ಭಾಲ್ಕಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಶಾಸಕ ಪ್ರಭು ಚೌಹಾಣ್ ಭಾಗಿ

ಮಾಜಿ‌ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಬಿಜೆಪಿ ಸದಸ್ಯತಾ ಅಭಿಯಾನದ ಪ್ರಯುಕ್ತ ರಾಜ್ಯದ್ಯಕ್ಷರಾದ  ವಿಜಯೇಂದ್ರ ಯಡಿಯುರಪ್ಪ ಅವರ ನಿರ್ದೇಶನದಂತೆ ಭಾಲ್ಕಿ ಕ್ಷೇತ್ರದ ಸದಸ್ಯತಾ ಅಭಿಯಾನದ ಸಭೆಯಲ್ಲಿ ಭಾಗವಹಿಸಿದರು.

ಎರಡನೆಯ ಹಂತದ ಅಭಿಯಾನದಲ್ಲಿ ಕ್ಷೇತ್ರದಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡುವ ಮೂಲಕ ಭಾಲ್ಕಿ ಕ್ಷೇತ್ರವು
ಕೂಡ ಸದಸ್ಯತ್ವದ ಗುರಿ ತಲುಪಬೇಕೆಂದು ತಿಳಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷರಾದ ಸೋಮನಾಥ ಪಾಟೀಲ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ,ಮಂಡಲ ಅದ್ಯಕ್ಷರಾದ  ವೀರಣ್ಣಾ ಕಾರಬಾರಿ ಸೇರಿದಂತೆ ಪ್ರಮುಖ ಪದಾಧಿಕಾರಿಗಳಿದ್ದರು.