ಚೆನ್ನಯ್ಯ ವಸ್ತ್ರದ್ಮ ಅಧ್ಯಕ್ಷತೆಯಲ್ಲಿ ಮಾಹಿತಿ ಹಕ್ಕು ಕಾರ್ಯಾಗಾರ ಕಾನೂನು ಅರಿವು

 

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಮಾಹಿತಿ ಹಕ್ಕು ಕಾರ್ಯಗಾರ ಮತ್ತು ಕಾನೂನು ಅರಿವು ಕಾರ್ಯಕ್ರಮ

 

ಕಲಬುರ್ಗಿ : ನಗರದ ರಾಜರಾಜೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಮಾಹಿತಿ ಹಕ್ಕು ಕಾರ್ಯಾಗಾರ ಹಾಗೂ ಕಾನೂನು ಅರಿವು ಕಾರ್ಯಕ್ರಮ ನಡೆಯಿತು,

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕಲಬುರ್ಗಿ ಬೀದರ್ ಸೇರಿದಂತೆ ವಿವಿಧ ತಾಲೂಕು ಜಿಲ್ಲೆಗಳ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿ ಚರ್ಚೆ ನಡೆಸಿದರು, ಮಾಹಿತಿ ಹಕ್ಕು ಕಾರ್ಯಕರ್ತರು ಯಾವುದಕ್ಕೂ ಎದೆ ಗುಂದದೆ ಮುನ್ನುಗ್ಗಿ ಕೆಲಸ ಮಾಡಿ ನಿಮ್ಮ ಲೇಖನಿ ಮೂಲಕ ಸುಧಾರಣೆಯ ಕ್ರಾಂತಿ ತನ್ನಿ ಸಮಾಜ ಬದಲಾವಣೆ ಯಾಗಬೇಕು ಭ್ರಷ್ಟಚಾರ ಮುಕ್ತ ವಾಗಬೇಕು ನೀವು ಕಾನೂನು ಬದ್ದವಾಗಿ ಕೆಲಸ ಮಾಡಿ ದಿನದ 24ಗಂಟೆ ನಿಮ್ಮ ಜೊತೆಗಿರುತ್ತೇವೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯಧ್ಯಕ್ಷ ಚೆನ್ನಯ್ಯ ಮ ವಸ್ತ್ರದ್ ಮಾತನಾಡಿದರು.

 

 

ಈ ಸಂಧರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಟಿ.ಎಚ್.ಎಂ ರಾಜಕುಮಾರ, ವಿಜಯನಗರ ಜಿಲ್ಲಾಧ್ಯಕ್ಷರು ರಾಮಕೃಷ್ಣ ಕಣವೇಹಳ್ಳಿ, ಕಲಬುರ್ಗಿ ಜಿಲ್ಲಾಧ್ಯಕ್ಷ ರಾಜೇಂದ್ರ ಪ್ರಸಾದ್, ಜೇವರ್ಗಿ ತಾಲೂಕು ಅಧ್ಯಕ್ಷ ವಿರೇಶ್ ಮಠಪತಿ, ಸೇರಿದಂತೆ ವಿವಿಧ ತಾಲೂಕು ಜಿಲ್ಲೆಗಳ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

 

ರಾಜಕುಮಾರ ಚೌಹಾಣ್ ಜೊತೆ ರಾಜೇಂದ್ರ ಪ್ರಸಾದ್ ಜೆಕೆ ನ್ಯೂಸ್ ಕನ್ನಡ ಕಲಬುರ್ಗಿ

error: Content is protected !!