಕರರಿಗೂ ಪ್ರಯೋಜನ ಆಗುವುದಿಲ್ಲ ಆದ್ದರಿಂದ ಗ್ರಾಮ ಪಂಚಾಯಿತಿಯ ಕುಟುಂಬದವರಿಗೆ 5 ಲಕ್ಷ ಆರೋಗ್ಯ ವಿಮೆಯನ್ನು ಜಾರಿ ಮಾಡುವುದು.
ಕಾರ್ಯದರ್ಶಿ ಗ್ರೇಡ್ -2 ಮತ್ತು ಎಸ್.ಡಿ.ಎ.ಎ. ಹುದ್ದೆಗಳಿಗೆ ಸರ್ಕಾರದಿಂದ ಸೇವೆ ಒಳಗಿನ ನೇರ ನೇಮಕಾತಿ ಎಂದು ಮಾಡುತ್ತಿದ್ದು
ನೇರ ನೇಮಕಾತಿ ಎಂಬ ಪದವನ್ನು ಕೈ ಬಿಟ್ಟು ಮುಂಬಡ್ತಿ ಎಂಬ ಪದವನ್ನು ಸೇರಿಸಿ ಸರ್ಕಾರದ ಆದೇಶ ಮಾಡುವುದು.
ಗ್ರಾಮ ವಂಚಾಯಿತಿಯ ಪಂಚ ನೌಕರುಗಳಿಗೆ ನಿವೃತ್ತಿ ಉಪಧನವನ್ನು 60 ತಿಂಗಳ ವೇತನದ ಮೊತ್ತವಾಗಿ ಉಪಧನವನ್ನು ನೀಡುವುದು.
ಗ್ರಾಮ ಪಂಚಾಯಿತಿಯಲ್ಲಿ ಕ್ಲರ್ಕ್ ಕಂ ಡಿಇಓ, ಬಿಲ್ ಕಲೆಕ್ಕರ್ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ಒಂದು ಬಾರಿ ಅನುಮೋದನೆ ನೀಡುವುದು, ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಟರ್ ಮ್ಯಾನ್ ಆಟೆಂಡರ್ ಸ್ವಚ್ಛತೆಗಾರರಿಗೆ ಮತ್ತೊಮ್ಮೆ ಅವಕಾಶವನ್ನು ನೀಡಿ ವಿದ್ಯಾರ್ಹತೆ ಇಲ್ಲದಿದ್ದರೂ, ಹಿಂದಿನ ಸೇವೆಯನ್ನು ಪರಿಗಣಿಸಿ ಏಕಕಾಲದಲ್ಲಿ ಅನುಮೋದನೆಗೆ ಪರಿಗಣಿಸುವುದು.
+ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕರ ಹುದ್ದೆಯನ್ನು ಭರ್ತಿ ಮಾಡಲು ಕ್ರಮವಹಿಸುವುದು ಹಾಗೂ ಈ ಹುದ್ದೆಗಳಿಗೆ ಬಿಲ್ ಕಲೆಕ್ಸರ್ ಮತ್ತು ಕ್ಲರ್ಕ್ ಕಂ ಡಿ.ಓ’ಇವರನ್ನು ನೇಮಕ ಮಾಡಿಕೊಳ್ಳುವುದು.
ಕಾರ್ಯದರ್ಶಿ ಗ್ರೇಡ್ -2 ಪದೋನ್ನತಿಯನ್ನು ಶೇಕಡ 100% ಹೆಚ್ಚಿಸುವುದು ಹಾಗೂ ಕಾರ್ಯದರ್ಶಿ ಗ್ರೇಡ್ -1 ಪದೋನ್ನತಿ ಕೋಟವನ್ನು ಶೇಕಡ 70ಕ್ಕೆ ಹೆಚ್ಚಿಸುವುದು.
ಗ್ರಾಮ ಪಂಚಾಯ್ತಿ ಸಿಬ್ಬಂದಿಗಳಿಗೆ
ಕರವಸೂಲಿಗಾರರಿಗೆ ಹಾಗೂ ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ್ ರವರಿಗೆ ಒಂದು ಬಾರಿ ಮುಂಬಡ್ತಿಗೆ ಅವಕಾಶ ಕೊಡುವುದು.
+ ಸಾರ್ವಜನಿಕರು ಗ್ರಾಮ ಪಂಚಾಯಿತಿಯಿಂದ ಮತ್ತು ನಾಡ ಕಚೇರಿಯಿಂದ ಸೌಲಭ್ಯ ಪಡೆಯುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಆಸ್ತಿ ತೆರಿಗೆಯನ್ನು ವಸೂಲಾತಿ ಮಾಡಲು ಸಾಫ್ಟ್ರ್ ಲಿಂಕ್ ಮಾಡಿ ಕಡ್ಡಾಯಗೊಳಿಸುವುದು.
