ಮಂಡ್ಯದಲ್ಲಿ ಆಯೋಜಿಸಲಾಗುತ್ತಿರುವ ೮೭ ಅಖಿಲ ಭಾರತ ಸಮ್ಮೇಳನದ ಪ್ರಚಾರ ಪ್ರಸಾರದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕನ್ನಡ ರಥ ಯಾತ್ರೆ ನಡೆಸಲಾಗುತ್ತಿದೆ.
ಇಂದು ಬೀದರ ಜಿಲ್ಲೆಗೆ ಆಗಮಿಸಿದಾಗ ಹಳ್ಳಿಖೇಡ( ಕೆ ) ಗ್ರಾಮ ಬಸವೇಶ್ವರ ವೃತ್ತದಲ್ಲಿ ಕನ್ನಡ ರಥದ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಖ್ಯಾತ ಕಾದಂಬರಿಕಾರರಾದ ಡಾ.ಎಸ್ ಎಲ್ ಭೈರಪ್ಪನವರು ಮಾಲಾರ್ಪಣೆ ಮಾಡಿ ಜಿಲ್ಲೆಗೆ ಬರಮಾಡಿಕೊಂಡ ಕ್ಷಣ ರೋಮಾಂಚಕಾರಿಯಾಗಿತ್ತು.
ಅವರು ಮಾತನಾಡಿ ಕನ್ನಡ ಕಟ್ಟಿದ ಈ ನೆಲ ಶರಣರ ನಾಡಾಗಿದೆ. ಈ ಭವ್ಯ ಪರಂಪರೆಯನ್ನು ಮರೆಮಾಚದೆ ಉಳಿಸಿ ಬೆಳೆಸಲು ಸಮ್ಮೇಳನ ಆಯೋಜಿಸಿದೆ, ತಾವು ಕನ್ನಡ ನುಡಿ ಜಾತ್ರಗೆ ಕೈಜೋಡಿಸಿರಿ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷರಾದ ನಾಡೋಜ ಡಾ ಮ.ನು.ಬಳಿಗಾರ್ ಕನ್ನಡ ರಥ ಕ್ಕೆ ಚಾಲನೆ ನೀಡಿ ಮಾತನಾಡಿ…. ಕನ್ನಡ ನಮ್ಮ ತಾಯಿ ಭಾಷೆ. ನಾವೆಲ್ಲರೂ ಇದನ್ನು ಬೆಳೆಸಲು ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ, ಕನ್ನಡದ ಕವಿರಾಜಮಾರ್ಗ ಕೊಟ್ಟ ನೆಲ ಬೀದರ.
ಜೊತೆಗೆ ಹನ್ನೆರಡನೆಯ ಶತಮಾನದಲ್ಲಿ ಕಾಯಕ ದಾಸೋಹ ಜೊತೆಗೆ ಕನ್ನಡಕ್ಕೆ ದೇವ ಭಾಷೆ ಮಾಡಿದವರು ನಮ್ಮ ಶರಣರು. ಸಕ್ಕರೆ ನಾಡಿನಲ್ಲಿಯ ಸಮ್ಮೇಳನ ಕ್ಕೆ ಗಡಿಭಾಗದ ಕನ್ನಡಿಗರು ಪಾಲ್ಗೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಹುಮನಾಬಾದ ತಾಲೂಕಿನ ದಂಡಾಧಿಕಾರಿಗಳು ಹಾಗೂ ತಹಸೀಲದಾರರಾದ ಅಂಜುಮ ತಬಸುಮ ಮಾತನಾಡಿ ಕನ್ನಡಕ್ಕೆ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷ ವಾಗುವದು,ಎಂಬ ಕವಿ ಹೃದಯ ನೆನಪು ಮಾಡಿಕೊಂಡು ಕನ್ನಡ ನಾಡು ನುಡಿ ಬೆಳವಣಿಗೆಆದರೆ ನಮ್ಮ ಸಂಸ್ಕ್ರತಿ ಉಳಿಯಬಲ್ಲುದಾಗಿದೆ.ಎಂದು ನುಡಿಯತ ಅಭಿಮಾನದ ಕನ್ನಡ ರಥ ಬರಮಾಡಿ ಕೋಳ್ಳಲು ಡಾ ಎಸ್ ಎಲ್ ಭೈರಪ್ಪನವರು ಹಾಗೂ ನಾಡೋಜ ಡಾ .ಮನು.ಬಳಿಗಾರ ಅವರು ಸಹಕರಿಸಿರುವುದು .