ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೀದರ ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳು ಬಗೆಹರಿಸುವ ಕುರಿತು ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ

  1. ಬೀದರ ಜಿಲ್ಲೆಯ ರೈತರಿಗೆ ಸಾವಿರಾರು ಸಮಸ್ಯೆಗಳಿದ್ದು, ಅದರಲ್ಲಿ ಈ ಕೆಳಕಂಡ ಪ್ರಮುಖವಾದ ಸಮಸ್ಯೆಗಳು ಅತೀ ಶೀಘ್ರದಲ್ಲಿ ಬಗೆಹರಿಸಬೇಕು.

ಬೀದರ ಜಿಲ್ಲೆಯಲ್ಲಿ ಮಳೆ ಬಿಳುತ್ತಿರುವುದರಿಂದ ಸೊಯಾಬಿನ್ ರಾಶಿಗಳು ಮಂದಗತಿಯಲ್ಲಿ ನಡೆದಿವೆ. ಸಂಪೂರ್ಣವಾಗಿ ರಾಶಿಗಳು ಮುಗಿದಿಲ್ಲ. ಆದರೆ ಖರೀದಿ ಕೇಂದ್ರಗಳಲ್ಲಿ ನೊಂದಣಿ ಪ್ರಕ್ರಿಯೆ ನಿಲ್ಲಿಸಿದ್ದಾರೆ. ಬಹಳಷ್ಟು ರೈತರು ಸೋಯಾಬಿನ್ ರಾಶಿಯಾಗದ ಕಾರಣ ನೋಂದಣಿ ಮಾಡಿಲ್ಲ. ಆದಕಾರಣ ಸೋಯಾಬಿನ್ ನೊಂದಣಿ ದಿನಾಂಕ ಇನ್ನು ಒಂದು ತಿಂಗಳವರೆಗೆ ವಿಸ್ತರಣೆ ಮಾಡಬೇಕು.

ಉದ್ದಿನ ರಾಶಿ ಮಾಡುವ ಸಮಯದಲ್ಲಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಬಂದಿರುವುದರಿಂದ ಉದ್ದಿನ ಬೆಳೆ ನಾಶವಾಗಿದ್ದು, ಕೈಗೆ ಬಂದಂತಹ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ. ಆದಕಾರಣ ಸರ್ಕಾರದ ವತಿಯಿಂದ ಸರ್ವೆ ಮಾಡಿ, ಉದ್ದಿನ ಬೆಳೆ ಹಾನಿಯಾದಂತಹ ರೈತರಿಗೆ ಎಕರೆಗೆ ರೂ.25000/- ಪರಿಹಾರ ಕೊಡಬೇಕು.

ಬೀದರ ಜಿಲ್ಲೆಯಲ್ಲಿ ತಾವುಗಳು ಉಸ್ತುವಾರಿ ಸಚಿವರು ಇರುವುದರಿಂದ ತಮ್ಮ ನೇತೃತ್ವದಲ್ಲಿ ಜಿಲ್ಲೆಯ ಕಬ್ಬಿನ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ರೈತ ಸಂಘದ ಪದಾಧಿಕಾರಿಗಳ ಸಭೆಯನ್ನು ಕರೆದು, ಪರಸ್ಪರ ಚರ್ಚೆ ಮಾಡಿ, ತಾವು

ಮಧ್ಯಸ್ಥಿಕೆ ವಹಿಸಿ, ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿನಲ್ಲಿ ಯೋಗ್ಯವಾದಂತಹ ಲಾಭದಾಯಕ ಕಬ್ಬಿಗೆ ಬೆಲೆ ಒದಗಿಸಿಕೊಡಬೇಕು ಹಾಗೂ ಬಿ.ಎಸ್.ಎಸ್.ಕೆ. ಕಾರ್ಖಾನೆ ಹಾಗೂ ಚಿಂಚೋಳಿಯ ಸಿದ್ಧಶ್ರೀ ಕಾರ್ಖಾನೆ ಬಂದಾಗಿರುವುದರಿಂದ ಜಿಲ್ಲೆಯಲ್ಲಿ ಉಳಿದ ಕಾರ್ಖಾನೆಗೆ ಕಬ್ಬು ನುರಿಸಲು ಸಮಸ್ಯೆ ಆಗುತ್ತದೆ. ಆದಕಾರಣ ಜಿಲ್ಲೆಯ ಉಳಿದ ಕಾರ್ಖಾನೆಗಳು ಶೀಘ್ರದಲ್ಲಿ ಪ್ರಾರಂಭಿಸಲು ಆದೇಶ ಮಾಡಬೇಕು.

ಬೀದರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಮಾರಾಟ ಮಾಡಲು ತೆಗೆದುಕೊಂಡು ಹೋದಂತಹ ದವಸ ಧಾನ್ಯಗಳಿಗೆ ಖಡಿ ಛನ್ನಿ ಹಾಗೂ ಅಡ್ಡ ಛನ್ನಿ ಹೀಗೆ ಎರಡೂ ಛನ್ನಿ ಮಾಡಿದರೂ ಕೂಡ ಪ್ರತಿ ಕ್ವಿಂಟಲ್‌ಗೆ 1.5 ಕೆ.ಜಿ. ಕಡತ ತೆಗೆದುಕೊಂಡು, ಶೇಕಡಾವಾರು ರೂ. 2/- ನಗದಿ ಹೆಸರಿನಲ್ಲಿ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೆ ತಾವುಗಳು ಕಡಿವಾಣ ಹಾಕಿ, ರೈತರ ಹಿತ ಕಾಪಾಡಬೇಕು.

