ಕಾಲ್ತುಳಿತದಲ್ಲಿ ಮಹಿಳೆ ಸಾವು ಕೇಸ್ ; ನಟ ‘ಅಲ್ಲು ಅರ್ಜುನ್’ ಅರೆಸ್ಟ್

ಹೈದರಾಬಾದ್ : ಪುಷ್ಪಾ -2 ಸಿನಿಮಾ ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಸಿಲುಕಿ ತಾಯಿಮಗ ಮೃತಪಟ್ಟ ಪ್ರಕರಣದಲ್ಲಿ ಖ್ಯಾತ ಸಿನಿಮಾ ನಟ ಅಲ್ಲು ಅರ್ಜುನ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್‌ ಕೇಂದ್ರ ವಲಯದ ಡಿಸಿಪಿ ಈ ವಿಷಯವನ್ನು ಖಚಿತಪಡಿಸಿದ್ದು, ಬಿಎನ್‌ಎಸ್‌ ಸೆಕ್ಷನ್‌ 105 ರ ಅಡಿಯಲ್ಲಿ ಅಲ್ಲು ಅರ್ಜುನ್‌ ಅವರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.

 

ನಟ ಅಲ್ಲರ್ಜುರ್ ಅವರನ್ನು ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಕರೆದೋಯ್ಯಲಾಗಿದೆ.

 

ಡಿಸೇಂಬರ್ 4 ರಂದು ಪುಷ್ಪಾ – 2 ಸಿನಿಮಾದ ಪ್ರಿಮಿಯರ್‌ ಶೋ ವೇಳೆ ಈ ಅವಘಡ ನಡೆದಿತ್ತು. ಪ್ರಿಮಿಯರ್‌ ಶೋ ನಲ್ಲಿ ಸ್ವತಃ ಅಲ್ಲು ಅರ್ಜುನ್‌ ಪಾಲ್ಗೊಂಡಿದ್ದು, ಅವರನ್ನು ನೋಡಲು ಜನ ನೂಕು ನುಗ್ಗಲಲ್ಲಿ ಧಾವಿಸಿದ್ದರು .ಕಾಲ್ತುಳಿತದಿಂದಾಗಿ ಓರ್ವ ಮಹಿಳೆ ಹಾಗೂ ಆಕೆಯ ಮಗ ಮೃತಪಟ್ಟಿದ್ದರು.

 

ಬಳಿಕ ಥಿಯೇಟರ್‌ ಮಾಲಿಕ, ಕಾರ್ಯಕ್ರಮದ ಸಂಘಟಕ, ಚಿತ್ರ ನಿರ್ಮಾಣದ ತಂಡದ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಪುಷ್ಪ 2 ಸಿನಿಮಾ ತಂಡ ಮೃತ ಕುಟುಂಬಕ್ಕೆ ಪರಿಹಾರವನ್ನೂ ನೀಡಿದ್ದರು.

 

 

ಬ್ಯುರೋ ರಿಪೋರ್ಟ್ jk news ಕನ್ನಡ ಹೈದರಾಬಾದ್

error: Content is protected !!