ಕನಕದಾಸರ ಚಿಂತನೆಗಳು ಮನುಕುಲಕ್ಕೆ ಮಾರ್ಗದರ್ಶಕ: ಶಾಸಕ ಪ್ರಭು ಚವ್ಹಾಣ

 

ಕನಕದಾಸರ ಚಿಂತನೆಗಳು ಸಮಸ್ತ ಮನುಕುಲಕ್ಕೆ ಮಾರ್ಗದರ್ಶಕವಾಗಿವೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ತಿಳಿಸಿದರು.

 

ಕನಕದಾಸರ ಜಯಂತಿಯ ನಿಮಿತ್ತ ಔರಾದ(ಬಿ) ತಾಲ್ಲೂಕಿನ ಬೋಂತಿ ತಾಂಡಾದಲ್ಲಿನ ಗೃಹ ಕಛೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದರು

 

ಕನಕದಾಸರು ನಾಡು ಕಂಡ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದರು. ಅಧ್ಯಾತ್ಮಕತೆಯನ್ನು ಮೈಗೂಡಿಸಿಕೊಂಡಿದ್ದ ಅವರು ಸಮಾಜದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು ಎಂದರು.

 

ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ಎತ್ತಿ ತೋರಿಸಿದವರು. ಕುಲ-ಕುಲವೆಂದು ಹೊಡೆದಾಡಬೇಡಿ ಎಂಬ ಸಂದೇಶ ನೀಡಿದ್ದ ಕನಕದಾಸರು ಸಮಾಜದ ಮೇಲು ಕೀಳುಗಳನ್ನು ತೊಡೆದು ಹಾಕಲು ಶ್ರಮಿಸಿದ್ದರು. ಅವರ ಚಿಂತನೆಗಳು ಸಾಮಾಜಿಕ ಸುಧಾರಣೆಗೆ ಪ್ರೇರಣೆಯಾಗಿವೆ ಎಂದರು.

 

ಅವರ ತತ್ವಾದರ್ಶಗಳು ಕೇವಲ ಜಯಂತಿಯ ಭಾಷಣಗಳಿಗೆ ಮಾತ್ರ ಸೀಮಿತವಾಗಬಾರದು. ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಹಾಗಾದಲ್ಲಿ ಸುಂದರ ಸಮಾಜ ಕಟ್ಟಲು ಸಾಧ್ಯ ಎಂದರು.

 

ಈ ಸಂದರ್ಭದಲ್ಲಿ ಸಚಿನ ರಾಠೋಡ, ಸುಭಾಷ ರಾಠೋಡ, ಗಜಾಧರ ರಾಠೋಡ, ದಾದಾರಾವ ಪವಾರ, ಬಳವಂತ ಪವಾರ, ಮನೋಹರ ಕಲಾಟೆ, ಕಂಟೆಪ್ಪ ಜೀರ್ಗೆ, ಅಭಿಜಿತ ಕೋಕನಾರೆ ಸೇರಿದಂತೆ ಇತರರಿದ್ದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!