ಹುಕ್ಕೇರಿ: ವಿದ್ಯಾರ್ಥಿಗಳು-ಪೋಷಕರು ಮತ್ತು ಶಿಕ್ಷಕರು ತಮ್ಮ ಪಾಲಿನ ಪಾತ್ರವನ್ನು ಪ್ರಾಮಾಣಿಕವಾಗಿ, ಜವಾಬ್ದಾರಿ ಯುತವಾಗಿ ಮಾಡಿದರೆ ಶಿಕ್ಷಣ ಕ್ಷೇತ್ರ ಬೆಳವಣಿಯಾಗುತ್ತದೆ ಎಂದು ವಿಜಯಪುರದ ಎಸ್ ಬಿ ವಿಸ್ಟಮ್ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶರಣಯ್ಯ ಭಂಡಾರಿಮಠ ಹೇಳಿದರು. ಅವರು ನಿಡಸೋಸಿ ಎಸ್‌ಜೆಪಿಎನ್ ಟ್ರಸ್ಟ್ ಬಿಸಿಎ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರೇಸ್ ಡೇ ಹಾಗು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಸತತ ಪ್ರಯತ್ನಶೀಲರಾದರೆ ಸಾಧನೆ ಸುಲಭ ಸಾಧ್ಯ ಎಂದರು. ಗೌರವ ಅತಿಥಿಯಾಗಿ ಆಗಮಿಸಿದ ಆದಿತ್ಯ ನೇಸರಿ ಮಾತನಾಡಿ ಎಸ್‌ಜೆಪಿಎನ್ ಟ್ರಸ್ಟ್ ಮಹಾವಿದ್ಯಾಲಯ ವಿದ್ಯಾರ್ಥಿಗಳ ಸಾಧನೆಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ವಹಿಸಿದ ಟ್ರಸ್ಟ್ ನಿರ್ದೇಶಕ ಬಿ.ಎಲ್.ಖೋತ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಬಸವರಾಜ ಹಾಲಭಾವಿ ಪರಿಚಯಿಸಿದರು.ಅಕ್ಷತಾ ಗಾವಡೆ ಸ್ವಾಗತಿಸಿದರು.ತೇಜಸ್ವಿನಿ ಸೂರ್ಯವಂಶಿ ನಿರೂಪಿಸಿದರು ಕೊನೆಯಲ್ಲಿ ಲಕ್ಷ್ಮಿ ಹಿರೇಮಠ ವಂದಿಸಿದರು.
ವರದಿ/ಸದಾನಂದ್ ಎಚ್