ಬ್ಯಾಂಕ್‌ನಿಂದ 700 ಕೋಟಿ ರೂ. ಲಪಟಾವಣೆ: 1425 ಕೇರಳಿಯರಿಗಾಗಿ ಶೋಧ

ಕಾಸರಗೋಡು: ಕುವೈಟ್‌ ಬ್ಯಾಂಕ್‌ನಿಂದ ಸಾಲ ರೂಪದಲ್ಲಿ ಕೇರಳದ 1425 ಮಂದಿ 700 ಕೋಟಿ ರೂ. ಪಡೆದು ಮರು ಪಾವತಿಸದೆ ವಂಚನೆ ನಡೆಸಿ ಆ ದೇಶವನ್ನು ತೊರೆದ ಬಗ್ಗೆ ವರದಿಯಾಗಿದೆ.

 

ವಂಚನೆ ನಡೆಸಿದವರ ಪತ್ತೆಗಾಗಿ ಕೇರಳದಲ್ಲಿ ಶೋಧ ಆರಂಭಿಸಲಾಗಿದೆ. ಗಲ್ಫ್ ಬ್ಯಾಂಕ್‌ ಕುವೈಟ್‌ ಶೇರ್‌ ಹೋಲ್ಡಿಂಗ್‌ ಕಂಪೆನಿ ಪಬ್ಲಿಕ್‌ ಎಂಬ ಬ್ಯಾಂಕ್‌ನಿಂದ ಸಾಲ ಪಡೆದು ವಂಚಿಸಲಾಗಿದೆ.

 

ಈ ಬಗ್ಗೆ ಪ್ರಸ್ತುತ ಬ್ಯಾಂಕ್‌ ಅಧಿಕಾರಿಗಳು ಕೇರಳಕ್ಕೆ ಬಂದು ವಂಚನೆ ಬಗ್ಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ದೂರಿನ ತನಿಖೆಯನ್ನು ಕ್ರೈಂಬ್ರಾಂಚ್‌ ವಿಭಾಗಕ್ಕೆ ರಾಜ್ಯ ಪೊಲೀಸ್‌ಮಹಾನಿರ್ದೇಶಕರು ಹಸ್ತಾಂತರಿಸಿದ್ದಾರೆ.

2019 ರಿಂದ 2022 ರ ಅವಧಿಯಲ್ಲಿ ಈ ಬ್ಯಾಂಕ್‌ನಿಂದ 50 ಲಕ್ಷ ರೂ. ನಿಂದ 3 ಕೋಟಿ ರೂ. ತನಕ ಸಾಲ ರೂಪದಲ್ಲಿ ಪಡೆದು ಸಕಾಲದಲ್ಲಿ ಮರು ಪಾವತಿಸದೆ ವಂಚಿಸಿದ್ದಾಗಿ ತನಿಖೆಯಿಂದ ಪತ್ತೆಹಚ್ಚಲಾಗಿದೆ. ವಂಚನೆ ನಡೆಸಿ ಕೆಲವರು ಕೇರಳಕ್ಕೆ ವಾಪಸಾಗಿದ್ದಾರೆ. ಇನ್ನು ಕೆಲವರು ಯುರೋಪ್‌, ಅಮೆರಿಕಾ, ಕೆನಡಾ, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ಗೆ ತೆರಳಿದ್ದಾರೆ.

error: Content is protected !!