ಬೀದರ್ SP ಪ್ರದೀಪ್ ಗುಂಟಿ, ಐ.ಪಿ.ಎಸ್ ರವರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಹಾಗೂ ಹುಮನಾಬಾದ ಉಪ-ವಿಭಾಗದ ಉಪಾಧೀಕ್ಷಕರಾದ ಜೆ.ಎಸ್ ನ್ಯಾಮೆಗೌಡ, ಶ್ರೀನಿವಾಸ್ ಅಲ್ಲಾಪೂರ, ಸಿ.ಪಿ.ಐ ಚಿಟಗುಪ್ಪಾ ವೃತ್ತ ರವರ ಮುಂದಾಳತ್ವದಲ್ಲಿ ಮನ್ನಾಏಖೇಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಮಹೇಂದ್ರಕುಮಾರ, ಅವರು ತಮ್ಮ ಠಾಣೆಯ ಸಿಬ್ಬಂದಿರವರೊಂದಿಗೆ ಮೀನಕೆರಾ ಗ್ರಾಮದ ಬೋಮ್ಮಗೊಂಡೇಶ್ವರ ವೃತ್ತದ ಹತ್ತಿರ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮಾಹಿತಿಯಂತೆ ಪಿ.ಎಸ್.ಐ ರವರು ತಮ್ಮ ತಂಡದವರೊಂದಿಗೆ ಆರೋಪಿತನ ಮೇಲೆ ದಾಳಿ ಮಾಡಿ ಆರೋಪಿತನು ಸಾಗಿಸುತ್ತಿದ್ದ 1.540 ಕೆ.ಜಿ ಗಾಂಜಾ ಅ:ಕಿ: 1,50,000=00 ರೂಪಾಯಿ ಮೌಲ್ಯದ್ದು ಮತ್ತು ಅವನ ವಶದಿಂದ ಒಂದು ಮೊಬೈಲ್ ಅ:ಕಿ: 800=00 ರೂಪಾಯಿ ಹೀಗೆ ಒಟ್ಟು ಅ:ಕಿ: 1,50,800=00 ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತ್ಯ ಕ್ರಮ ಕೈಗೊಂಡಿದ್ದಾರೆ.
ದಾಳಿಯಲ್ಲಿ ಶ್ರಮಿಸಿದ ಮನ್ನಾಏಖೇಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಜಿಲ್ಲಾ ವರಿಷ್ಟಾಧಿಕಾರಿ ಪ್ರದೀಪ್ ಗುಂಟಿ ರವರು ಶ್ಲಾಘಿಸಿದ್ದಾರೆ,
ಬೀದರ ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ ಎಂದಿದ್ದಾರೆ.