ಶ್ರೀ ಗುರುಸಿದ್ದ ಸ್ವಾಮೀಜಿಯವರ ಕನ್ನಡ ಭಾಷೆಗೆ ಪ್ರತಿಯೊಬ್ಬರು ಅಭಿಮಾನ್ ಹೊಂದಲ್ಲಿ

ಬೆಳಗಾವಿ : ರಾಜ್ಯೋತ್ಸವ ಆಚರಿಸುವ ಉದ್ದೇಶವೆಂದರೆ ಕರ್ನಾಟಕದಲ್ಲಿರುವ ಪ್ರತಿಯೊಬ್ಬ ಕನ್ನಡಿಗನು ಕೂಡ ಕನ್ನಡ ನಾಡು ನುಡಿ ನೆಲ ಭಾಷೆ ಸಂಸ್ಕೃತಿ ಬಗ್ಗೆ ಅಭಿಮಾನವನ್ನು ಹೊಂದಿರಬೇಕು ಎಂದು ಕಾರಂಜಿಮಠದ  ಪೂಜ್ಯಶ್ರೀ ಮ ನಿ ಪ್ರ ಗುರುಸಿದ್ದ ಸ್ವಾಮೀಜಿ ಅವರು

 

ಇಲ್ಲಿನ ಹಿಂದುವಾಡಿ ಗೊಮ್ಮಟೇಶ್ ಹೈಸ್ಕೂಲ್  ಸೋಮವಾರ ಕ್ರಾಂತಿ ಮಹಿಳಾ ಮಂಡಲ ಉಮಾ ಸಂಗೀತ ಪ್ರತಿಷ್ಠಾನ ಹಿಂದುವಾಡಿ ಬೆಳಗಾವಿ ಹಾಗೂ ದಾನೇಶ್ವರಿ ಎಜುಕೇಶನ್ ಟ್ರಸ್ಟ್ ಮದರ್ಸ್ ಟಚ್ ಕಿಂಡರ್ ಗಾರ್ಟನ್ ಸ್ಕೂಲ್ ಸಂಕೇಶ್ವರ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಪೂಜ್ಯಶ್ರೀ ಶ್ರೀ ಮ ನಿ ಪ್ರ ಗುರುಸಿದ್ಧ ಮಹಾಸ್ವಾಮಿಜಿಯವರ 75 ನೆಯ ಅಮೃತ ಮಹೋತ್ಸವವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು,

 

 

 

ಕನ್ನಡ ಅಭಿಮಾನ ಹೇಗಿರಬೇಕೆಂದರೆ ನಿತ್ಯವೂ ತಾಯಿ ಭುವನೇಶ್ವರಿ ತಾಯಿ ಆರಾಧನೆ ಜೊತೆಗೆ ಕನ್ನಡ ದಿನಪತ್ರಿಕೆಗಳನ್ನು   ಓದುವ ಹವ್ಯಾಸವನ್ನು ಹೊಂದಬೇಕು. ಕನ್ನಡಿಗರು ಕನ್ನಡ ಭಾಷೆಗೆ ಪ್ರಾಧಾನತೆಯನ್ನು ನೀಡಿದರೆ ಮಾತ್ರ ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದು ಸಾರ್ಥಕವಾಗುತ್ತದೆ ಎಂದರು.

 

ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಯನ್ನು ಬೆಳೆಸುವುದು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕನ್ನಡಿಗರ ಕರ್ತವ್ಯವಾಗಿದೆ ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸಲು ನಾವೆಲ್ಲರೂ ಪ್ರೋತ್ಸಾಹಿಸಬೇಕು ಅಂತ ಒಂದು ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಗೌರವಿ ಸುವ ಕಾರ್ಯವನ್ನು ಕ್ರಾಂತಿ ಮಹಿಳಾ ಮಂಡಲ ಮಾಡುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಎಷ್ಟು ವರ್ಷ ಬದುಕಿದೆವು ಎಂಬುದು ಮುಖ್ಯವಲ್ಲ ಸಮಾಜಕ್ಕಾಗಿ  ಒಳ್ಳೆಯ ಕಾರ್ಯಗಳನ್ನು ಮಾಡಬೇಕು  ಎಂದು ಹೇಳಿದರು.

ಮಾಜಿ ಯೋಧ ದಯಾನಂದ ಡಾಲಿ ಮಾತನಾಡಿ, ಪ್ರತಿ ತಿಂಗಳ ಕಾರ್ಯಕ್ರಮದಲ್ಲಿ ಮಾಜಿ ಯೋಧರನ್ನು  ಸನ್ಮಾನಿಸುತ್ತಿರುವುದು ರಾಜ್ಯೋತ್ಸವ ಆಚರಣೆ ಹಾಗೂ  ಮಕ್ಕಳ ಪ್ರತಿಭೆಯನ್ನು ಗುರುತಿಸುತ್ತಿರುವ ಕ್ರಾಂತಿ ಮಹಿಳಾ ಮಂಡಲ ಉಮಾ ಸಂಗೀತ ಪ್ರತಿಷ್ಠಾನ  ಮುಂತಾದವರು ಉಪಸ್ಥಿತರಿದ್ದರು.

 

ವರದಿ/ಸದಾನಂದ್ ಎಚ್

error: Content is protected !!