+ ಗ್ರಾಮ ಪಂಚಾಯಿತಿಯ ಪಂಚ ನೌಕರರು ಮರಣ ಹೊಂದಿದಾಗ 10 ಸಹಾಯಧನ ನೀಡುತ್ತಿದ್ದು ಇದು ಒಂದು ಲಕ್ಷಕ್ಕೆ ಹೆಚ್ಚಳ ಮಾಡಿ ಸರ್ಕಾರಿ ಆದೇಶ ಮಾಡುವುದು.
+ ವಾಟರ್ ಮ್ಯಾನ್ / ನೀರುಘಂಟೆಗಳಿಗೆ ವಾರಕ್ಕೆ ಒಂದು ದಿನ ರಜೆಯನ್ನು ನಿಗದಿಪಡಿಸುವುದು,
+ ಸ್ವಚ್ಛತಗಾರಿಗೆ ಸ್ವಚ್ಛತೆ ಮಾಡುವಂತಹ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು ಸರ್ಕಾರ ಆದೇಶ ಮಾಡುವುದು..”
ಗ್ರಾಮ ಪಂಚಾಯತ ಕರವಸೂಲಿಗಾರರು ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ್
ವೃಂದದಿಂದ ಸೇವೆ ಒಳಗಿನ ನೇರ ನೇಮಕಾತಿಗೆ ಎಸ್.ಡಿ.ಎ.ಎ ವೃಂದಕ್ಕೆ ಪದೋನ್ನತಿ
ಹೊದಲು 75% ರಷ್ಟು ಹೆಚ್ಚಳ ಮಾಡುವುದು.
ಗ್ರೇಡ್-1 ಕಾರ್ಯದರ್ಶಿಗಳ, ಬೇಡಿಕೆ:
+ ಗ್ರೇಡ್-1 ಕಾರ್ಯದರ್ಶಿಗಳ ವೃಂದದ ಜೇಷ್ಠತಾ ಪಟ್ಟಿಯನ್ನು ತುರ್ತಾಗಿ ಪ್ರಕಟಣೆ ಮಾಡಿ ವೃಂದಕ್ಕೆ ಮುಂಬಡ್ತಿ ನೀಡುವ ಬಗ್ಗೆ ಆಯುಕ್ತರಿಗೆ ಸರ್ಕಾರದ ನಿರ್ದೇಶನವಿದ್ದರೂ ಮುಂಬಡ್ತಿ ನೀಡದೆ ನಿರಾಸಕ್ತಿ ವಹಿಸುತ್ತಿರುವುದು ಸಾವಿರಕ್ಕೂ ಅಧಿಕ ವಿವಿಧ ವೃಂದದ ನೌಕರರು ಮುಂಬಡ್ತಿಯಿಂದ ವಂಚಿತರಾಗಿದ್ದು ಕಾಲಮಿತಿಯೊಳಗೆ ಮುಂಬಡ್ತಿ ಕ್ರಮವಹಿಸಲು ಕೋರುತ್ತೇವೆ.
ಕಾರ್ಯದರ್ಶಿ ಗ್ರೇಡ್-1 ವೃಂದದಿಂದ ಪಿಡಿಒ ವೃಂದಕ್ಕೆ ಈಗಿರುವ ಮುಂಬಡ್ತಿ ಅನುಪಾತವನ್ನು ಶೇಕಡ 35 ರಿಂದ 60ಕ್ಕೆ ಹೆಚ್ಚಿಸುವ ಬಗ್ಗೆ ( ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 2014ನೇ ಮತ್ತು 2018ನೇ ಸಾಲಿನಲ್ಲಿ ನೇರ ನೇಮಕಾತಿ ಹೊಂದಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಮತ್ತು ಕಾರ್ಯದರ್ಶಿ ಗ್ರೇಡ್ -1 ವೃಂದದ ಸಮಾನ ವಯಸ್ಕರು ಸೇವೆಗೆ ಸೇರಿರುವುದರಿಂದ ಮುಂಬಡ್ತಿಯ ಅವಕಾಶಗಳು ಕಡಿಮೆಯಾಗಿರುತ್ತದೆ).
* 7 ವರ್ಷ ಒಂದೇ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಜಿಲ್ಲೆಯ ಬೇರೆ ತಾಲ್ಲೂಕಿಕೆ ವರ್ಗಾಯಿಸುವ ಕರಡು ಅಧಿಸೂಚನೆಯನ್ನು ಹಿಂಪಡೆಯುವ ಬಗ್ಗೆ.