 

ಬೀದರ ಕೆ.ಎಂ.ಎಫ್.ನವರು ದಿನಾಂಕ: 01-01-2024 ರಿಂದ ದಿನಾಂಕ; 01-

 

10-2024 ರ ವರೆಗೆ ಅಂದರೆ 10 ತಿಂಗಳಲ್ಲಿ ರೈತರು ಕೆ.ಎಂ.ಎಫ್.ಗೆ ಮಾರಾಟ

 

ಮಾಡುತ್ತಿರುವ ಹಾಲಿಗೆ ಪ್ರತಿ ಲೀಟರ್‌ಗೆ ಮೊದಲಿನ ದರಕ್ಕಿಂತ ರೂ.7/-

 

ಕಡಿಮೆ ಮಾಡಿ, ರೈತರಿಗೆ ಅನ್ಯಾಯ ಮಾಡಿದ್ದಾರೆ. ಆದಕಾರಣ ತಾವುಗಳು ಈ

 

ವಿಷಯದ ಬಗ್ಗೆ ಗಂಭೀರವಾಗಿ ಪರಿಗಣಿಸಿ, ರೈತರಿಗೆ ಮೊದಲಿನ ದರಕ್ಕಿಂತ

ಕಮ್-ಸೆ-ಕಮ್ ರೂ. 2/- ಹೆಚ್ಚಿಗೆ ಕೊಡಿಸಬೇಕು.

ಬೀದರ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ಬೆಳೆ ಹಾನಿಯಾಗಿರುವುದರಿಂದ ಸರಿಯಾಗಿ ಸಮೀಕ್ಷೆ ಮಾಡಿ, ಬೆಳೆ ವಿಮೆ ಪರಿಹಾರ ಒದಗಿಸಬೇಕು.

ಈ ಮೇಲ್ಕಂಡ ರೈತರ ಎಲ್ಲಾ ಸಮಸ್ಯೆಗಳು ಅತೀ ಶೀಘ್ರದಲ್ಲಿ ಬಗೆಹರಿಸಿ, ರೈತರ ಹಿತ ಕಾಪಾಡಬೇಕು, ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಮುಂದಾಗುವ ಅನಾಹುತಗಳಿಗೆ ತಾವೇ ಜವಾಬ್ದಾರರೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಒತ್ತಾಯಿಸಲಾಗುತ್ತಿದೆ.

ಈ ಸಂದರ್ಭದಲ್ಲಿ

ದಯಾನಂದ ಸ್ವಾಮಿ ಸಿರ್ಸಿ ಜಿಲ್ಲಾ ಪ್ರ.ಕಾರ್ಯದರ್ಶಿ

ಶ್ರೀಮಂತ ಬಿರಾದಾರ ಜಿಲ್ಲಾ ಕಾರ್ಯಾಧ್ಯಕ್ಷರು

ಸಿದ್ರಾಮಪ್ಪಾ ಆಣದೂರೆ ಜಿಲ್ಲಾಧ್ಯಕ್ಷರು.

 

ಶಂಕರೆಪ್ಪ ಪಾರಾ

ಜಿಲ್ಲಾ ಉಪಾಧ್ಯಕ್ಷರು.

ಸುವರ್ಣಾ ಬಳತೆ ಗೌರವಾಧ್ಯಕ್ಷರು, ಭಾಲ್ಕಿ ತಾಲುಕಾ.

ಸುಭಾಷ ರಗಟೆ

ಬಸವಕಲ್ಯಾಣ ತಾಲುಕಾಧ್ಯಕ್ಷರು

ರೇವಣಸಿದ್ದಪ್ಪ ಯರಬಾಗ ಬಸವಕಲ್ಯಾಣ ತಾಲುಕಾ

ಕಾರ್ಯದರ್ಶಿ.

ಶಿವಾನಂದ ಹುಡಗೆ

ರೈತ ಮುಖಂಡರು,

ಬೀದರ.

ಉಮಾಕಾಂತ ತೋರಣಾ

ರೈತ ಮುಖಂಡರು ಕಲನಗರ

 

ಶೇಷರಾವ ಕಣಜಿ ರಾಜ್ಯ ಪ್ರತಿನಿಧಿಗಳು

ಪ್ರವೀಣ ಕುಲಕರ್ಣಿ ಕಮಲನಗರ ತಾಲೂಕು ಅಧ್ಯಕ್ಷ.

ನಾಗಯ್ಯಾ ಸ್ವಾಮಿ ಬೀದರ ತಾಲೂಕಾಧ್ಯಕ್ಷರು

ಮಲ್ಲಿಕಾರ್ಜುನ ಚಕ್ಕಿ ರೈತ ಮುಖಂಡರು.

ಝರಣಪ್ಪ ದೇಶಮುಖ ರೈತ ಮುಖಂಡರು ಔರಾದ,

ಚಂದ್ರಶೇಖರ ಜಮಖಂಡಿ ರಾಜ್ಯ ಪ್ರತಿನಿಧಿಗಳು

ಬಾಬುರಾವ ಜೊಳದಾಬಕಾ ಭಾಲ್ಕಿ ತಾಲುಕಾಧ್ಯಕ್ಷರು.

ಪ್ರಕಾಶ ಬಾವಗೆ

ಔರಾದ ತಾಲುಕಾಧ್ಯಕ್ಷರು.

ಸುಮಂತ ಗ್ರಾಮ ಬೀದರ್ ತಾಲೂಕು ಕಾರ್ಯದರ್ಶಿ

ರಾಜಕುಮಾರ ಪಾಟೀಲ

ರೈತ ಮುಖಂಡರು ಔರಾದ. ಭಾಗವಹಿಸಿದ್ದರು.

error: Content is protected !!