ತಂದೆ(ತಿಪ್ಪಣ್ಣ) ತಾಯಿ(ನಾಗಮ್ಮ) ಇವರ 29ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ, ಚಿಂಚೋಳಿ ತಾಲೂಕಿನ ರಾಣಾಪೂರ ಗ್ರಾಮದಲ್ಲಿ ದಿನಾಂಕ 30.11.2024 ಶನಿವಾರದಂದು “ಪಂಚಾಕ್ಷರ ಕೃಪಭೂಷಣ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಐನೊಳ್ಳಿಯ ಹಿರಿಯ ಸಂಗೀತ ಕಲಾವಿದರಾದ ರಾಮಯ್ಯ ಸ್ವಾಮಿ ಐನೊಳ್ಳಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಐನಾಪುರದ ಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಪಂಚಾಕ್ಷರಿ ದೇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ರಾಣಾಪೂರ ವೆಂಕಟೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ದಿವಾಕರರಾವ್ ಜಹಾಗಿರ್ದಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ದೂರದರ್ಶನದ ಖ್ಯಾತ ಹಾಸ್ಯ ಕಲಾವಿದರಾದ ನವಲಿಂಗ್ ಪಾಟೀಲ್ ಅವರು ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಅಂದು ನಾಡಿನ ಖ್ಯಾತ ಕಲಾವಿದರಿಂದ ಅಹೋ ರಾತ್ರಿ ಸಂಗೀತ ಜರುಗಲಿದೆ.
ಈ ಕಾರ್ಯಕ್ರಮವನ್ನು ನಾಗೇಂದ್ರ ರಾಣಾಪೂರ್ ಹಾಗೂ ಶ್ರೀಮತಿ ಜ್ಯೋತಿ ನಾಗೇಂದ್ರ ಅವರು ಆಯೋಜಿಸಿದ್ದಾರೆ.
ವರದಿ : ರಾಜೇಂದ್ರ ಪ್ರಸಾದ್