ಅಥಣಿ : ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಾಹಿತ್ಯ ಓದುವರ ಜೊತೆಗೆ ಕುವೆಂಪು ಅವರಂತಹ ಮಹಾನ್ ಕವಿಗಳ ಪರಿಚಯ ಮಾಡಿಕೊಳ್ಳುವುದು ಮಹತ್ವದ್ದು, ಕನ್ನಡಕ್ಕೆ ಕುವೆಂಪು ಅವರ ಕೊಡುಗೆ ಅನನ್ಯವಾದದ್ದು ಎಂದು ಜೆ ಎ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ ರಾಮ ಕುಲಕರ್ಣಿ ಅವರು ಹೇಳಿದರು.
ಅವರು ಸ್ಥಳೀಯ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯದಲ್ಲಿ ಕುವೆಂಪು ಪ್ರತಿಷ್ಠಾನ ಹಾಗೂ ಶ್ರೀ ಕೆ ಲೋಕಪೂರ ಪದವಿ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಒಂದು ದಿನದ ವಿದ್ಯಾರ್ಥಿಗಳ ಕುವೆಂಪು ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಚಾರ್ಯರ ಆರ್ ಎಂ ದೇವರೆಡ್ಡಿ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ಸತತವಾಗಿ ಅಧ್ಯಯನ ಮಾಡುವುದರಿಂದ ವೈಚಾರಿಕ ಮನೋಭಾವನೆ ಬೆಳೆಯುತ್ತದೆ ಹಾಗೂ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಹಾಗಾಗುತ್ತೆ ಎಂದರು
ನಂತರ ಸಂಯೋಜಕ ಡಾಕ್ಟರ್ ಗುರುಪಾದ ಮರೆಗುದ್ದಿ ಮಾತನಾಡಿ ಕುವೆಂಪು ಅವರ ಮಲೆನಾಡಿನ ಪ್ರಕೃತಿ ಸೌಂದರ್ಯದ ಜೊತೆಗೆ ಅವರ ಒಡನ ಅವರ ಒಡನಾಳಿನ ಮಾತುಗಳು ಆಕೃತಿಗಳಲ್ಲಿ ಮೂಡಿವೆ ಎಂದರು, ಕನ್ನಡ ವಿಭಾಗದ ಮುಖ್ಯಸ್ಥ ಎನ್ ಬಿ ಝರೆ ಸ್ವಾಗತಿಸಿದರು, ಕುಮಾರಿ ನಿಧಿ ಜೋಶಿ ನಿರೂಪಿಸಿದರು, ಮನೋಜ್ ಕುಮಾರ್ ಆಕಾಶ ವಂದಿಸಿದರು
ಸಾಯಂಕಾಲ ಜರುಗಿದ ಸಮಾರೋಪ ಕಾರ್ಯಕ್ರಮದಲ್ಲಿ ಜೆ ಎ ಶಿಕ್ಷಣ ಸಂಸ್ಥೆಯ ಉಪ ಕಾರ್ಯಧ್ಯಕ್ಷ ಎಸ್ ಎಂ ಪಾಟೀಲ ಮುಖ್ಯ ಅತಿಥಿಗಳಾಗಿ, ಡಾ ಬಾಳಾಸಾಬ ಲೋಕಾಪುರ ಅತಿಥಿಗಳಾಗಿದ್ದರು. ಈ ವೇಳೆ ಮಹಾವೀರ್ ಕಾಳೆ, ಜಿ ಎಂ ಕುಲಕರ್ಣಿ, ಭಾರತಿ ಅಗಸರ, ಗುರುಲಿಂಗ ಮಠಪತಿ, ಭಾಗ್ಯಶ್ರೀ ಗುಂಡಾ ಸೇರಿದಂತೆ ಮಹಾವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ ಭರತೇಶ ನಿಡೋಣಿ