ದೇವಸ್ಥಾನ ಅಭಿವೃದ್ಧಿಯಲ್ಲಿ ರಾಜಕೀಯ ಬೇಡ ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿ ಮಾಡೋಣ – ಶಾಸಕ ಅವಿನಾಶ ಜಾಧವ

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಳಗಿ ತಾಲೂಕಿನ ರಟಕಲ ದೇವಸ್ಥಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ನಡೆದ ದೇವಸ್ಥಾನದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಕುರಿತು ಚರ್ಚಿಸುವ ಸಭೆಯಲ್ಲಿ ದೇವಸ್ಥಾನದ ಆಡಳಿತಾಧಿಕಾರಿಗಳಾದ ಸೇಡಂ ಸಹಾಯಕ ಆಯುಕ್ತರಾದ ಪ್ರಭುರೆಡ್ಡಿ ಅವರ ಸಮ್ಮುಖದಲ್ಲಿ ಕ್ಷೇತ್ರದ ಶಾಸಕರಾದ ಡಾ.ಅವಿನಾಶ ಜಾಧವ ರವರು ಮಾತಾನಾಡಿ ದೇವಸ್ಥಾನದ ಅಭಿವೃದ್ಧಿಯಲ್ಲಿ ರಾಜಕೀಯ ಬೇಡಾ, ಭಕ್ತಿ ಮತ್ತು ಶ್ರದ್ದೆ ಇದ್ದರೆ ಸಾಕು, ನಂಬಿ ಬಂದವರ ಪಾಲಿನ ಆರಾಧ್ಯ ದೈವವಾಗಿರುವ ರಟಕಲ್‌ ರೇವಣ್ಣ ಸಿದ್ದೇಶ್ವರರ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತಾದಿಗಳು ಜಾತಿ ಜನಾಂಗದವರು ಎನ್ನದೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ ದೇವಸ್ಥಾನದ ಅಭಿವೃದ್ಧಿಗಾಗಿ ನಾವೆಲ್ಲರೂ ಒಗಟ್ಟಿನಿಂದ ಸೇವಾ ಕಾರ್ಯ ಮಾಡೋಣ ಯಾರು ದೇವಸ್ಥಾನದ ಅಭಿವೃದ್ಧಿಯಲ್ಲಿ ರಾಜಕೀಯ ಬೇಡಾ ಎಂದ ಶಾಸಕರು

ಈ ಭಾಗದ ಅರಾಧ್ಯ ದೈವ ಪ್ರತಿ ಭಕ್ತರ ಹೃದಯದಲ್ಲಿ ನೇಲೆಸಿರುವ ರೇವಣಸಿದ್ದೇಶ್ವರರು

ನೂರಾರು ವರ್ಷಗಳ ಇತಿಹಾಸವಿರುವ ಮತ್ತು ನಾಡಿನ ಎಲ್ಲೆಡೆ ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ಐತಿಹಾಸಿಕ ತಾಣ ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತ ಕಾಮಗಾರಿಗಳು ಇಲ್ಲಿ ನಡಿದಿವೆ ಸುತ್ತಲಿನ ಹತ್ತಾರು ಹಳ್ಳಿಗಳ ಜನರನ್ನ ಆಕರ್ಷಿಸುವಂತ ಎತ್ತರದ ಲಿಂಗಸಹಿತ ರೇವಣಸಿದ್ದೇಶ್ವರ ಮೂರ್ತಿ ಇವೆಲ್ಲವೂ ತಮ್ಮ ತಂದೆ ಹಾಗೂ ನನ್ನ ಕಾಲಾವಧಿಯಲ್ಲಿ ಅಭಿವೃದ್ಧಿಯ ಪರ್ವವನ್ನೆ ಹರಿಸಲಾಯಿತು

ತಮ್ಮೆಲ್ಲ ಅಭಿಪ್ರಾಯಕ್ಕಾಗಿ ಸಭೆ ಆಯೋಜನೆ ಮಾಡಲಾಗಿದ್ದು ತಮ್ಮ ಸಲಹೆ ಸೂಚನೆಗಳೊಂದಿಗೆ ದೇವಸ್ಥಾನದ ಅಭಿವೃದ್ಧಿ ಪಡಿಸಲಾಗುವುದು ಮುಂದಿನ ತಿಂಗಳು ನಡೆಯುವ ಸಭೆಯಲ್ಲಿ ಸಾರ್ವಜನಿಕವಾಗಿ ಲೆಕ್ಕಪತ್ರವನ್ನು ತಮ್ಮ ಮುಂದೆ ಇಡಲಾಗುವುದು ಎಂದರು

ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯದರ್ಶಿಗಳು, ಭಕ್ತಾದಿಗಳು, ಅರ್ಚಕರು, ಅಧಿಕಾರಿಗಳು, ಉಪಸ್ಥಿತರಿದ್ದರು

error: Content is protected !!