ಬಾವಲಗಾವ ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಕಾರಂಜಿ -ಕಲೋತ್ಸವ ಕಾರ್ಯಕ್ರಮ

 ಔರದ್ ತಾಲೂಕಿನಲ್ಲಿ ಸಮೂಹ ಸಂಪನಮೂಲ ಕೇಂದ್ರ ಭಂಡಾರಕುಮಟಾ ಅಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾವಲಗಾವ ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಕಾರಂಜಿ -ಕಲೋತ್ಸವ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮ ಇಸಿಓ ಸಂಜು ಮೇತ್ರೆ ಉದ್ಘಾಟನೆ ಮಾಡಿದರು ಕಲೋತ್ಸವ ಕಾರ್ಯಕ್ರಮದಿಂದ ಮಕ್ಕಳ ಪ್ರತಿಭೆ ಹೊರಹೋಮ್ಮಲು ಸಾಧ್ಯ ಎಂದು ನುಡಿದರು. ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಜುಕುಮಾರ್ ಮೇತ್ರೆ ಮಾತನಾಡಿ ಮಕ್ಕಳ ಪ್ರತಿಭೆ ಹೊರಹಕಲು ಇದೊಂದು ಉತ್ತಮ ವೇದಿಕೆ, ಸದರಿ ವೇದಿಕೆಯಿಂದ ಮಕ್ಕಳು ರಾಷ್ಟ್ರ ಮಟ್ಟಕ್ಕೂ ಗುರುತಿಸಿಕೊಳ್ಳಲು ಸಾಧ್ಯ ಎಂದರು. ವಲಯದ ಎಲ್ಲಾ ಮುಖ್ಯಗುರುಗಳನ್ನು, ಸಹಶಿಕ್ಷಕರನ್ನು ಸನ್ಮಾನಿಸಲಾಯಿತು.ಕರನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಪಂಢರಿ ಆಡೆ &ಇತರ ಶಿಕ್ಷಕರ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಅಶುಭಾಷಣ, ಚರ್ಚಾಸ್ಪರ್ಧೆ, ನಿಭಂದ, ಜಾನಪದ ನೃತ್ಯ, ಕ್ಲೇಮಡಲಿಂಗ, ಚಿತ್ರಕಲೆ, ರಂಗೋಲಿ, ಖವಾಲಿ, ಛದ್ಮವೇಶ ಮುಂತಾದ ಸ್ಪರ್ಧೆಗಳಲ್ಲಿ ವಿಜಯಶಾಲಿಯಾದ ಮಕ್ಕಳಿಗೆ ನಗದು ಬಹುಮಾನ, ಪ್ರಮಾಣ ಪತ್ರಗಳನ್ನು ಕೊಟ್ಟು ಹುರಿದುಂಬಿಸಲಾಯಿತು. ಕಾರ್ಯಕ್ರಮದಲ್ಲಿ ಮುಶಿ ಚಂದ್ರಕಾಂತ ನಿರ್ಮಳೆ, ಶಿವಾಜಿ ಶಿಗ್ರೆ, ರಾಣಡೇ ಸರ್, ಜೈಶ್ರೀ ಮೇಡಂ, ವನ್ಮಾಲಾ ಮೇಡಂ, ಜೈಪಾಲ್ ಸರ್,ವಿಠಲ್ ದೇವಕತೆ, ಪ್ರಕಾಶ ಬರ್ದಾಪುರೆ, ಗ್ರಾಂಪಂಚಾತ ಸದಸ್ಯರು, ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಜರಿದ್ದರು. CRC ವೈಭವಿ ಕುಲಕರ್ಣಿ ಸ್ವಾಗತ ಭಾಷಣ, ಶಾಲಾ ಮುಶಿ ವಂದನಾರ್ಪಣೆ ಮಾಡಿದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!