ಭಕ್ತ ಶ್ರೀ ಕನಕದಾಸರ ಜಯಂತಿಯ ಅಂಗವಾಗಿ ಕುಂದಗೋಳದಲ್ಲಿ ಸಾಧಕರಿಗೆ ಸನ್ಮಾನ

ಕುಂದಗೋಳ ತಾಲೂಕಿನ ಆಡಳಿತ ಕೇಂದ್ರದಿಂದ ತಹಸೀಲ್ದಾರರ ಕಚೇರಿಯಲ್ಲಿ ದಾಸ ಶ್ರೇಷ್ಠ, ಸಂತ ಶ್ರೇಷ್ಠ ಭಕ್ತ ಶ್ರೀ ಕನಕದಾಸರ 537 ನೇಯ ಜಯಂತಿಯನ್ನು ಆಚರಿಸಲಾಯಿತು..

 

ಕನಕದಾಸರ ಜಯಂತಿಯಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಆರ್ ಪಾಟೀಲ ಹಾಗೂ ದಂಡಾಧಿಕಾರಿಗಳಾದ ಶ್ರೀ ರಾಜು ಮಾವರಕರ ನೇತೃತ್ವದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿಯನ್ನು ಇಂದು ವಿತರಿಸಲಾಯಿತು..

ಇದೇ ವೇಳೆ ಸುಮಾರು ಇಪತ್ತು ವರ್ಷಗಳಿಂದ ಸಮಾಜ ಮುಖಿ ಕಾರ್ಯಗಳನ್ನು ಮಾಡುವುದರ ಮುಖಾಂತರ ವಿಭಿನ್ನವಾಗಿ ಸಮಾಜ ಸೇವೆ ಸಲ್ಲಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡದಿರುವ ತಾಲೂಕಿನ ಚಾಕಲಬ್ಬಿ ಗ್ರಾಮದ ನಿವಾಸಿ ಸಮಾಜ ಸೇವಕರಾದ ಡಾ!! ಯಲ್ಲಪ್ಪ ಹ. ದಬಗೊಂದಿ ಅವರಿಗೆ “ಕುಂದಗೋಳದ 2024 ರ ಕನಕ ಶ್ರೀ ಪ್ರಶಸ್ತಿ” ಯನ್ನು ಪ್ರಧಾನ ಮಾಡಿ ಸನ್ಮಾನಿಸಲಾಯಿತು..

 

ಇದೇ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ!! ಯಲ್ಲಪ್ಪ ದಬಗೊಂದಿ ಅವರು ಕನಕ ದಾಸರು ಭಕ್ತಿ, ಭಾವದಿಂದ, ಬದುಕಿನ ಸರಳತೆಯ ಮೂಲಕವೇ ಜೀವನ ಗೆದ್ದವರು. ಮನುಷ್ಯನಲ್ಲಿರುವ ಅಹಂಕಾರ ಮತ್ತು ದೈನ್ಯತೆ ಎರಡೂ ಕೂಡ ಒಳ್ಳೆಯದಲ್ಲ. ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಹಂಕಾರ ಮತ್ತು ದೈನ್ಯತೆ ಎಂಬುದು ಮುಳುವಾಗುವ ಸ್ವಭಾವಗಳು ಎಂದು ಹೇಳಿದರು.

ದೈನ್ಯತೆ ಎಂಬುದು ಶೂದ್ರ ಪ್ರಜ್ಞೆ ಬೆಳೆಸುತ್ತದೆ. ಆದರೆ ಅಹಂಕಾರ ಶ್ರೇಷ್ಟ ಸಂಪ್ರಾದಯಕ್ಕೆ ನಾಂದಿ ಹಾಡುತ್ತದೆ. ಇದನ್ನು ಕನಕದಾಸರು ತಮ್ಮ ಕೃತಿಗಳಲ್ಲಿ ರಾಗಿ ಮತ್ತು ಅಕ್ಕಿಗೆ ಹೋಲಿಕೆ ಮಾಡಿ ಹೇಳಿದ್ದಾರೆ. ಅಕ್ಕಿ ಮತ್ತು ರಾಗಿ ಎರಡೂ ವಸ್ತುಗಳು ತಾವೇ ಶ್ರೇಷ್ಠರು ಎಂದು ಬೀಗುತ್ತಿದ್ದವು . ಶ್ರೀರಾಮ ಇವರೆಡರ ಗಟ್ಟಿತನವನ್ನು ಪರೀಕ್ಷೆ ಮಾಡಲು ಎರಡೂ ವಸ್ತುಗಳನ್ನು ಆರು ತಿಂಗಳ ಕಾಲ ಹಾಗೆ ಇಡಲು ಹೇಳಿದನು. ಅಕ್ಕಿ 6 ತಿಂಗಳುಗಳಲ್ಲಿ ಮುಗ್ಗಾಗಿ ಹೋಯಿತು. ಆದರೆ ರಾಗಿಗೆ ಮತ್ತಷ್ಟು ಹೊಳಪು ಬಂದಿತು. ಇದೊಂದು ಸಣ ಉದಾಹರಣೆ ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೆ ದಾರಿ ದೀಪವಾಗುತ್ತದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

 

ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಹಿರಿಯ ಮುಖಂಡರಾದ ಶ್ರೀ ಲಕ್ಶ್ಮಣಜ್ಜ ಚುಳಕಿ, ಚಂದನ್ ಗುಜ್ಜಾರ, ರವೀಂದ್ರ ವೈ. ಎಮ್, ಅರವಿಂದ ಕಟಗಿ, ಉಮೇಶ್ ಹೆಬಸೂರು, ಶಿವಾನಂದ ಬೆಂತೂರ ಹಾಗೂ ಮುಖಂಡರು ಪಾಲ್ಗೊಂಡಿದ್ದರು…

error: Content is protected !!