ಜಿಲ್ಲೆಯ ಎಲ್ಲಾ ಕನ್ನಡ ಮನಸ್ಸುಗಳಿಗೆ ಸಂತಸ ಮೂಡಿಸಿದೆ ಎಂದು ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸುರೇಶ್ ಚನ್ನಶಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿ ಡಿಸೆಂಬರ್ ೨೦,೨೧,ಹಾಗೂ ೨೨ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ ಮಹೇಶ ಜೋಶಿ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲು ನಿರ್ಧರಿಸಿದ್ದು ಕನ್ನಡ ಜ್ಯೋತಿ ಯಾತ್ರೆಯ ಕನ್ನಡ ರಥ ಇಂದು ಸಾಂಸ್ಕೃತಿಕ ಭಾವನೆಗಳನ್ನು ಬೆಸೆಯಲು ಮಂಡ್ಯದಿಂದ ಬೀದರಗೆ ಆಗಮಿಸಿದೆ, ಎರಡು ದಿನಗಳ ಕಾಲ ನಮ್ಮ ಜಿಲ್ಲೆಯಲ್ಲಿ ಪ್ರಯಾಣಿಸಲಿದ್ದು ಎಲ್ಲ ಕನ್ನಡ ಮನಸ್ಸುಗಳು ಸಹಕರಿಸಲು ಮನವಿ ಮಾಡಿದರು.
ಹುಮನಾಬಾದ ತಾ ಕ.ಸಾ.ಪ. ಅಧ್ಯಕ್ಷರಾದ ಸಿದ್ದಲಿಂಗ ವಿ ನಿರ್ಣಾ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು , ನಿರೂಪಣೆ ಡಾ ಚಿದಾನಂದ ಚಿಕ್ಕಮಠ ಮಾಡಿದರು, ವಂದನಾರ್ಪಣೆ ದೀಪಿಕಾ ನಾಯ್ಕರ
ತಾ.ಪಂ. ಕಾ.ನಿ.ಅ.ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ
ಸಿದ್ರಾಮ ಶಿಂಧೆ ಅವರು ಸಂಪೂರ್ಣ ಉಸ್ತುವಾರಿ ವಹಿಸಿದರು.
ಈ ಸಮಾರಂಭದಲ್ಲಿ ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ, ಸಂಚಾಲಕರಾದ ಗೌರೆ ವಿಜಯಕುಮಾರ, ಸಿದ್ಧಾರೂಢ ಭಾಲ್ಕೆ ಡಾ. ಗೋವಿಂದ, ವೆಂಕಟೆಶ ಗುಡಾಳ, ಹಾಗೂ ಪ್ರಾ ಶಾ ಶಿ ಸಂಘದ ಜಿಲ್ಲಾಧ್ಯಕ್ಷರಾದ ರವೀಂದ್ರರಡ್ಡಿ ಮಾಲಿಪಾಟೀಲ,ಪ್ರೌ.ಶಾ.ಶಿ.ಸಂ. ಜಿಲ್ಲಾಧ್ಯಕ್ಷರಾದ ಶೇಖಮಹೆಬುಬ ಪಟೇಲ, ಶರದಕುಮಾರ ನಾರಯಣಪೆಟಕರ, ಮುರಗೇಂದ್ರ ಸಜ್ಜನಶೆಟ್ಟಿ, ಸುಭಾಷ ವಾರದ, ಭಕ್ತರಾಜ ಚಿತಾಪೊರೆ, ಉದಯಕುಮಾರ ವಾರದ , ಸಿದ್ದರಾಮ ಇಂಡಿ, ಮೈಲಾರಿ ಬುಕ್ಕಾ, ಶಶಿಧರ ಪಾಟೀಲ, ಮಡೆಪ್ಪ ಕುಂಬಾರ, ಶ್ರೀಕಾಂತ ಸೂಗಿ, ಶ್ರೀಧರ ಚವ್ಹಾಣ, ರಾಹುಲ ಪ್ರಸಾದ, ಭುವನೇಶ್ವರಿ
ಭಾಗವಹಿಸಿ ಮಳೆಯಲ್ಲೂ ನೂರಾರು
ಹೆಣ್ಣುಮಕ್ಕಳು, ಯುವಕರು, ಕನ್ನಡ ಅಭಿಮಾನಿಗಳು ಸೇರಿ ಕನ್ನಡ ರಥಕೆ ಬರಮಾಡಿಕೊಳ್ಳುವಲ್ಲಿ ಸಾಕ್ಷಿಯಾದರು…