ಗ್ರೇಡ್-2 ಕಾರ್ಯದರ್ಶಿಗಳ, ಬೇಡಿಕೆ:-
+ ಗ್ರೇಡ್-2 ಕಾರ್ಯದರ್ಶಿ ಹುದ್ದೆಯಿಂದ ಗ್ರೇಡ್-1 ಕಾರ್ಯದರ್ಶಿ ಹುದ್ದೆಗೆ ಕಳೆದ 12 ರಿಂದ 14 ವರ್ಷಗಳ ಕಾಲ ಬಡ್ತಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದು ಗ್ರೇಡ್-2 ಕಾರ್ಯದರ್ಶಿಗಳಿಗೆ ನೇರ ನೇಮಕಾತಿ ಕೋಟಾದಡಿ ಒಂದು ಬಾರಿ ಏಕಕಾಲದಲ್ಲಿ ಬಡ್ತಿ ನೀಡುವುದು.
ಕಾರ್ಯದರ್ಶಿ ಗ್ರೇಡ್-1 ಹುದ್ದೆಗೆ ರಾಜ್ಯ ಮಟ್ಟದ ಜೇಷ್ಟತಾ ಪಟ್ಟಿ ಮಾಡುವ ದಿನಾಂಕ : 15.07.2023ರ ಆದೇಶವನ್ನು ಕೈ ಬಿಟ್ಟು ಹಿಂದಿನಂತೆ ಜಿಲ್ಲಾ ಮಟ್ಟದಲ್ಲಿ ಜೇಷ್ಠತಾ ಪಟ್ಟಿಯನ್ನು ಮಾಡಬೇಕು.
* ಗ್ರೇಡ್-2 ಕಾರ್ಯದರ್ಶಿ ಹುದ್ದೆಯಿಂದ ಗ್ರೇಡ್-1 ಕಾರ್ಯದರ್ಶಿ ಹುದ್ದೆಗೆ ಬಡ್ತಿ ಶೇ.33
ರಷ್ಟಿದ್ದು ಅದನ್ನು ಶೇ.80ಕ್ಕೆ ಹೆಚ್ಚಿಸಬೇಕು.
* 5000 ಕ್ಕಿಂತ ಹೆಚ್ಚಿಗೆ ಇರುವ ಗ್ರಾಮ ಪಂಚಾಯತಿಗಳನ್ನ ಗ್ರೇಡ್-1 ಪಂಚಾಯತಿ ಅಂತಾ ಮೇಲ್ದರ್ಜೇಗೆ ಏರಿಸಬೇಕು
+ ಗ್ರೇಡ್-2 ಕಾರ್ಯದರ್ಶಿ ಕರವಸೂಲಿ ಮಾಡಿದ ಸರ್ವಿಸಿನ 235 ಆದೇಶದ ಪ್ರಕಾರ ಹಳ ಪಿಂಚಣಿ ಯೋಜನೆಗೆ ಹಿಂದಿನ ಸರ್ವಿಸ್ ಆಧಾರದ ಮೇಲೆ ಹಳೆ ಪಿಂಚಾಣಿ ಯೋಜನೆ ಜಾರಿ ಮಾಡಬೇಕು
* ಗ್ರೇಡ್-1 ಕಾರ್ಯದರ್ಶಿ ಹುದ್ದೆಗೆ ಒಂದು ಬಾರಿ ಜಿಲ್ಲಾ ಮಟ್ಟದಲ್ಲಿ ಪದೋನ್ನತಿ ನೀಡಬೇಕು.
+ ಗ್ರೇಡ್-2 ಕಾರ್ಯದರ್ಶಿಗಳಿಗೆ (ಮೂಲ ಪಂಚಾಯತನಲ್ಲಿ ಖಾಲಿ ಇರುವ ಪಂ.ಅ.ಅ.ಗಳ ಪ್ರಭಾರ ಕೋಡಿಸಲು ಆದೇಶ ಮಾಡಿಸಬೇಕು)
* ಗ್ರೇಡ್-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಜೇಷ್ಟತಾ ಪಟ್ಟಿಯನ್ನು ಜಿಲ್ಲಾ ಮಟ್ಟದಲ್ಲಿ ಒಂದೇ ಜೇಷ್ಟತಾ ಪಟ್ಟಿಯನ್ನಾಗಿ ಮಾಡುಬೇಕು. ಈ ಸಂದರ್ಭದಲ್ಲಿ
* ಸಾಲೊಮನ್ ಮಾಳೆಗಾಂವ. ರಮೇಶ ಸೂಯ್ರವಂಶಿ. ಗೀತಾ. ಬಸವರಾಜ. ಉಮೇಶ ಜಾಬಾ. ಎಲ್ಲ
* ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು .